ಪಿಯುಸಿ ಭೌತಶಾಸ್ತ್ರ ಮಾದರಿ ಪ್ರಶ್ನೋತ್ತರ ಭೌತವಿಜ್ಞಾನ ಪಿಯುಸಿ ಭೌತಶಾಸ್ತ್ರ ಮಾದರಿ ಪ್ರಶ್ನೋತ್ತರ ಭೌತವಿಜ್ಞಾನ 32) ಬಿಟ್ಟ ಸ್ಥಳ ತುಂಬಿ 1) ದ್ಯುತಿ ವಿದ್ಯುತ್ ಕೋಶವು ಒಂದು ಅರೆ ಸಿಲಿಂಡರಾಕಾರದ ……………….ಮತ್ತು ಅದಕ್ಕೆ ಬೆಂಬಲವಾಗಿ ವಾಹಕ ಸುರುಳಿ (ಸಂಗ್ರಾಹಕ) ಇವುಗಳು ನಿರ್ವಾತವಿರುವ ಗಾಜು ಅಥವಾ ಸ್ಫಟಿಕ ಬಲ್ಬನ್ನು ಒಳಗೊಂಡಿರುತ್ತದೆ ಉತ್ತರ:- ದ್ಯುತಿ ಸಂವೇದಿ ತಟ್ಟೆ (ಉತ್ಸರ್ಜಕ) 2) ಮಾನವನ ಕಣ್ಣು ಗ್ರಹಿಸುವ ಬೆಳಕನ್ನು ಅಳೆಯುವ ವಿಭಾಗವನ್ನು …………. ಎನ್ನುತ್ತೇವೆ. ಉತ್ತರ:- ಪ್ರಭಾಮಾಪನ ()) 3) ದ್ಯುತಿ ವಿದ್ಯುತ್ ಪರಿಣಾಮ ಕುರಿತು ಹಾಲ್‌ವಾಕ್ ಮತ್ತು ………………ಅವಲೋಕನ ಮಾಡಿದರು ಉತ್ತರ:- ಲಿನಾರ್ಡ್ 4) ಬೆಳಕು ಯಾವುದೇ ವಸ್ತುವಿನ ಜತೆ ಪರಸ್ಪರ ಕ್ರಿಯೆಯಲ್ಲಿ ವರ್ತಿಸುವಾಗ ಅದು ……….ಗಳಿಂದ ಮಾಡಲ್ಪಟ್ಟಿದೆ ಉತ್ತರ:- ಕ್ವಾಂಟ ಅಥವಾ ಶಕ್ತಿಯ ಘಟಕ (() 5) ಕಡಿಮೆ ಒತ್ತಡದಲ್ಲಿ ಪರಮಾಣುವಿನ ಅನಿಲ ಅಥವಾ ಆವಿಯ ಮೂಲಕ ವಿದ್ಯುತ್‌ನ್ನು ಸಾಮಾನ್ಯವಾಗಿ ಹರಿಸಿದಾಗ ಅದು ಉತ್ತೇಜನಗೊಳ್ಳುತ್ತದೆ ಮತ್ತು ನಿರ್ದಿಷ್ಟವಾದ ತರಂಗಾಂತರಗಳ ರೋಹಿತವನ್ನು ಹೊಂದಿರುತ್ತದೆ. ಈ ತರಹದ ರೋಹಿತವನ್ನು ………………………..ವೆಂದು ಕರೆಯುತ್ತಾರೆ ಉತ್ತರ:- ಉತ್ಸರ್ಜನ ರೇಖಾ ರೋಹಿತ 33) ದ್ಯುತಿ ಎಳೆಗಳು ( ) ಬಗ್ಗೆ ಬರೆಯಿರಿ ಉತ್ತರ:- ಶಬ್ದ ಮತ್ತು ದೃಶ್ಯದ ಸಂಜ್ಞೆಗಳನ್ನು ದೂರದೂರಕ್ಕೆ ರವಾನಿಸಲು ದ್ಯುತಿ ಎಳೆಗಳನ್ನು ಹೆಚ್ಚಾಗಿ ಈಗ ಬಳಸುತ್ತಾರೆ. ಇವುಗಳು ಕೂಡಾ ಪೂರ್ಣಾಂತರಿಕ ಪ್ರತಿಫಲನದ ಮೇಲೆಯೇ ಕಾರ್ಯನಿರ್ವಹಿಸುತ್ತವೆ. ದ್ಯುತಿ ಎಳೆಗಳನ್ನು ಉತ್ತಮ ಗುಣಮಟ್ಟದ ಸಂಯುಕ್ತ ಗಾಜಿನ / ಕ್ವಾರ್ಟ್ಸ್ ಎಳೆಗಳಿಂದ ತಯಾರಿಸುತ್ತಾರೆ. ಪ್ರತಿ ಎಳೆಯಲ್ಲಿ ಕೇಂದ್ರ ಮತ್ತು ಹೊರಮೇಲ್ಮೈ ಎಂಬ ಎರಡು ಭಾಗಗಳಿರುತ್ತವೆ. ಕೇಂದ್ರ ಭಾಗದ ವಕ್ರೀಭವನಾಂಕವು ಹೊರಮೇಲ್ಮೈಯ ವಕ್ರೀಭವನಾಂಕಕ್ಕಿಂತ ಅಧಿಕವಾಗಿರುತ್ತದೆ. ಬೆಳಕಿನ ರೂಪದಲ್ಲಿರುವ ಸಂಜ್ಞೆಗಳನ್ನು ದ್ಯುತಿ ಎಳೆಯ ಒಂದು ತುದಿಯಲ್ಲಿ ನಿರ್ದಿಷ್ಟ ಕೋನದಿಂದ ಆಪಾತಗೊಳಿಸಿದಾಗ, ಬೆಳಕು ದ್ಯುತಿ ಎಳೆಯ ಉದ್ದಕ್ಕೂ ಪದೇ ಪದೇ ಪೂರ್ಣಾಂತರಿಕ ಪ್ರತಿಫಲನಗೊಂಡು ಇನ್ನೊಂದು ತುದಿಯಿಂದ [ಚಿತ್ರದಲ್ಲಿರುವಂತೆ] ಹೊರಬರುತ್ತದೆ. ಪ್ರತಿ ಹಂತದಲ್ಲೂ ಬೆಳಕು ಪೂರ್ಣಾಂತರಿಕ ಪ್ರತಿಫಲನಕ್ಕೆ ಒಳಗಾಗುವುದರಿಂದ ಬೆಳಕಿನ ತೀವ್ರತೆಯಲ್ಲಿ ಯಾವುದೇ ಗುರುತರ ಬದಲಾವಣೆಯಾಗುವುದಿಲ್ಲ. ಒಳ ಮೇಲ್ಮೈಯಿಂದ ಪ್ರತಿಫಲನಗೊಂಡ ಬೆಳಕು ವಿರುದ್ಧ ದಿಕ್ಕಿನಲ್ಲಿರುವ ಇನ್ನೊಂದು ಮೇಲ್ಮೈ ಮೇಲೆ ಕ್ರಾಂತಿ ಕೋನಕ್ಕಿಂತ ಅಧಿಕವಾದ ಕೋನದಲ್ಲಿ ಬೀಳುವಂತೆ ದ್ಯುತಿ ಎಳೆಗಳನ್ನು ರಚಿಸಲಾಗುತ್ತದೆ 34) ಯಾವುದಕ್ಕೆ ದ್ಯುತಿ ವಿದ್ಯುತ್ ಉತ್ಸರ್ಜನ ಎನ್ನುತಾರೆ? ಉತ್ತರ:- ಒಂದು ಲೋಹದ ಮೇಲೆ ನಿರ್ದಿಷ್ಟ ಆವೃತ್ತಿಯ ವಿಕಿರಣವನ್ನು ಹಾಯಿಸಿದಾಗ ಲೋಹದ ಮೇಲ್ಮೈಯಿಂದ ಎಲೆಕ್ಟ್ರಾನುಗಳ ಉತ್ಸರ್ಜನೆ ಸಂಭವಿಸುತ್ತದೆ. ಇದನ್ನು ದ್ಯುತಿ ವಿದ್ಯುತ್ ಉತ್ಸರ್ಜನ ಎನ್ನುತಾರೆ. ಉತ್ಸರ್ಜಿತ ಎಲೆಕ್ಟ್ರಾನುಗಳ ದ್ಯುತಿ ಎಲೆಕ್ಟ್ರಾನುಗಳ ಎಂದು ಕರೆಯುತ್ತಾರೆ. 35) ಪೋಲರಾಯಿಡ್‌ನ ಪಾಸ್-ಅಕ್ಷ ಎಂದು ಯಾವುದನ್ನು ಕರೆಯುತ್ತಾರೆ? ಉತ್ತರ:-ಬೆಳಕಿನ ತರಂಗಗಳು ಸ್ವಭಾವತಃ ಅಡ್ಡ ತರಂಗಗಳಾಗಿವೆ ಅಂದರೆ ಸಂಚರಣೆಯಲ್ಲಿರುವ ಬೆಳಕಿನ ತರಂಗದ ವಿದ್ಯುತ್‌ಕ್ಷೇತ್ರವು ಎಂದಿಗೂ ತರಂಗದ ಸಂಚರಣೆಯ ದಿಕ್ಕಿಗೆ ಲಂಬವಾಗಿರುತ್ತದೆ. ಇದನ್ನು ಒಂದು ಸರಳ ಪೋಲರಾಯಿಡನ್ನು ಬಳಸಿ ಸುಲಭವಾಗಿ ವಿವರಿಸಬಹುದು. ಒಂದು ಪೋಲರಾಯಿಡ್ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಜೋಡಿಸಲ್ಪಟ್ಟ ಅಣುಗಳ ಉದ್ದನೆಯ ಸರಪಣಿಯನ್ನು ಹೊಂದಿದೆ. ಈ ಅಣುಗಳ ದಿಕ್ಕಿನಲ್ಲಿರುವ ವಿದ್ಯುತ್ ಸದಿಶಗಳು (ಸಂಚರಣೆಯ ದಿಕ್ಕಿನಲ್ಲಿರುವ ಬೆಳಕಿನ ತರಂಗದ) ಹೀರಿಕೊಳ್ಳಲ್ಪಡುತ್ತವೆ. ಹೀಗೆ, ಅಂತಹ ಪೋಲರಾಯಿಡ್‌ಗೆ ಅಧ್ರುವೀಕೃತ ಬೆಳಕಿನ ತರಂಗವು ಆಪಾತವಾದರೆ, ಆ ತರಂಗವು ರೇಖೀಯವಾಗಿ ಧ್ರುವೀಕೃತ ಹೊಂದಿ ಅಣುಗಳ ಲಂಬ ದಿಕ್ಕಿನಲ್ಲಿ ವಿದ್ಯುತ್ ಸದಿಶಗಳು ಕಂಪನ ಹೊಂದಿರುತ್ತದೆ. ಈ ದಿಕ್ಕನ್ನು ಪೋಲರಾಯಿಡ್‌ನ ಪಾಸ್-ಅಕ್ಷ ಎನ್ನುವರು. 36) ಯಾವ ಚೈತನ್ಯವನ್ನು ಕರ‍್ಯಫಲನ ಎಂದು ಕರೆಯುತ್ತಾರೆ? ಉತ್ತರ:- ಲೋಹಗಳ ವಾಹಕತೆಗೆ ಸ್ವತಂತ್ರ ಎಲೆಕ್ಟ್ರಾನುಗಳು [ಋಣಾತ್ಮಕ ಆವೇಶ ಕಣಗಳು] ಕಾರಣವಾಗಿವೆ, ಈ ಮುಕ್ತ ಎಲೆಕ್ಟ್ರಾನುಗಳು ಸಾಮಾನ್ಯವಾಗಿ ಲೋಹದ ಮೇಲ್ಮೈಯಿಂದ ತಪ್ಪಿಸಿಕೊಳ್ಳಲಾರವು. ಒಂದು ವೇಳೆ ಈ ಮುಕ್ತ ಎಲೆಕ್ಟ್ರಾನ್‌ ಹೊರಹೋಗಲು ಯತ್ನಿಸಿದರೆ ಅಲ್ಲಿ ಧನ ಆವೇಶ ಸೃಷ್ಠಿಯಾಗಿ ಅದು ಎಲೆಕ್ಟ್ರಾನನ್ನು ಮತ್ತೆ ಸೆಳೆದುಕೊಳ್ಳುತ್ತದೆ. ಅಯಾನುಗಳ ಈ ಆಕರ್ಷಕ ಬಲಗಳಿಂದ ಲೋಹದ ಮೇಲ್ಮೈಯನ್ನು ಬಿಟ್ಟು ಹೋಗಲಾರವು. ಒಂದು ವೇಳೆ ಎಲೆಕ್ಟ್ರಾನುಗಳು ಬಂಧಿತ ಶಕ್ತಿಗಿಂತ ಅಧಿಕವಾದ ಶಕ್ತಿ ಗಳಿಸಿಕೊಂಡಾಗ ಮಾತ್ರ ಹೊರಬರಲು ಸಾಧ್ಯ. ಅಂದರೆ ಯಾವ ಕನಿಷ್ಠ ಶಕ್ತಿಗೆ ಎಲೆಕ್ಟ್ರಾನುಗಳು ಲೋಹದ ಮೇಲ್ಮೈಯಿಂದ ಹೊರಬರುತ್ತವೆಯೋ ಆ ಚೈತನ್ಯವನ್ನು ಕರ‍್ಯಫಲನ ಎಂದು ಕರೆಯುತ್ತಾರೆ. ಅದನ್ನು ಸಂಕೇತದಿಂದ ಸೂಚಿಸಲಾಗುತ್ತದೆ ಮತ್ತು ಅದನ್ನು [ಎಲೆಕ್ಟ್ರೋನ್‌ ವೋಲ್ಟ್) ಅಳತೆ ಮಾಡಲಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.