‘ಜಿಸ್ಯಾಟ್–30’ ಯಶಸ್ವಿ ಉಡಾವಣೆ: 2020ರಲ್ಲಿ ಇಸ್ರೊ ಶುಭಾರಂಭ ಬೆಂಗಳೂರು:ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೊದ ನೂತನ ‘ಹೈಪವರ್ ಕಮ್ಯುನಿಕೇಷನ್ ಉಪಗ್ರಹಜಿಸ್ಯಾಟ್–30’ಯನ್ನು ಫ್ರೆಂಚ್ ಗಯಾನಾದಿಂದ ಶುಕ್ರವಾರ ನಸುಕಿನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ‘ಜಿಸ್ಯಾಟ್–30ಯನ್ನು ಫ್ರೆಂಚ್ ಗಯಾನಾದ ಕಾರೌ ಉಡಾವಣಾ ನೆಲೆಯಿಂದ ‘ಏರಿಯಾನ್–5 ವಿಎ–251’ ಉಡಾಹಕದ ಮೂಲಕ ಇಂದು ಬೆಳಿಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು’ ಎಂದು ಇಸ್ರೊ ಟ್ವೀಟ್ ಮಾಡಿದೆ. #Ariane5 #VA251 #GSAT30 ../ ದೂರದರ್ಶನ ಪ್ರಸಾರ, ಡಿಟಿಎಚ್, ಟೆಲಿಕಮ್ಯುನಿಕೇಷನ್ಸ್‌ ಮತ್ತು ಪ್ರಸಾರ ಕ್ಷೇತ್ರದ ಸೇವೆಗಳ ಗುಣಮಟ್ಟ ಹೆಚ್ಚಿಸಲು‘ಜಿಸ್ಯಾಟ್–30’ ನೆರವಾಗಲಿದೆ. ಯಶಸ್ವಿ ಉಡಾವಣೆಗಾಗಿ ಇಸ್ರೊ ಮತ್ತುಏರಿಯಾನ್‌ಸ್ಪೇಸ್ ತಂಡವನ್ನು ಇಸ್ರೊದ ಯು.ಆರ್.ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ, ಸದ್ಯಕಾರೌದಲ್ಲಿರುವ ಪಿ. ಕುಞ್ಞಿಕೃಷ್ಣನ್ ಅಭಿನಂದಿಸಿದ್ದಾರೆ. ಇದು 2020ರ ಅದ್ಭುತ ಆರಂಭ ಎಂದು ಅವರು ಬಣ್ಣಿಸಿದ್ದಾರೆ. ಈವರ್ಷಇಸ್ರೊ ಉಡಾವಣೆ ಮಾಡಿದ ಮೊದಲ ಉಪಗ್ರಹ ಇದಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.