16GB , 32MP ಸೆಲ್ಫಿ ಕ್ಯಾಮೆರಾ: ಟೆಕ್‌ನೋ ಬಜೆಟ್ ಫೋನ್ ಬಿಡುಗಡೆ ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಫೀಚರ್‌ ಒದಗಿಸುವ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿರುವ ಟೆಕ್‌ನೋ ಮೊಬೈಲ್ ಇಂಡಿಯಾ ಸಂಸ್ಥೆಯು ಟೆಕ್‌ನೋ ಸ್ಪಾರ್ಕ್ 10 ಯೂನಿವರ್ಸ್ ಸರಣಿಯಲ್ಲಿ ಅತಿ ನೂತನ ಸ್ಪಾರ್ಕ್‌ 10 ಪ್ರೊ ಮಾರುಕಟ್ಟೆಗೆ ಪರಿಚಯಿಸಿದೆ. ಟೆಕ್‌ನೋ ಸ್ಪಾರ್ಕ್ 10 ಯೂನಿವರ್ಸ್ ನಾಲ್ಕು ಮಾದರಿಗಳನ್ನು ಒಳಗೊಂಡಿರಲಿದೆ. ಅಲ್ಲದೆ ಸ್ಪಾರ್ಕ್ 9 ಸರಣಿಯ ಅಪ್‌ಗ್ರೇಡ್ ಆಗಿರಲಿದೆ. ಸ್ಪಾರ್ಕ್ 10 ಪ್ರೊ, ಸ್ಪಾರ್ಕ್ 10 5ಜಿ, ಸ್ಪಾರ್ಕ್ 10ಸಿ ಮತ್ತು ಸ್ಪಾರ್ಕ್ 10. ಟೆಕ್‌ನೋ ಸ್ಪಾರ್ಕ್‌ 10 ಪ್ರೊ ಬೆಲೆ ಎಷ್ಟು? ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಟೆಕ್‌ನೋ ಸ್ಪಾರ್ಕ್ 10 ಪ್ರೊ ಸ್ಮಾರ್ಟ್‌ಫೋನ್ ₹12,499 ಬೆಲೆಗೆ ಲಭ್ಯವಾಗಲಿದೆ. ಈ ಸೆಗ್ಮೆಂಟ್‌ನಲ್ಲಿ ಇದೇ ಮೊದಲ ಬಾರಿಗೆ 16GB ಹಾಗೂ 32MP ಸೆಲ್ಪಿ ಕ್ಯಾಮೆರಾ ಫೀಚರ್‌ ಹೊಂದಿದ ಸ್ಮಾರ್ಟ್‌ಫೋನ್ ಇದಾಗಿದೆ. ವೈಶಿಷ್ಟ್ಯಗಳು: 16GB , ಮೆಮರಿ ಫ್ಯೂಶನ್ ತಂತ್ರಜ್ಞಾನ 2.1 , 128GB , 50MP ಎಐ ಕ್ಯಾಮೆರಾ, 32MP ಅಲ್ಟ್ರಾ ಕ್ಲಿಯರ್ ಫ್ರಂಟ್ ಕ್ಯಾಮೆರಾ. 6.78" + ಡಿಸ್‌ಪ್ಲೇ 5000mAh ಬ್ಯಾಟರಿ, ಜಿ88 ಗೇಮಿಂಗ್ ಪ್ರೊಸೆಸರ್, 10 - ' 16GB * 32MP 12,499 !! , 24th!# #Spark10Pro #Spark10Universe ../ZAgshwbEv8 ಬಣ್ಣಗಳು: ಲೂನರ್ ಎಕ್ಲಿಪ್ಸ್, ಪಿಯರ್ಲ್ ವೈಟ್, ಸ್ಟಾರಿ ಬ್ಲ್ಯಾಕ್. ಲಭ್ಯತೆ... ಮಾಚ್ 24ರಿಂದ ಟೆಕ್‌ನೋ ಸ್ಪಾರ್ಕ್ 10 ಪ್ರೊ ಖರೀದಿಗೆ ಲಭ್ಯವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.