ಚೀನಾದಲ್ಲಿ ಯುಸಿ ಬ್ರೌಸರ್‌ ಆಂಡ್ರಾಯ್ಡ್ ಆ್ಯಪ್ ಸ್ಟೋರ್‌ನಿಂದ ಔಟ್! ಚೀನಾದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಆ್ಯಪ್‌ಗಳನ್ನು ಒದಗಿಸುವ ಆಂಡ್ರಾಯ್ಡ್ ಆ್ಯಪ್ ಸ್ಟೋರ್‌ನಿಂದ ಅಲಿಬಾಬಾ ಸಂಸ್ಥೆಯ ಒಡೆತನದ ಯುಸಿ ಬ್ರೌಸರ್ ಅನ್ನು ಮಂಗಳವಾರ ತೆಗೆದುಹಾಕಲಾಗಿದೆ. ಚೀನಾದ ರಾಷ್ಟ್ರೀಯ ಟಿವಿ ವಾಹಿನಿಯಲ್ಲಿ ಪ್ರಸಾರವಾದ ವಾರ್ಷಿಕ ಗ್ರಾಹಕ ಹಕ್ಕುಗಳ ಕಾರ್ಯಕ್ರಮವನ್ನು ಯುಸಿ ಬ್ರೌಸರ್ ಟೀಕಿಸಿದ ಮರುದಿನವೇ ಈ ಕ್ರಮ ಕೈಗೊಳ್ಳಲಾಗಿದೆ. ಆ್ಯಪ್ ಅನ್ನು ಚೀನಾದಲ್ಲಿ ಆಂಡ್ರಾಯ್ಡ್ ಆ್ಯಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಯುಸಿ ಬ್ರೌಸರ್ ದೊರೆಯುತ್ತಿತ್ತು. ಚೀನಾದ ಸೆಂಟ್ರಲ್ ಟೆಲಿವಿಶನ್‌ನ ಜನಪ್ರಿಯ 2 ಗಂಟೆಗಳ ‘315’ ಕಾರ್ಯಕ್ರಮ ಸೋಮವಾರ ರಾತ್ರಿ ಪ್ರಸಾರವಾಗಿತ್ತು. ಆ ಕಾರ್ಯಕ್ರಮವನ್ನು ಟೀಕಿಸಿದ ಯುಸಿ ಬ್ರೌಸರ್ ಮತ್ತು ಇತರ ವಿದೇಶಿ ಕಂಪನಿಗಳನ್ನು ಚೀನಾ ಗುರಿಯಾಗಿಸಿಕೊಂಡು ಕ್ರಮ ಕೈಗೊಳ್ಳುತ್ತಿದೆ. ಈ ಬಗ್ಗೆ ಯುಸಿ ಬ್ರೌಸರ್ ಕ್ಷಮೆ ಕೋರಿದ್ದು, ತಪ್ಪನ್ನು ಸರಿಪಡಿಸಿಕೊಳ್ಳುವುದಾಗಿ ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.