ಎಸ್ಸೆಸ್ಸೆಲ್ಸಿ ಮಾದರಿ ಪ್ರಶ್ನೋತ್ತರ: ವಿಜ್ಞಾನ– ಲೋಹಗಳು ಮತ್ತು ಅಲೋಹಗಳು ಲೋಹಗಳು ಮತ್ತು ಅಲೋಹಗಳು ಬಹು ಆಯ್ಕೆ ಪ್ರಶ್ನೆಗಳು 1. ಈ ಕೆಳಗಿನವುಗಳಲ್ಲಿ ಯಾವ ಜೋಡಿಯು ಸ್ಥಾನಪಲ್ಲಟ ಕ್ರಿಯೆಯನ್ನು ಉಂಟುಮಾಡುತ್ತದೆ? () ದ್ರಾವಣ ಮತ್ತು ತಾಮ್ರದ ಲೋಹ () MgCl2 ದ್ರಾವಣ ಮತ್ತು ಅಲ್ಯುಮಿನಿಯಂ ಲೋಹ () FeSO4 ದ್ರಾವಣ ಮತ್ತು ಬೆಳ್ಳಿಯ ಲೋಹ ) AgNO3 ದ್ರಾವಣ ಮತ್ತು ತಾಮ್ರದ ಲೋಹ. 2. ಕಬ್ಬಿಣದ ಕಾವಲಿ ತುಕ್ಕು ಹಿಡಿಯದಂತೆ ತಡೆಗಟ್ಟಲು ಈ ಕೆಳಗಿನವುಗಳಲ್ಲಿ ಯಾವ ವಿಧಾನ ಸೂಕ್ತವಾಗಿದೆ? (ಎ) ಗ್ರೀಸ್ ಹಚ್ಚುವುದು (ಬಿ) ಬಣ್ಣ ಹಚ್ಚುವುದು (ಸಿ) ಸತುವಿನ ಲೇಪನ ಮಾಡುವುದು (ಡಿ) ಮೇಲಿನ ಎಲ್ಲವೂ 3. ಒಂದು ಧಾತುವು ಆಕ್ಸಿಜನ್‌ನ ಜೊತೆ ಪ್ರತಿವರ್ತಿಸಿ ಹೆಚ್ಚಿನ ಕರಗುವ ಬಿಂದುವನ್ನು ಹೊಂದಿರುವ ಸಂಯುಕ್ತವನ್ನು ಉಂಟುಮಾಡುತ್ತದೆ. ಈ ಸಂಯುಕ್ತವು ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಸಾಮಾನ್ಯವಾಗಿ ಆ ಧಾತು ಯಾವುದಾಗಿರಬಹುದೆಂದರೆ……………………….. (ಎ) ಕ್ಯಾಲ್ಸಿಯಂ (ಬಿ) ಕಾರ್ಬನ್ (ಸಿ) ಸಿಲಿಕಾನ್ (ಡಿ) ಕಬ್ಬಿಣ 4. ಆಹಾರ ಪದಾರ್ಥಗಳ ಡಬ್ಬಿಗಳನ್ನು ತವರದಿಂದ ಲೇಪನಮಾಡಲಾಗಿರುತ್ತದೆಯೇ ಹೊರತು ಸತುವಿನಿಂದಲ್ಲ ಕಾರಣ...... (ಎ) ಸತು ತವರಕ್ಕಿಂತ ದುಬಾರಿ. (ಬಿ) ಸತುವಿನ ಕರಗುವ ಬಿಂದು ತವರಕ್ಕಿಂತ ಹೆಚ್ಚು. (ಸಿ) ಸತುವು ತವರಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ. (ಡಿ) ಸತುವು ತವರಕ್ಕಿಂತ ಕಡಿಮೆ ಕ್ರಿಯಾಶೀಲವಾಗಿದೆ. ಉತ್ತರ:- (1)ಡಿ (2)ಸಿ (3)ಎ (4)ಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 1) ಯಾವುದನ್ನು ಲೋಹೀಯ ಕಾಂತಿ ಅಥವಾ ಹೊಳಪು () ಎನ್ನುವರು ಉತ್ತರ:- ಲೋಹಗಳು ಶುದ್ಧ ಸ್ಥಿತಿಯಲ್ಲಿ ಹೊಳಪಾದ ಮೇಲ್ಮೆöÊಯನ್ನು ಹೊಂದಿರುತ್ತವೆ. ಇದನ್ನೇ ಲೋಹೀಯ ಕಾಂತಿ ಅಥವಾ ಹೊಳಪು () ಎನ್ನುವರು. 2) ಲೋಹದ ಭೌತ ಗುಣಗಳನ್ನು ಬರೆಯಿರಿ ಉತ್ತರ:- ಲೋಹದ ಭೌತ ಗುಣಗಳು ಅ) ಲೋಹವು ಹೊಳಪನ್ನು ಹೊಂದಿದೆ ಆ) ಲೋಹವು ಕಠಿಣವಾಗಿರುತ್ತವೆ ಇ) ಲೋಹವು ಕುಟ್ಯತೆ ಗುಣವನ್ನು ಹೊಂದಿದೆ. {ಲೋಹಗಳನ್ನು ಕುಟ್ಟಿ ತೆಳುವಾದ ಹಾಳೆಗಳನ್ನಾಗಿ ಮಾಡಬಹುದು. ಈ ಗುಣವನ್ನು ಕುಟ್ಯತೆ () ಎನ್ನುವರು} ಈ) ಲೋಹಗಳು ತನ್ಯತೆಯ ಗುಣವನ್ನು ಹೊಂದಿದೆ. {ತೆಳುವಾದ ತಂತಿಗಳನ್ನಾಗಿ ಎಳೆಯಬಹುದಾದ ಲೋಹಗಳ ಸಾಮರ್ಥ್ಯಕ್ಕೆ ತನ್ಯತೆ ()ಎನ್ನುವರು. ಉ) ಲೋಹಗಳು ಉಷ್ಣದ ಉತ್ತಮ ವಾಹಕಗಳು ಮತ್ತು ಅತಿ ಹೆಚ್ಚಿನ ಕರಗುವ ಬಿಂದುಗಳನ್ನು ಹೊಂದಿವೆ ಊ) ಲೋಹಗಳ ಮೂಲಕ ವಿದ್ಯುತ್ ಪ್ರವಹಿಸುತ್ತದೆ ಎ) ಲೋಹಗಳು ಒಂದು ಗಟ್ಟಿಯಾಗಿ ಬಡಿದರೆ ಶಬ್ದ ಉತ್ಪತ್ತಿ ಮಾಡುತ್ತವೆ 3) ಯಾವುದಕ್ಕೆ ಶಾಬ್ದನ () ಎನ್ನುವರು? ಉತ್ತರ:- ಒಂದು ಗಟ್ಟಿಯಾದ ಮೇಲ್ಮೈಗೆ ಬಡಿದಾಗ ಶಬ್ದ ಉಂಟುಮಾಡುವ ಲೋಹಗಳ ಗುಣವನ್ನು ಶಾಬ್ದನ()ಎನ್ನುವರು 4) ಒಂದು ದ್ರವರೂಪದ ಅಲೋಹವನ್ನು ಹೆಸರಿಸಿ ಉತ್ತರ:- ಬ್ರೋಮಿನ್ 5) ಒಂದು ದ್ರವರೂಪದ ಲೋಹವನ್ನು ಹೆಸರಿಸಿ ಉತ್ತರ:- ಪಾದರಸ 6) ಹೊಳೆಯುವ ಅಲೋಹವನ್ನು ಬರೆಯಿರಿ ಉತ್ತರ:- ಅಯೋಡಿನ್ 7) ವಿಭಿನ್ನ ರೂಪದಲ್ಲಿ ದೊರೆಯುವ ಅಲೋಹ ಯಾವುದು? ಉತ್ತರ:- ಕಾರ್ಬನ್ 8) ಕ್ಷಾರ ಲೋಹಗಳನ್ನು ಹೆಸರಿಸಿ ಉತ್ತರ:- ಲೀಥಿಯಂ, ಸೋಡಿಯಂ, ಪೊಟ್ಯಾಸಿಯಂ 9) ಕ್ಷಾರ ಲೋಹಗಳ ವಿಶಿಷ್ಟತೆಯನ್ನು ಬರೆಯಿರಿ ಉತ್ತರ:- ಕ್ಷಾರ ಲೋಹಗಳು ತುಂಬಾ ಮೃದುವಾಗಿರುತ್ತವೆ. ಇವುಗಳನ್ನು ಚಾಕುವಿನಿಂದ ಕತ್ತರಿಸಬಹುದು. ಇವು ಕಡಿಮೆ ಸಾಂದ್ರತೆ ಮತ್ತು ಕಡಿಮೆ ಕರಗುವ ಬಿಂದುಗಳನ್ನು ಹೊಂದಿವೆ. 10) ಯಾವುದಕ್ಕೆ ಉಭಯಧರ್ಮಿ () ಆಕ್ಸೈಡ್‌ಗಳು ಎನ್ನುವರು? ಉತ್ತರ:- ಅಲ್ಯುಮಿನಿಯಂ ಆಕ್ಸೈಡ್‌, ಸತುವಿನ ಆಕ್ಸೈಡ್‌ಗಳಂಥ ಕೆಲವು ಲೋಹದ ಆಕ್ಸೈಡ್‌ಗಳು ಆಮ್ಲೀಯ ಹಾಗೂ ಪ್ರತ್ಯಾಮ್ಲೀಯ ಗುಣಗಳೆರಡನ್ನೂ ಪ್ರದರ್ಶಿಸುತ್ತವೆ. ಇಂತಹ ಲೋಹದ ಆಕ್ಸೈಡ್‌ಗಳುಆಮ್ಲ ಮತ್ತು ಪ್ರತ್ಯಾಮ್ಲಗಳೆರಡರ ಜೊತೆಗೂ ಪ್ರತಿವರ್ತಿಸಿದಾಗ ಲವಣ ಮತ್ತು ನೀರನ್ನು ಉತ್ಪತ್ತಿ ಮಾಡುತ್ತವೆ. ಇವುಗಳಿಗೆ ಉಭಯಧರ್ಮಿ () ಆಕ್ಸೈಡ್‌ಗಳು ಎನ್ನುವರು. 11) ಸೋಡಿಯಂ ಮತ್ತು ಪೊಟ್ಯಾಸಿಯಂನಂಥ ಲೋಹಗಳನ್ನು ಸೀಮೆ ಎಣ್ಣೆಯಲ್ಲಿ ಯಾಕೆ ಸಂಗ್ರಹಿಸಿಡುತ್ತಾರೆ. ಉತ್ತರ:- ಸೋಡಿಯಂ ಮತ್ತು ಪೊಟ್ಯಾಸಿಯಂನAಥ ಲೋಹಗಳು ಗಾಳಿಗೆ ತೆರೆದಿಟ್ಟಾಗ ಕ್ಷಿಪ್ರವಾಗಿ ವರ್ತಿಸಿ ಬೆಂಕಿ ಹೊತ್ತಿಕೊಳ್ಳುತ್ತದೆ. ಆದ್ದರಿಂದ ಅವುಗಳನ್ನು ಸಂರಕ್ಷಿಸಲು ಮತ್ತು ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಳ್ಳುವುದನ್ನು ತಪ್ಪಿಸಲು ಸೀಮೆಎಣ್ಣೆಯಲ್ಲಿ ಸಂಗ್ರಹಿಸಿಡುತ್ತಾರೆ. 12) ಯಾವುದಕ್ಕೆ ಆನೋಡೀಕರಣ () ಎನ್ನುವರು. ಉತ್ತರ:- ಅಲ್ಯುಮಿನಿಯಂನ ಮೇಲೆ ದಪ್ಪ ಆಕ್ಸೈಡ್‌ ಪದರವನ್ನು ಉಂಟು ಮಾಡುವ ಕ್ರಿಯೆಗೆ ಆನೋಡೀಕರಣ (()) ಎನ್ನುವರು. 13) ಲೋಹಗಳ ರಾಸಾಯನಿಕ ಗುಣಗಳನ್ನು ಬರೆಯಿರಿ ಉತ್ತರ:- (1) ಬಹುತೇಕ ಎಲ್ಲ ಲೋಹಗಳು ಆಕ್ಸಿಜನ್‌ನ ಜೊತೆ ಸಂಯೋಗ ಹೊಂದಿದಾಗ ಆಯಾ ಲೋಹಗಳ ಆಕ್ಸೈಡ್‌ಗಳಾಗುತ್ತವೆ. ಲೋಹ + ಆಕ್ಸಿಜನ್ → ಲೋಹದ ಆಕ್ಸೈಡ್‌ (1) ಬಹುತೇಕ ಎಲ್ಲ ಲೋಹಗಳು ಆಕ್ಸಿಜನ್‌ನ ಜೊತೆ ಸಂಯೋಗ ಹೊಂದಿದಾಗ ಆಯಾ ಲೋಹಗಳ ಆಕ್ಸೈಡ್‌ಗಳಾಗುತ್ತವೆ. ಉದಾಹರಣೆ ತಾಮ್ರವನ್ನು ಗಾಳಿಯಲ್ಲಿ ಕಾಸಿದಾಗ ಆಕ್ಸಿಜನ್ ಜೊತೆ ಸೇರಿ ತಾಮ್ರದ ಆಕ್ಸೈಡ್‌ ಆಗುತ್ತದೆ. ಇದು ಕಪ್ಪು ಆಕ್ಸೈಡ್‌ 2Cu + O2 → 2CuO (ತಾಮ್ರ) (ತಾಮ್ರದ ಆಕ್ಸೈಡ್‌) (2) ಎಲ್ಲಾ ಲೋಹಗಳು ಒಂದೇ ರೀತಿಯಾಗಿ ಆಕ್ಸಿಜನ್‌ನ ಜೊತೆ ವರ್ತಿಸುವುದಿಲ್ಲ 3) ಲೋಹಗಳು ನೀರಿನ ಜೊತೆ ಪ್ರತಿವರ್ತಿಸಿದಾಗ ಲೋಹದ ಆಕ್ಸೈಡ್‌ ಮತ್ತು ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಲೋಹದ ಆಕ್ಸೈಡ್‌ಗಳು ಪುನಃ ನೀರಿನಲ್ಲಿ ಕರಗಿ ಲೋಹದ ಹೈಡ್ರಾಕ್ಸೈಡ್‌ಗಳಾಗುತ್ತವೆ. ಆದರೆ ಎಲ್ಲಾ ಲೋಹಗಳು ನೀರಿನ ಜೊತೆ ಪ್ರತಿವರ್ತಿಸುವುದಿಲ್ಲ. (ಮುಂದುವರಿಯುವುದು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.