23ನೇ ವರ್ಷಕ್ಕೆ ಕಾಲಿರಿಸಿದ ಗೂಗಲ್: ಡೂಡಲ್ ಮೂಲಕ ಸಂಭ್ರಮ ಬೆಂಗಳೂರು: ಜನಪ್ರಿಯ ಸರ್ಚ್ ಎಂಜಿನ್ ಗೂಗಲ್, ಸೋಮವಾರ ಸೆ. 27ರಂದು 23ನೇ ವರ್ಷಕ್ಕೆ ಕಾಲಿರಿಸಿದೆ. ಸೆ. 4, 1998ರಂದು ಗೂಗಲ್ ಅನ್ನು ಹುಟ್ಟುಹಾಕಲಾಯಿತಾದರೂ, ಸೆ. 27ರಿಂದ ಅಧಿಕೃತವಾಗಿ ಗೂಗಲ್ ಸರ್ಚ್ ಎಂಜಿನ್ ಕಾರ್ಯಾರಂಭ ಮಾಡಿದ್ದರಿಂದ, ಅದೇ ದಿನವನ್ನು ಗೂಗಲ್ ಹುಟ್ಟುಹಬ್ಬವನ್ನಾಗಿ ಸಂಭ್ರಮಿಸಲಾಗುತ್ತಿದೆ. ಗೂಗಲ್ ಜನ್ಮದಿನದ ಅಂಗವಾಗಿ, ಹೋಮ್‌ ಪೇಜ್‌ನಲ್ಲಿ ಆಕರ್ಷಕ ಡೂಡಲ್ ಒಂದನ್ನು ಗೂಗಲ್ ಪ್ರಕಟಿಸಿದೆ. ಡೋನಟ್ ಮತ್ತು ಕೇಕ್, ಕ್ಯಾಂಡಲ್ ಸಹಿತ ಇರುವ ಗೂಗಲ್ ಡೂಡಲ್ ಮೇಲೆ ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪುಟದಲ್ಲಿ ಗೂಗಲ್ ಕುರಿತ ಮಾಹಿತಿಯನ್ನು ಪಡೆದುಕೊಳ್ಳಬಹುದು. ನ.1ರ ಬಳಿಕ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ಕೆಲಸ ಮಾಡುವುದಿಲ್ಲ! ಪ್ರತಿ ವಿಶೇಷ ಸಂದರ್ಭ ಮತ್ತು ಆಚರಣೆಯನ್ನು ಗೂಗಲ್ ಸಂಭ್ರಮಿಸುವ ಸಲುವಾಗಿ, ಡೂಡಲ್ ರಚಿಸುತ್ತದೆ. ಅದೇ ರೀತಿ ತನ್ನ ಹುಟ್ಟುಹಬ್ಬಕ್ಕೂ ವಿಶೇಷ ಡೂಡಲ್ ಅನ್ನು ಗೂಗಲ್ ಪ್ರದರ್ಶಿಸಿದೆ. ಎಂಜಿನಿಯರ್‌ಗಳ ದಿನ: ಮೇಧಾವಿ ವಿಶ್ವೇಶ್ವರಯ್ಯ ಸ್ಮರಿಸುವ ಹೊತ್ತು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.