: ಹೊಸ ಮ್ಯಾಕ್‌ಬುಕ್ ಬಿಡುಗಡೆಗೆ ಮತ್ತೊಂದು ಈವೆಂಟ್ ಘೋಷಿಸಿದ ಆ್ಯಪಲ್ ಬೆಂಗಳೂರು: ಕಳೆದ ಸೆಪ್ಟೆಂಬರ್‌ನಲ್ಲಿ ವಿಶೇಷ ಈವೆಂಟ್ ಮೂಲಕ ಹೊಸ ಸರಣಿಯ ಐಫೋನ್‌ಗಳನ್ನು ಪರಿಚಯಿಸಿದ್ದ ಆ್ಯಪಲ್, ಈ ಬಾರಿ ಮತ್ತೊಂದು ಈವೆಂಟ್‌ಗೆ ಸಜ್ಜಾಗಿದೆ. ಆ್ಯಪಲ್ ಈವೆಂಟ್, ಅಕ್ಟೋಬರ್ 18ರಂದು ನಡೆಯಲಿದೆ ಎಂದು ಕಂಪನಿ ಘೋಷಿಸಿದೆ. ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10:30ಕ್ಕೆ ಆ್ಯಪಲ್ ಈವೆಂಟ್ ಆರಂಭವಾಗಲಿದೆ. ನೂತನ ಸರಣಿಯ ಆ್ಯಪಲ್ ಮ್ಯಾಕ್‌ಬುಕ್ ಮತ್ತು ಹೊಸ ಏರ್‌ಪಾಡ್ಸ್‌ಗಳನ್ನು ಆ್ಯಪಲ್ ಈ ಸಂದರ್ಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ನೂತನ ಆ್ಯಪಲ್ ಎಂ1ಎಕ್ಸ್ ಪ್ರೊಸೆಸರ್ ಸಹಿತ ಆ್ಯಪಲ್ ಮ್ಯಾಕ್‌ಬುಕ್ ಪ್ರೊ ಮತ್ತು ವೃತ್ತಿಪರರಿಗೆ ಬಳಕೆಗೆ ಸೂಕ್ತವಾದ ಆ್ಯಪಲ್ ಮ್ಯಾಕ್ ಮಿನಿ ಮಾದರಿಯನ್ನು ಪರಿಚಯಿಸುವ ಸಾಧ್ಯತೆಯಿದೆ. 13 : ಆ್ಯಪಲ್ ಇವೆಂಟ್ 2021ರಲ್ಲಿ ಏನೆಲ್ಲ ಬಿಡುಗಡೆ? ಬೆಲೆ ಎಷ್ಟು?... ಕಳೆದ ತಿಂಗಳು ಈವೆಂಟ್ ಆಯೋಜಿಸಿದ್ದ ಆ್ಯಪಲ್, ಐಫೋನ್ 13 ಸರಣಿಯಲ್ಲಿ ನಾಲ್ಕು ಹೊಸ ಮಾದರಿಗಳನ್ನು ಪರಿಚಯಿಸಿತ್ತು. ಜತೆಗೆ ಆ್ಯಪಲ್ ವಾಚ್ ಸಿರೀಸ್ 7 ಕೂಡ ಬಿಡುಗಡೆಯಾಗಿತ್ತು. 13: ಭಾರತಕ್ಕಿಂತ ಕಡಿಮೆ ಬೆಲೆಗೆ ಈ ದೇಶಗಳಲ್ಲಿ ಲಭ್ಯ! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.