₹2,599ಕ್ಕೆ ಜಿಯೊಫೋನ್‌ ಪ್ರೈಮಾ ಬೆಂಗಳೂರು: ರಿಲಯನ್ಸ್‌ ಜಿಯೊ ಕಂಪನಿಯು ‘ಜಿಯೊಫೋನ್‌ ಪ್ರೈಮಾ’ ಎನ್ನುವ 4ಜಿ ಫೋನ್‌ ಬಿಡುಗಡೆ ಮಾಡಿದೆ. ₹2,599ಕ್ಕೆ ಈ ಫೋನ್‌ ಲಭ್ಯವಿದೆ. ಈ ಫೋನ್ ನಿಂದ ಕಾರ್ಯಾಚರಿಸುತ್ತದೆ. ಯುಟ್ಯೂಬ್, ಫೇಸ್‌ಬುಕ್, ವಾಟ್ಸ್‌ಆ್ಯಪ್‌, ಗೂಗಲ್ ವಾಯ್ಸ್ ಅಸಿಸ್ಟೆಂಟ್‌ನಂತಹ ವೈಶಿಷ್ಟ್ಯಗಳ ಈ ಫೋನ್‌ನಲ್ಲಿ ಇವೆ. 2.4 ಇಂಚಿನ ಪರದೆ, 1800 ಎಂಎಎಚ್‌ ಬ್ಯಾಟರಿಯನ್ನು ಇದು ಒಳಗೊಂಡಿದೆ ಎಂದು ಕಂಪನಿ ಹೇಳಿದೆ. ಜಿಯೊ ಟಿವಿ, ಜಿಯೊ ಸಿನಿಮಾ ತರಹದ ಪ್ರೀಮಿಯಂ ಡಿಜಿಟಲ್ ಸೇವೆಗಳೊಂದಿಗೆ ಈ ಫೋನ್‌ ಸಿದ್ಧವಾಗಿದೆ. ಜಿಯೊಪೇ ಮೂಲಕ ಯುಪಿಐ ಪಾವತಿ ಮಾಡಬಹುದು. ಅಮೆಜಾನ್‌, ಜಿಯೊಮಾರ್ಟ್‌ ಮತ್ತು ರಿಲಯನ್ಸ್‌ ಡಿಜಿಟಲ್‌ನಲ್ಲಿ ಈ ಫೋನ್‌ ಖರೀದಿಸಬಹುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.