ವಿಪ್ರೋ ಸಿಇಒ ಸ್ಥಾನದಿಂದ ನಿರ್ಗಮಿಸಲು ಅಬಿದ್‌ ಅಲಿ ನೀಮುಚ್‌ವಾಲಾ ತೀರ್ಮಾನ ನವದೆಹಲಿ: ವಿಪ್ರೋ ಸಂಸ್ಥೆಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅಬಿದ್‌ ಅಲಿ ನೀಮುಚ್‌ವಾಲಾ ಅವರು ಅಧಿಕಾರದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ಶುಕ್ರವಾರ ಕಂಪನಿಯು ತಿಳಿಸಿದೆ. ವಿಪ್ರೋ ಸಂಸ್ಥೆಗೆ ನೂತನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರ ಆಯ್ಕೆ ಆಗುವವರೆಗೆ 52 ವರ್ಷದ ಅಬಿದ್‌ ಅಲಿ ಅವರು ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ. : . ../FnGN8717fB ‘ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಬಿದ್‌ ಅಲಿ ನೀಮುಚ್‌ವಾಲಾ ಅವರು ಕೌಟುಂಬಿಕ ಕಾರಣಕ್ಕಾಗಿ ತಮ್ಮ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ’ ಎಂದು ವಿಪ್ರೋ ಸ್ಪಷ್ಟಪಡಿಸಿದೆ. ‘ನೀಮುಚ್‌ವಾಲಾ ಅವರ ನಾಯಕತ್ವ ಮತ್ತು ಅವರು ವಿಪ್ರೊ ಸಂಸ್ಥೆಗೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಧನ್ಯವಾದ ತಿಳಿಸುತ್ತೇವೆ. ಅವರು ಜಾಗತಿಕವಾಗಿ ನಮ್ಮ ಡಿಜಿಟಲ್ ವ್ಯವಹಾರವನ್ನು ಹೆಚ್ಚಿಸಿದರು’ಎಂದು ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜೀ ಹೇಳಿದ್ದಾರೆ. ಬಜೆಟ್ ಮಾಹಿತಿಗೆ: ../-2020 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.