: ಪರೀಕ್ಷೆಯ ಮುನ್ನ ಹೀಗೆ ಮಾಡಿ... ಸಂಕೇಶ್ವರ: ಪರೀಕ್ಷೆ ಎಂದಾಕ್ಷಣ ಭಯ ಸಹಜ. ಇದನ್ನು ಹೋಗಲಾಡಿಸಲು ಹಬ್ಬದಂತೆ ಸಂಭ್ರಮಿಸಬೇಕು. ಒತ್ತಡಕ್ಕೆ ಒಳಗಾದರೆ ಆರೋಗ್ಯ ಸಮಸ್ಯೆಯೂ ಕಾಣಿಸಬಹುದು. ಗೊಂದಲದಿಂದಾಗಿ ತಿಳಿದಿರುವುದೂ ನೆನಪಾಗದಿರಬಹುದು. ಅದಕ್ಕೆ ಅವಕಾಶ ಕೊಡಬಾರದು. * ಯೋಗ, ಧ್ಯಾನ ಮಾಡಿ. * ಸರಿಯಾದ ಸಮಯಕ್ಕೆ ಸೂಕ್ತ ಆಹಾರ ಸೇವಿಸಿ. * ಸಕಾರಾತ್ಮಕ ಆಲೋಚನೆಗಳಿರಲಿ. * ಅನಗತ್ಯ ವಿಷಯಗಳಿಗೆ ಗಮನ ಕೊಡಬೇಡಿ. * ಆತ್ಮವಿಶ್ವಾಸವಿರಲಿ, ಸಮಯ ಪಾಲಿಸಿ. * ಗುರು-ಹಿರಿಯರ ಮಾರ್ಗದರ್ಶನ ಪಡೆಯಿರಿ. ಪರೀಕ್ಷೆಯ ಮುನ್ನ ಹೀಗೆ ಮಾಡಿ... * ಓದಿಗೆ ವೇಳಾಪಟ್ಟಿ ಮಾಡಿಕೊಳ್ಳಿ * ಎಲ್ಲ ವಿಷಯಗಳನ್ನೂ ಸಮಾನ ಆಸಕ್ತಿಯಿಂದ ಓದಿಕೊಳ್ಳಿ. * ಕಠಿಣ ವಿಷಯಗಳಿಗೆ ಹೆಚ್ಚಿನ ಸಮಯ ನಿಗದಿಪಡಿಸಿಕೊಳ್ಳಿ. * ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿರಿ.‌ * ಓದಿ, ಮನನ ಮಾಡಿಕೊಳ್ಳಿ. ಬರೆಯುತ್ತಾ ಕಲಿಯಿರಿ. * ಮೊಬೈಲ್‌ ಫೋನ್‌, ಟಿವಿ, ಆಟ, ಹಬ್ಬ, ಜಾತ್ರೆ, ಮದುವೆ ಕಾರ್ಯಕ್ರಮಗಳಿಂದ ದೂರವಿರಿ. * ಸಮಸ್ಯಾತ್ಮಕ ಪ್ರಶ್ನೆ/ವಿಷಯದ ಕುರಿತು ಶಿಕ್ಷಕರೊಂದಿಗೆ, ಸಹಪಾಠಿಗಳೊಂದಿಗೆ ಚರ್ಚಿಸಿ. * ಇಷ್ಟಪಟ್ಟು ಓದಿ. ಪರೀಕ್ಷೆಯ ಮುನ್ನಾದಿನ.... * ಊಟ, ನಿದ್ರೆ ಬಿಟ್ಟು ರಾತ್ರಿಯಿಡೀ ಓದಬೇಡಿ. * ನಕಾರಾತ್ಮಕ ಯೋಚನೆ ಬೇಡ. * ಅರ್ಥವಾಗದ ಸಮಸ್ಯೆಗಳ/ಪ್ರಶ್ನೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಿ. * ನಕಲು ಮಾಡಬಹುದೆಂಬ ಯೋಚನೆ ಬಿಡಿ. ಪರೀಕ್ಷೆಯಂದು * ಬೇಗ ಎದ್ದು ಸಿದ್ಧವಾಗಿ. * ಪರೀಕ್ಷಾ ಪರಿಕರ, ಪ್ರವೇಶಪತ್ರ ಮೊದಲಾದವುಗಳನ್ನು ಮರೆಯದಿರಿ. * ಪರೀಕ್ಷಾ ಕೇಂದ್ರಕ್ಕೆ ಅರ್ಧ ಗಂಟೆ ಮುಂಚಿತವಾಗಿ ತಲುಪಿ. * ಕೊಠಡಿಗೆ ಹೋಗುವ ಮುನ್ನ ಶೌಚ ಕಾರ್ಯ ಮುಗಿಸಿ. * ಕೊಠಡಿ ಮೇಲ್ವಿಚಾರಕರ ಸೂಚನೆ ಪಾಲಿಸಿ. * ಉತ್ತರ ಪತ್ರಿಕೆಯ ಎಲ್ಲ ಪುಟಗಳು ಸರಿಯಾಗಿರುವುದನ್ನು ಗಮನಿಸಿ. * ನೋಂದಣಿ ಸಂಖ್ಯೆ ಮತ್ತು ಮಾಧ್ಯಮವನ್ನು ಸರಿಯಾಗಿ ನಮೂದಿಸಿ. * ಪ್ರಶ್ನೆಪತ್ರಿಕೆ ಅವಲೋಕಿಸಿ, ಉತ್ತರ ಗೊತ್ತಿರುವ ಪ್ರಶ್ನೆಗಳ ಸಂಖ್ಯೆ ಹಾಕಿ ಮೊದಲು ಉತ್ತರಿಸಿ. * ಬರವಣಿಗೆ ಚೆನ್ನಾಗಿರಲಿ. ನಿರೀಕ್ಷಿತ ಉತ್ತರವನ್ನು ಅಂಕಗಳಿಗೆ ಅನುಗುಣವಾಗಿ ಬರೆಯಿರಿ. * ಕೊನೆಯ 10–15 ನಿಮಿಷ ಉತ್ತರಪತ್ರಿಕೆ ಅವಲೋಕಿಸಿ, ದೋಷಗಳಿದ್ದಲ್ಲಿ ಸರಿಪಡಿಸಿ. * ಪುರವಣಿಗಳನ್ನು ಸರಿಯಾಗಿ ಜೋಡಿಸಿ ದಾರದಿಂದ ಬಿಗಿಯಾಗಿ ಕಟ್ಟಿ. * ಪರೀಕ್ಷೆ ಬಳಿಕ ಸರಿ-ತಪ್ಪುಗಳ ಬಗ್ಗೆ ತಲೆಕಡಿಸಿಕೊಳ್ಳದೆ ಮುಂದಿನ ವಿಷಯದ ಪರೀಕ್ಷೆಗೆ ಸಿದ್ಧತೆ ಆರಂಭಿಸಿ. - ಶಿವಾನಂದ ಗುಂಡಾಳಿ, ಸಂಪನ್ಮೂಲ ವ್ಯಕ್ತಿ, ಸರ್ಕಾರಿ ಪ್ರೌಢಶಾಲೆ, ಕೇಸ್ತಿ, ಹುಕ್ಕೇರಿ ತಾಲ್ಲೂಕು. (ನಿರೂಪಣೆ: ಸುರೇಶ ಮಂಜರಗಿ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.