ನೀವು ವೀಕ್ಷಿಸಿದ ವಾಟ್ಸ್‌ಆ್ಯಪ್ ಸ್ಟೇಟಸ್ ಸೇವ್ ಮಾಡಿ ವಾಟ್ಸ್‌ಆ್ಯಪ್‌ನಲ್ಲಿ ನಮ್ಮ ಗೆಳೆಯರು ಶೇರ್ ಮಾಡಿರುವ ಫೋಟೊಗಳು ಅಥವಾ ನಿಮಗೆ ಇಷ್ಟವಾಗಿರುತ್ತದೆ. ಅದು ನಿಮಗೆ ಬೇಕು ಎಂದೆನಿಸಿದರೆ ತಕ್ಷಣ ಮಾಡುವ ಕೆಲಸ ಅದರ ಸ್ಕ್ರೀನ್‌ಶಾಟ್ ತೆಗೆದುಕೊಂಡು ಸೇವ್ ಮಾಡಿಟ್ಟುಕೊಳ್ಳುವುದು. ಕೆಲವೊಮ್ಮೆ ಹಲವಾರು ಸ್ಟೇಟಸ್‌ಗಳ ನಡುವೆ ನಿರ್ದಿಷ್ಟ ಒಂದು ಫೋಟೊ ಮಾತ್ರ ಬೇಕಾಗಿರುತ್ತದೆ ಅಥವಾ ಅದರ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ನೀವು ಮರೆತಿರುತ್ತೀರಿ. ಹೀಗಿರುವಾಗ ನೀವು ನೋಡಿದ ಸ್ಟೇಟಸ್ ನಿಮಗೆ ಮತ್ತೆ ಬೇಕು ಎಂದರೆ ಏನು ಮಾಡುವುದು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಉತ್ತರ . ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.ಆ್ಯಪ್ ಓಪನ್ ಮಾಡಿದ ಕೂಡಲೇ ನಿಮ್ಮ ಫೋನ್‌ನಲ್ಲಿ ಲಿಂಕ್ ಆಗಿರುವ ಗೂಗಲ್ ಖಾತೆಯೊಂದಿಗೆ ನಿಮ್ಮ ಖಾತೆ ಡಿಸ್‌ಪ್ಲೇ ಆಗುತ್ತದೆ.ಕೆಳಗೆ ಸ್ಕ್ರಾಲ್ ಮಾಡಿದರೆ ಎಂಬ ಆಪ್ಶನ್ ಇರುತ್ತದೆ. ಅದನ್ನು ಎನೇಬಲ್ ಮಾಡಿ.ಬ್ಯಾಕ್ ಬಟನ್ ಕ್ಲಿಕ್ ಮಾಡಿ pageಗೆ ಬನ್ನಿ. ಅಲ್ಲಿ ಕೆಳಗೆ ಎಂದಿರುತ್ತದೆ. ಕ್ಲಿಕ್ ಮಾಡಿ. ಅಲ್ಲಿ ವಾಟ್ಸ್‌ಆ್ಯಪ್ ಎಂಬ ಫೋಲ್ಡರ್ ಕಾಣುತ್ತದೆ. ಕ್ಲಿಕ್ ಮಾಡಿ. ಅಲ್ಲಿಯೇ ಮೀಡಿಯಾ ಎಂಬ ಪೋಲ್ಡರ್ ಕ್ಲಿಕ್ ಮಾಡಿದ ಕೂಡಲೇ ಕಾಣುತ್ತದೆ. ಇಲ್ಲಿ ಕ್ಲಿಕ್ ಮಾಡಿದ ಕೂಡಲೇ ನೀವು ವೀಕ್ಷಿಸಿದ್ದ ನಿಮ್ಮ ಗೆಳೆಯರ ವಾಟ್ಸ್‌ಆ್ಯಪ್ ಸ್ಟೇಟಸ್ ಕಾಣುತ್ತದೆ. ನಿರ್ದಿಷ್ಟ ಫೋಟೊ ಮುಂದೆ ಡ್ರಾಪ್‌ಡೌನ್ ಮೆನುವಿನಲ್ಲಿ ಸೆಲೆಕ್ಟ್, ಶೇರ್ , ಡಿಲೀಟ್ ಸೇರಿದಂತೆ ಹಲವಾರು ಆಪ್ಶನ್‌ಗಳು ಕಾಣಿಸುತ್ತವೆ. ಇಲ್ಲಿ ನಿರ್ದಿಷ್ಟ ಫೋಟೊವನ್ನು ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡಿಕೊಳ್ಳಬಹುದು. ಒಂದಕ್ಕಿಂತ ಹೆಚ್ಚು ಫೋಟೊಗಳನ್ನು ಸೆಲೆಕ್ಟ್ ಮಾಡಿ ಬೇರೆ ಫೋಲ್ಟರ್‌ಗೆ ವರ್ಗಾಯಿಸಬಹುದು. ನೀವು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ ಅಥವಾ ಸ್ವೀಕರಿಸಿದ ಫೋಟೊಗಳು ವಾಟ್ಸ್‌ಆ್ಯಪ್ ಇಮೇಜ್ ಫೋಲ್ಡರ್‌ನಲ್ಲಿ ಸೇವ್ ಆಗಿರುತ್ತದೆ.ಅದೇ ರೀತಿ pageನ ಕೆಳಗಡೆ ಎಂಬ ಆಪ್ಶನ್ ಇದೆ. ನಿಮ್ಮ ಮೊಬೈಲ್‌ನಲ್ಲಿರುವ ಅನಗತ್ಯ ಫೋಟೊ ಅಥವಾ ಫೈಲ್‌ಗಳನ್ನು ಈ ಮೂಲಕವೂ ಡಿಲೀಟ್ ಮಾಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.