ಅನುವಾದಿಸಲು ಗೂಗಲ್‌ಗೆ ನೆರವಾಗಿ ಯಾವುದೇ ಭಾಷೆಯಿರಲಿ ಆ ಭಾಷೆ ನಮಗೆ ಅರ್ಥವಾಗದೇ ಇದ್ದರೆ ಅದರ ಅನುವಾದ ಏನು ಎಂಬುದನ್ನು ಅರಿಯಲು ನಾವು ಗೂಗಲ್ ಮೊರೆ ಹೋಗುವುದು ಸಹಜ. ಗೂಗಲ್ ಟ್ರಾನ್ಸ್‌ಲೇಟ್ ಓಪನ್ ಮಾಡಿದರೆ ಯಾವುದೇ ಭಾಷೆಯ ಪದಗಳನ್ನು ನಮ್ಮ ಭಾಷೆಗೆ ಅನುವಾದ ಮಾಡಿಕೊಂಡು ಅದರ ಅರ್ಥ ತಿಳಿದುಕೊಳ್ಳಬಹುದು. ಈ ರೀತಿ ಗೂಗಲ್ ಟ್ರಾನ್ಸ್‌ಲೇಟರ್‌ನ ಮೊರೆ ಹೋದಾಗ ಕೆಲವೊಂದು ವಾಕ್ಯಗಳು ಸರಿಯಾಗಿ ಅನುವಾದವಾಗಿರುವುದಿಲ್ಲ. ಇಂಗ್ಲಿಷ್‌ನಲ್ಲಿರುವ ಒಂದು ವಾಕ್ಯವನ್ನು ಕನ್ನಡಕ್ಕೆ ಅನುವಾದ ಮಾಡಿದಾಗ ಕೆಲವು ಪದಗಳ ಅರ್ಥವೇ ಬದಲಾಗಿರುತ್ತದೆ. ಈ ರೀತಿಯ ಅನುವಾದಗಳು ಕಂಡು ಬಂದಾಗ ನಾವು ಗೂಗಲ್‌ ಅನ್ನು ದೂರುವ ಬದಲು ಗೂಗಲ್ ಅನುವಾದಕ್ಕೆ ನಮ್ಮಿಂದಾದ ಸಹಕಾರವನ್ನು ಮಾಡಬಹುದು. ಗೂಗಲ್‌ಗೆ ಅನುವಾದ ಮಾಡಲು ಸಹಕರಿಸಿ 1. ://.. ಲಿಂಕ್ ಕ್ಲಿಕ್ ಮಾಡಿ 2.ಗೂಗಲ್ ಖಾತೆಗೆ ಲಾಗಿನ್ ಆಗಿ 3. ಯಾವ ಭಾಷೆಗೆ ಅನುವಾದ ಮಾಡಲು ನಿಮಗೆ ಇಷ್ಟವೋ, ಆ ಭಾಷೆಯ ಮೇಲೆ ನಿಮಗೆ ಹಿಡಿತ ಇದ್ದರೆ ಆ ಭಾಷೆಯನ್ನು ಆಯ್ಕೆ ಮಾಡಿ. ಉದಾಹರಣೆಗೆ ಕನ್ನಡ ಭಾಷೆ ನಿಮಗೆ ತಿಳಿದಿದ್ದರೆ ಇಂಗ್ಲಿಷ್‌ನಿಂದ ಕನ್ನಡ ಭಾಷೆ ಅನುವಾದ ಮಾಡಲು ಸಹಕರಿಸಬಹುದು. 4. ಕ್ಲಿಕ್ ಮಾಡಿ 5.ಇಲ್ಲಿ ನಿಮಗೆ ಗೂಗಲ್ ಕೆಲವು ವಾಕ್ಯಗಳನ್ನು ನೀಡುತ್ತದೆ. ಅದನ್ನು ಕನ್ನಡಕ್ಕೆ ಅನುವಾದ ಮಾಡಿ. ನಿಮಗೆ ಆ ವಾಕ್ಯವನ್ನು ಅನುವಾದ ಮಾಡಲು ಸಾಧ್ಯವಾಗದೇ ಇದ್ದರೆ ಮಾಡಿ ಮುಂದಿನ ವಾಕ್ಯವನ್ನು ಅನುವಾದ ಮಾಡಬಹುದು. 6. ಪ್ರತಿ ಬಾರಿ 10 ವಾಕ್ಯಗಳನ್ನು ಅನುವಾದ ಮಾಡುವ ಕೆಲಸವನ್ನು ಗೂಗಲ್ ನಿಮಗೆ ನೀಡುತ್ತದೆ. ಅದರಲ್ಲಿ ನಿಮಗೆ ಎಷ್ಟು ಸಾಧ್ಯವೋ ಅಷ್ಟು ವಾಕ್ಯಗಳನ್ನು ಅನುವಾದ ಮಾಡಬಹುದು. ಹೀಗೆ ನೂರು ವಾಕ್ಯಗಳನ್ನು ಅನುವಾದ ಮಾಡಿದರೆ ಸಿಗುತ್ತದೆ. ಅನುವಾದ ತಪ್ಪಾಗಿದ್ದರೆ ತಿದ್ದಿ ಕೆಲವೊಂದು ಅನುವಾದಗಳು ತಪ್ಪಾಗಿ ಇರುತ್ತವೆ. ಉದಾಹರಣೆಗೆ ಎಂಬುದನ್ನು ಗೂಗಲ್ ಟ್ರಾನ್ಸ್ ಲೇಟ್ ಅನುವಾದ ಮಾಡಿದರೆಸಿಗರೆಟ್ ಧೂಮಪಾನ ಆರೋಗ್ಯಕ್ಕೆ ಹಾನಿಯಾಗಿದೆ ಎಂಬ ವಾಕ್ಯ ಸಿಗುತ್ತದೆ. ಇಲ್ಲಿ ವಾಕ್ಯ ರಚನೆ ಸರಿಯಾಗಿಲ್ಲ. ಅದನ್ನು ನಾವೇ ತಿದ್ದಿ ಸರಿ ಮಾಡಬಹುದು. ಕನ್ನಡ ಅನುವಾದದ ಬಾಕ್ಸ್‌ನಲ್ಲಿ ಕೆಳಗೆ ಎಂದು ಕಾಣುತ್ತದೆ. ಅಲ್ಲಿ ಕ್ಲಿಕ್ ಮಾಡಿ ಸರಿಯಾದ ಅನುವಾದವನ್ನು ಟೈಪ್ ಮಾಡಿ ಒತ್ತಿದರೆ ಸಾಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.