ನಿಮ್ಮ ವಾಟ್ಸ್‌ಆ್ಯಪ್ ಅಕೌಂಟ್ ಬ್ಯಾನ್ ಆದ್ರೆ ಏನು ಮಾಡಬೇಕು? ಬಂದಿದೆ ಹೊಸ ಫೀಚರ್ ಬೆಂಗಳೂರು: ಜನಪ್ರಿಯ ಮೆಸೆಂಜರ್ ಆ್ಯಪ್ ‘ವಾಟ್ಸ್‌ಆ್ಯಪ್‘ ಕೆಲವು ಸಂದರ್ಭಗಳಲ್ಲಿ ಕಠಿಣ ನಿಯಮಗಳನ್ನು ತನ್ನ ಬಳಕೆದಾರರ ಮೇಲೆ ತೆಗೆದುಕೊಳ್ಳುವುದುಂಟು. ಅದರ ಷರತ್ತು ಮತ್ತು ಕಾನೂನುಗಳನ್ನು ಉಲ್ಲಂಘಿಸುವವರ ಅಕೌಂಟ್‌ಗಳನ್ನು ನಿಷೇಧಿಸುವ ಮಟ್ಟಿಗೆ ಕ್ರಮವನ್ನು ವಾಟ್ಸ್‌ಆ್ಯಪ್ ತೆಗೆದುಕೊಳ್ಳುತ್ತದೆ. ಇದರಿಂದ ಅನಿವಾರ್ಯವಾಗಿ ಬಳಕೆದಾರರು ಆ ಅಕೌಂಟ್ ಬಳಕೆ ಕೈಬಿಟ್ಟು ಹೊಸ ನಂಬರ್ ಮೂಲಕ ವಾಟ್ಸಆ್ಯಪ್ ಪ್ರವೇಶಿಸಬೇಕಾಗಿತ್ತು. ಇದೀಗ ವಾಟ್ಸ್‌ಆ್ಯಪ್ ಹೊಸ ಫೀಚರ್ ಪರಿಚಯಿಸುತ್ತಿದ್ದು, ಅದಕ್ಕೆ ಎನ್ನಲಾಗಿದೆ. ಅಂದರೆ ನಿಷೇಧಕ್ಕೊಳಗಾದ ಅಕೌಂಟ್ ಬಳಕೆದಾರರು ಈ ಫೀಚರ್ ಮೂಲಕ ತಮ್ಮ ಖಾತೆಯನ್ನು ಪುನಃ ಸ್ಥಾಪಿಸಿಕೊಳ್ಳಬಹುದಾಗಿದೆ. ಸದ್ಯ ಇದು ಐಓಎಸ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಮುಂದೆ ಆಂಡ್ರಾಯ್ಡ್‌ಗೂ ಬಿಡುಗಡೆಯಾಗಲಿದೆ ಎಂದು ವಾಟ್ಸ್‌ಆ್ಯಪ್ ಒಡೆತನದ ಫೇಸ್‌ಬುಕ್ ಕಂಪನಿ ಹೇಳಿದೆ. ಇದುವಾಟ್ಸ್‌ಆ್ಯಪ್‌ನ2.21.18.5 ವರ್ಸನ್‌ನಲ್ಲಿ ಇರಲಿದೆ. ಒಂದು ವೇಳೆ ಅಕೌಂಟ್ ನಿಷೇಧಕ್ಕೆ ಒಳಗಾಗಿದ್ದರೆ ‘ , ‘ ಎಂಬ ಸಂದೇಶ ಬರುತಿತ್ತು. ಇದೀಗ ಬ್ಯಾನ್ ರಿವ್ಯೂವ್ ಫಿಚರ್ ಪರಿಚಯಿಸುತ್ತಿರುವುದರಿಂದ ಬಳಕೆದಾರರು ಈ ಅವಕಾಶವನ್ನು ಬಳಸಿಕೊಂಡು ಅಕೌಂಟ್ ಪುನರ್ ಸ್ಥಾಪಿಸುವಂತೆ ಕೇಳಿಕೊಳ್ಳಬಹುದು. 24 ಗಂಟೆಯಲ್ಲಿ ವಾಟ್ಸ್‌ಆ್ಯಪ್ ಕಡೆಯಿಂದ ನಿಮಗೆ ಪ್ರತಿಕ್ರಿಯೆ ಬಂದು ನಿಷೇಧ ಕ್ರಮದಲ್ಲಿ ಏನಾದರೂ ದೋಷವಿದ್ದರೆ ನಿಮ್ಮ ಮನವಿಯನ್ನು ಪರಿಗಣಿಸಿ ಅಕೌಂಟ್‌ನ್ನು ಪುನರ್ ಸ್ಥಾಪಿಸಲಾಗುತ್ತದೆ. ಒಂದು ವೇಳೆ ನಿಷೇಧ ಕ್ರಮ ಈ ಮುಂಚೆಯೇ ಸರಿಯಾಗಿದ್ದರೆ ಅಕೌಂಟ್ ಖಾಯಂ ಆಗಿ ನಿಷೇಧಕ್ಕೆ ಒಳಗಾಗುತ್ತದೆ. ಈ ಫೀಚರ್ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ವಾಟ್ಸ್‌ಆ್ಯಪ್ ತಿಳಿಸಿಲ್ಲ. ಇದನ್ನೂ ಓದಿ:ಇನ್ನೆರಡು ವಾರದಲ್ಲಿ ಮಂಗಳನ ಅಂಗಳದಿಂದ ಭೂಮಿಗೆ ಬರಲಿದೆ ಮಣ್ಣು, ಕಲ್ಲು! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.