F14 5G: 6,000mAh ಬ್ಯಾಟರಿ ಸ್ಮಾರ್ಟ್‌ಫೋನ್ ಮಾ.24ರಂದು ಬಿಡುಗಡೆ ನವದೆಹಲಿ: ದೇಶದ ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆ ಸ್ಯಾಮ್‌ಸಂಗ್, ಮಗದೊಂದು ಅತ್ಯಾಕರ್ಷಕ ಗ್ಯಾಲಕ್ಸಿ ಎಫ್14 5ಜಿ ಸ್ಮಾರ್ಟ್‌ಫೋನ್ ದೇಶದ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧವಾಗಿದೆ. ಯಾವಾಗ ಬಿಡುಗಡೆ? ಮಾರ್ಚ್ 24. ಮುಖ್ಯಾಂಶ: 5ಜಿ ಸ್ಮಾರ್ಟ್‌ಫೋನ್ (13 5ಜಿ ಬ್ಯಾಂಡ್), 6,000mAh ಬ್ಯಾಟರಿ. ವೈಶಿಷ್ಟ್ಯತೆ: 6.6 ಇಂಚಿನ ಫುಲ್ + ಡಿಸ್‌ಪ್ಲೇ, ಪವರ್‌ಫುಲ್ ಎಕ್ಸಿನಾಸ್ 1330 5nm ಚಿಪ್‌ಸೆಟ್ (ಪ್ರೊಸೆಸರ್), ಆಂಡ್ರಾಯ್ಡ್ 13 (ಯುಐ 5) ಬೆಲೆ ಎಷ್ಟು? ಬೆಲೆ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ. ಮಾರುಕಟ್ಟೆ ಮೂಲಗಳ ಪ್ರಕಾರ ಸರಿ ಸುಮಾರು ₹17,000ಕ್ಕೆ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯಿದೆ. ಲಭ್ಯತೆ ? ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್ ಡಾಟ್ ಕಾಮ್, ಇತರೆ ರಿಟೇಲ್ ಮಳಿಗೆ. *ನಾಲ್ಕು ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್, ಎರಡು ಜನರೇಷನ್ ಆಪರೇಟಿಂಗ್ ಸಿಸ್ಟಂ ಅಪ್‌ಡೇಟ್ ಸೇವೆಯನ್ನು ಹೊಂದಿರಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.