A05: 4GB+128 ಸಾಮರ್ಥ್ಯದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಗುರುಗ್ರಾಮ: ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ ಸರಣಿಯ A05s ಸ್ಮಾರ್ಟ್‌ಫೋನ್‌ನ 4GB+128 ಸ್ಟೋರೇಜ್ ಸಾಮರ್ಥ್ಯದ ಪೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ₹ 12,499 ದರ ನಿಗದಿಪಡಿಸಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ 6GB+128GB ಸಾಮರ್ಥ್ಯದ ಸ್ಟೋರೇಜ್‌ನಲ್ಲಿ, ತಿಳಿ ಹಸಿರು, ತಿಳಿ ನೇರಳೆ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಇದಕ್ಕೆ ಈಗ ಕಡಿಮೆ ಸ್ಟೋರೇಜ್ ಸಾಮರ್ಥ್ಯದ ಫೋನ್ ಸೇರ್ಪಡೆಯಾಗಲಿದೆ. 50 ಎಂಪಿ ಸಾಮರ್ಥ್ಯದ ತ್ರಿಪಲ್‌ ಕ್ಯಾಮೆರಾ ಸೆಟಪ್ ಇರುವ ಈ ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಗುಣಮಟ್ಟದ ಚಿತ್ರ ತೆಗೆಯಬಹುದಾಗಿದೆ. 2 ಎಂಪಿ ಡೆಪ್ತ್ ಹಾಗೂ 2 ಎಂಪಿ ಮ್ಯಾಕ್ರೋ ಕ್ಯಾಮೆರಾಗಳು ಫೋಟೋಗ್ರಫಿಯನ್ನು ಇನ್ನಷ್ಟು ಉತ್ಕೃಷ್ಠವಾಗಿಸಲಿದೆ. ಸೆಲ್ಫಿ ಕ್ಯಾಮೆರಾ ಸಾಮರ್ಥ್ಯ 13 ಎಂಪಿ ಇದೆ. 6.71 ಇಂದು ಫುಲ್‌ ಎಚ್‌ಡಿ + 90Hz ಸ್ಕ್ರೀನ್‌ ಇದ್ದು, ಉತ್ತಮ ವೀಕ್ಷಣೆ ಅನುಭವ ಪಡೆಯಬಹುದಾಗಿದೆ. 5000 ಬ್ಯಾಟರಿ ಸಾಮರ್ಥ್ಯ ಹಾಗೂ 25W ಸೂಪರ್ ಫಾಸ್ಟ್ ಚಾರ್ಜಿಂಗ್‌ ವ್ಯವಸ್ಥೆ ಇದೆ. 6nm 680 ಪ್ರೊಸೆಸರ್‌ ಬಳಕೆ ಅನುಭವವನ್ನು ನವಿರಾಗಿಸಲಿದೆ. A05s: 6+128 – ₹ 14,999 A05s: 4+128 – ₹ 13,499 ಸ್ಯಾಮ್‌ಸಂಗ್‌ನ ಎಲ್ಲಾ ಎಕ್ಸ್‌ಕ್ಲೂಸಿವ್ ಹಾಗೂ ರಿಟೈಲ್ ಸ್ಟೋರ್‌ಗಳಲ್ಲಿ, . ಹಾಗೂ ಆನ್‌ಲೈನ್‌ ಶಾಪಿಂಗ್‌ ಆ್ಯಪ್‌ಗಳಲ್ಲಿ ಲಭ್ಯವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.