2021: ಇಂದಿನಿಂದ ಆ್ಯಪಲ್ ಆನ್‌ಲೈನ್ ಸಮಾವೇಶ ಬೆಂಗಳೂರು: ಗ್ಯಾಜೆಟ್ ಲೋಕದ ಜನಪ್ರಿಯ ಕಂಪನಿ ಆ್ಯಪಲ್ ಸೋಮವಾರ ಜಾಗತಿಕ ಡೆವಲಪರ್‌ಗಳ ಸಮ್ಮೇಳನ ನಡೆಸುತ್ತಿದೆ. ಕಳೆದ ವರ್ಷದಂತೆ, ಈ ಬಾರಿಯೂ ವರ್ಚುವಲ್ ಸಮಾವೇಶ ನಡೆಯುತ್ತಿದೆ. ಜಾಗತಿಕ ತಂತ್ರಜ್ಞರ ಸಮಾವೇಶದಲ್ಲಿ ಆ್ಯಪಲ್ ಹಲವು ಹೊಸ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ. ನೂತನ ಐಓಎಸ್, ಮ್ಯಾಕ್ ಓಎಸ್, ಆ್ಯಪಲ್ ವಾಚ್ ಮತ್ತು ಐಪ್ಯಾಡ್ ಓಎಸ್‌ಗಳನ್ನು ಆ್ಯಪಲ್ ಈ ಸಂದರ್ಭದಲ್ಲಿ ಪರಿಚಯಿಸಲಿದೆ. ಅಲ್ಲದೆ, ಹೊಸ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವ ತಂತ್ರಜ್ಞರೊಂದಿಗೆ ಆ್ಯಪಲ್ ಸಂವಾದ ನಡೆಸಲಿದೆ. ಉಳಿದಂತೆ, ನೂತನ ಸರಣಿಯ ಗ್ಯಾಜೆಟ್‌ಗಳನ್ನು ಕೂಡ ಆ್ಯಪಲ್ ಬಿಡುಗಡೆ ಮಾಡುವ ನಿರೀಕ್ಷೆಯಿದ್ದು, ಐಪ್ಯಾಡ್ ಮಿನಿ, ಆ್ಯಪಲ್ ಏರ್‌ಪಾಡ್ಸ್ ಕೂಡ ಮಾರುಕಟ್ಟೆಗೆ ಲಗ್ಗೆ ಇರಿಸಬಹುದು ಎನ್ನಲಾಗಿದೆ. 11: ಮೈಕ್ರೋಸಾಫ್ಟ್ ತರುತ್ತಿದೆ ಹೊಸ ಓಎಸ್ ಅಪ್‌ಡೇಟ್ . #WWDC21 7 10 .. . ♥️ ’ . ../CN6KbQGe0E ಆನ್‌ಲೈನ್ ಸಮಾವೇಶ ಆಗಿರುವುದರಿಂದ, ಜಾಗತಿಕವಾಗಿ ಏಕಕಾಲದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದ್ದು, ದೇಶದಲ್ಲಿ ಸ್ಥಳೀಯ ಕಾಲಮಾನ ಪ್ರಕಾರ ರಾತ್ರಿ 10:30ಕ್ಕೆ ಆರಂಭವಾಗಲಿದೆ. ಆಪ್ಟಿಕಲ್ ಫೈಬರ್: ಮಿಂಚಿನ ವೇಗದ ಸಂವಹನಕ್ಕೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.