ಆ್ಯಪಲ್ –14 ಬಿಡುಗಡೆ: ಯಾವೆಲ್ಲ ಡಿವೈಸ್‌ಗಳಿಗೆ ಅಪ್‌ಡೇಟ್ ಲಭ್ಯ? ಆ್ಯಪಲ್‌ನ ಹೊಸ ಆಪರೇಟಿಂಗ್‌ ಸಿಸ್ಟಂ ಐಒಎಸ್-14 ( 14), ಐಪಾಡ್‌ಒಎಸ್–14 (14 ) ಬಿಡುಗಡೆಯಾಗಿದ್ದು ಬಳಕೆಗೆ ಲಭ್ಯವಿದೆ. ಇದೀಗ ಐಫೋನ್ ಬಳಕೆದಾರರೂ ಆಂಡ್ರಾಯ್ಡ್ ಸಾಧನಗಳಲ್ಲಿನ ಸೌಕರ್ಯಗಳನ್ನು ಹೋಲುವ ವೈಶಿಷ್ಟ್ಯಗಳನ್ನೊಳಗೊಂಡ ಐಒಎಸ್-14 ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಹೋಂ ಸ್ಕ್ರೀನ್‌ನಲ್ಲಿ ಆ್ಯಪ್‌ಗಳನ್ನು ಬೇಕಾದ ಕಡೆ ಸರಿಸುವುದು, ಆ್ಯಪ್‌ಗಳನ್ನು ಒಟ್ಟು ಸೇರಿಸಿ ಪ್ರತ್ಯೇಕ ಗುಂಪು ರಚಿಸುವುದೂ ಸೇರಿದಂತೆ ಹಲವು ಆಯ್ಕೆಗಳುಳ್ಳ ಐಒಎಸ್-14 ಬಿಡುಗಡೆ ಮಾಡುವ ಬಗ್ಗೆ ಜೂನ್‌ನಲ್ಲಿ ನಡೆದ ವಾರ್ಷಿಕ ಡೆವಲಪರ್ಸ್ ಸಮಾವೇಶದಲ್ಲಿ ( 2020) ಆ್ಯಪಲ್ ಘೋಷಿಸಿತ್ತು. ಕಳೆದ ವರ್ಷ ಐಒಎಸ್-13 ಅನ್ನು ಬಿಡುಗಡೆ ಮಾಡಿದ್ದ ಆ್ಯಪಲ್, ಇದು ಐಫೋನ್ 6ಎಸ್‌, ಐಫೋನ್ ಎಸ್‌ಇ(2016) ಮತ್ತು ಹೊಸ ಮಾದರಿಯ ಡಿವೈಸ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ಹೇಳಿತ್ತು. ಹಾಗಿದ್ದರೆ, ಈಗ ಹೊಸ ಐಒಎಸ್-14 ಅಪ್‌ಡೇಟ್ ಯಾವೆಲ್ಲ ಡಿವೈಸ್‌ಗಳಿಗೆ ಲಭ್ಯ? ಇಲ್ಲಿದೆ ಮಾಹಿತಿ: ಐಒಎಸ್-14 ವಿಶೇಷಗಳೇನು? ಓದಿ:ಆಂಡ್ರಾಯ್ಡ್ ಅನುಸರಿಸುತ್ತಿದೆ ಆ್ಯಪಲ್! * ಐಫೋನ್ 11, 11 ಪ್ರೊ, 11 ಪ್ರೊ ಮ್ಯಾಕ್ಸ್ * ಐಫೋನ್ ಎಕ್ಸ್‌ಎಸ್ & ಎಕ್ಸ್‌ಎಸ್ ಮ್ಯಾಕ್ಸ್ * ಐಫೋನ್ ಎಕ್ಸ್‌ಆರ್ * ಐಫೋನ್ ಎಕ್ಸ್‌ * ಐಫೋನ್ 8 * ಐಫೋನ್ 8 ಪ್ಲಸ್ * ಐಫೋನ್ 7 * ಐಫೋನ್ 7 ಪ್ಲಸ್ * ಐಫೋನ್ 6ಎಸ್‌ * ಐಫೋನ್ 6ಎಸ್‌ ಪ್ಲಸ್ * ಐಫೋನ್ ಎಸ್‌ಇ (2020) * ಐಫೋನ್ 6ಎಸ್‌ಇ (2016) * ಐಪಾಡ್‌ ಟಚ್ (7th ) * 12.9 ಇಂಚ್ ಐಪಾಡ್‌ ಪ್ರೊ * 11 ಇಂಚ್ ಐಪಾಡ್‌ ಪ್ರೊ * 10.5 ಇಂಚ್ ಐಪಾಡ್‌ ಪ್ರೊ * 9.7 ಇಂಚ್ ಐಪಾಡ್‌ ಪ್ರೊ * ಐಪಾಡ್‌ (6th ) * ಐಪಾಡ್‌ (5th ) * ಐಪಾಡ್‌ ಮಿನಿ (5th ) * ಐಪಾಡ್‌ ಮಿನಿ 4 * ಐಪಾಡ್‌ ಏರ್ (3rd ) * ಐಪಾಡ್‌ ಏರ್ 2 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.