ಎಚ್‌ಪಿ: 3ಡಿ ತಂತ್ರಜ್ಞಾನದ ಪ್ರಿಂಟರ್ ಬಿಡುಗಡೆ ಬೆಂಗಳೂರು: ಎಚ್‍ಪಿ ಕಂಪನಿಯು ತನ್ನ ಹೊಸ ಜೆಟ್ ಫ್ಯೂಷನ್ 300/500 ಸರಣಿಯ 3ಡಿ ಪ್ರಿಂಟರ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ‘ಇದು ಕಂಪನಿಯ ಮೊದಲ 3ಡಿ ಪ್ರಿಂಟಿಂಗ್ ತಂತ್ರಜ್ಞಾನವಾಗಿದ್ದು, ಎಂಜಿನಿಯರಿಂಗ್ ದರ್ಜೆಯ, ಉತ್ತಮ ಕಾರ್ಯಕ್ಷಮತೆಯುಳ್ಳ, ಕ್ಷಣಮಾತ್ರದಲ್ಲಿ ಸಂಪೂರ್ಣ ಬಣ್ಣ, ಕಪ್ಪು ಅಥವಾ ಬಿಳುಪಿನಲ್ಲಿ ಮುದ್ರಣ ಮಾಡುವ ಸೌಲಭ್ಯ ಒಳಗೊಂಡಿದೆ. ಸಾಂಪ್ರದಾಯಿಕ ತಯಾರಿಕಾ ಕ್ಷೇತ್ರದಲ್ಲಿದ್ದ ಮಿತಿಗಳಿಂದ ಹೊರಬಂದು, ಕ್ಷಿಪ್ರ ಮತ್ತು ದಕ್ಷ ರೀತಿಯಲ್ಲಿ ಹೊಸ ಉತ್ಪನ್ನಗಳನ್ನು ತಯಾರಿಸಲು ಈ 3ಡಿ ಪ್ರಿಂಟಿಂಗ್ ತಂತ್ರಜ್ಞಾನದ ಪ್ರಿಂಟರ್ ನೆರವಾಗಲಿದೆ’ ಎಂದು ಎಚ್‍ಪಿ ಇಂಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸುಮೀರ್ ಚಂದ್ರ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.