ಪ್ರಜಾವಾಣಿ ಕ್ವಿಜ್ 40 1. ಪಾವಾಪುರಿ ಯಾರ ನಿರ್ವಾಣದ ಸ್ಥಳ? ಅ) ಗುರು ನಾನಕ್ ಆ) ಮಹಾವೀರ ಇ) ಬುದ್ಧ ಈ) ಕಬೀರ 2. ಪಿ. ಲಂಕೇಶರ ಯಾವ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿದೆ? ಅ) ಅನುರೂಪ ಆ) ಎಲ್ಲಿಂದಲೋ ಬಂದವರು ಇ) ಸಂಕ್ರಾಂತಿ ಈ) ಪಲ್ಲವಿ 3. ದೇವಕಣಗಳ ಸಂಶೋಧನೆಗೆ ಹೆಸರಾದ ‘ಸೆರ್ನ್’ ಪ್ರಯೋಗಾಲಯ ಯಾವ ಊರಿನಲ್ಲಿದೆ? ಅ) ಜಿನೆವಾ ಆ) ಲಂಡನ್ ಇ) ಪ್ಯಾರಿಸ್ ಈ) ನ್ಯೂಯಾರ್ಕ್ 4. ಕುದ್ಮುಲ್ ರಂಗರಾವ್ ಯಾವ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದವರಾಗಿದ್ದರು? ಅ) ಸ್ವಾತಂತ್ರ್ಯ ಹೋರಾಟ ಆ) ಕರ್ನಾಟಕದ ಏಕೀಕರಣ ಇ) ರೈತ ಚಳವಳಿ ಈ) ದಲಿತೋದ್ಧಾರ 5. ಯಾವ ಊರಿನ ನಿಜಾಮ ಕುಲ್ಚಾ ರೊಟ್ಟಿಯನ್ನು ತನ್ನ ರಾಜಲಾಂಛನವನ್ನಾಗಿಸಿಕೊಂಡ? ಅ) ಬಿಜಾಪುರ ಆ) ಹೈದರಾಬಾದ್ ಇ) ಗೋಲ್ಕೊಂಡ ಈ) ಅಹಮದ್ ನಗರ 6. ಭಾರತದಲ್ಲಿ ‘ದೂರಸಂಪರ್ಕ ಕ್ರಾಂತಿ’ಗೆ ಗಣನೀಯ ಕೊಡುಗೆ ನೀಡಿದವರು ಯಾರು? ಅ) ಸ್ಯಾಮ್ ಪಿತ್ರೋಡ ಆ) ನಾರಾಯಣ ಮೂರ್ತಿ ಇ) ಕುರಿಯನ್ ಈ) ಸ್ವಾಮಿನಾಥನ್ 7. ಬೈಬಲ್‍ನ ಪ್ರಕಾರ ಏಸುಕ್ರಿಸ್ತನಿಗೆ ಶಿಕ್ಷೆ ವಿಧಿಸಿದ ರೋಮನ್ ನ್ಯಾಯಾಧೀಶರು ಯಾರು? ಅ) ಬರಬ್ಬ ಆ) ಜುದಾಸ ಇ) ಪಿಲಾತ ಈ) ಹೆರೋದ 8. ಹಾ. ಮಾ. ನಾಯಕರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ? ಅ) ನಮ್ಮ ಮನೆಯ ದೀಪ ಆ) ಸಂಪ್ರತಿ ಇ) ಬಾಳ್ನೋಟಗಳು ಈ) ಸಮೀಕ್ಷೆ 9. ಸಮಯವು 12ಗಂಟೆ 5ನಿಮಿಷವಾಗಿರುವಾಗ ಗಡಿಯಾರದ ಎರಡು ಮುಳ್ಳುಗಳ ನಡುವಣ ಕೋನವೆಷ್ಟಿರುತ್ತದೆ? ಅ) 45 ಡಿಗ್ರಿ ಆ) 30 ಡಿಗ್ರಿ ಇ) 25 ಡಿಗ್ರಿ ಈ) 60 ಡಿಗ್ರಿ 10. ಬಿಲ್ವಿದ್ಯೆ ಯಾವ ದೇಶದ ರಾಷ್ಟ್ರಕ್ರೀಡೆ? ಅ) ಭೂತಾನ್ ಆ) ಜಾವಾ ಇ) ಇಂಡೋನೇಷ್ಯಾ ಈ) ನೇಪಾಳ ಹಿಂದಿನ ಸಂಚಿಕೆಯ ಸರಿ ಉತ್ತರಗಳು 1. ಬೌದ್ಧ 2. ಬೇರು 3. ಮಹದಾಯಿ 4. ಅನಕೃ 5. ಘಂಟಸಾಲ 6. ಸೈನಸ್ ತಲೆನೋವು 7. ಬಿ.ವಿ. ರಾಮ ಮೂರ್ತಿ 8. ಕೆಳದಿ ಅರಸರು 9. ಸಾಲ ಮರುಪಾವತಿ ಆಗದಿರುವುದು 10. ಕುರುಚಲು ಎಸ್‌. ಎಲ್‌. ಶ್ರೀನಿವಾಸ ಮೂರ್ತಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.