ಬಿಎಸ್‌ಎನ್‌ಎಲ್ ಖಾಸಗೀಕರಣ ಮಾಡುವುದಿಲ್ಲ: ಕೇಂದ್ರ ಸರ್ಕಾರ ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ಎಲ್) ಅನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾಪ ಕೇಂದ್ರದ ಮುಂದಿಲ್ಲ ಎಂದು ಸರ್ಕಾರ ಹೇಳಿದೆ. ಸಂವಹನ ಖಾತೆ ರಾಜ್ಯ ಸಚಿವ ಸಂಜಯ್ ಧೋತ್ರೆ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿಚಾರ ಸ್ಪಷ್ಟಪಡಿಸಿದ್ದಾರೆ. 4G ಸೇವೆಯಲ್ಲಿ ಪಾಲ್ಗೊಳ್ಳಲು ಬಯಸುವ ಭಾರತೀಯ ಕಂಪನಿಗಳಿಂದ ಬಿಎಸ್ಎನ್ಎಲ್ ಅರ್ಜಿ ಆಹ್ವಾನಿಸಿದೆ. ಮುಂದಿನ 18-24 ತಿಂಗಳ ಅವಧಿಯಲ್ಲಿ 4G ಸೇವೆ ವಿಸ್ತರಣೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಧೋತ್ರೆ ತಿಳಿಸಿದ್ದಾರೆ. ಟೆಂಡರ್ ಮತ್ತು ಉಪಕರಣಗಳ ಪೂರೈಕೆ, ಅಳವಡಿಕೆಯಲ್ಲಿ ಕೇಂದ್ರದ ನಿಯಮಾವಳಿ ಅನ್ವಯ ಬಿಎಸ್ಎನ್ಎಲ್ ನಡೆದುಕೊಳ್ಳಲಿದೆ ಎಂದು ಧೋತ್ರೆ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.