ಯುವಿಸಿಇಯಲ್ಲಿ ಬದಲಾವಣೆ ಗಾಳಿ ತ್ವರಿತ ಫಲಿತಾಂಶ ಪ್ರಕಟಿಸಿ ರಾಷ್ಟ್ರದ ಗಮನ ಸೆಳೆದಿರುವ ಬೆಂಗಳೂರು ವಿಶ್ವವಿದ್ಯಾಲಯದ ‘ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು’ (ಯುವಿಸಿಇ) ಪ್ರಸಕ್ತ ವರ್ಷದಿಂದ ವಿದ್ಯಾರ್ಥಿ ಕೇಂದ್ರಿತ ಕಲಿಕಾ ವಿಧಾನವನ್ನು ಅಳವಡಿಸಿಕೊಂಡಿದೆ. 1917ರಲ್ಲಿ ಆರಂಭವಾಗಿರುವ ಯುವಿಸಿಇ, ಕಳೆದ ವರ್ಷ ನೂರು ವರ್ಷ ಪೂರೈಸಿದೆ. ಇಲ್ಲಿಯವರೆಗೆ ಕಾಲೇಜಿನಲ್ಲಿದ್ದ ಬೋಧಕ ಕೇಂದ್ರಿತ ಕಲಿಕಾ ವಿಧಾನ ಮತ್ತು ಅಂಕ ಪದ್ಧತಿಗೆ ‘ಗುಡ್‌ಬೈ’ ಹೇಳಿ, ಹೊಸದಾಗಿ ಆಯ್ಕೆ ಆಧಾರಿತ ಗುಣಾಂಕ ಪದ್ಧತಿ (ಚಾಯ್ಸ್‌ಬೇಸ್ಡ್‌ ಕ್ರೆಡಿಟ್‌ ಸಿಸ್ಟಂ–ಸಿಬಿಸಿಎಸ್‌) ಸೇರಿದಂತೆ ಕೆಲ ಹೊಸ ವಿಧಾನಗಳನ್ನು ಅಳವಡಿಸಿಕೊಂಡಿದೆ. ಬಿ.ಟೆಕ್‌ ಮತ್ತು ಬಿ.ಟೆಕ್‌ ಹಾನರ್ಸ್‌ ಇಲ್ಲಿಯವರೆಗೆ ಯುವಿಸಿಇ ನೀಡುತ್ತಿದ್ದ ಬಿ.ಇ ಕೋರ್ಸ್‌ಗಳು 2018–19ನೇ ಸಾಲಿನಿಂದ ಬಿ.ಟೆಕ್‌ ಕೋರ್ಸ್‌ ಆಗಿ ಬದಲಾಗಲಿವೆ. ನಾಲ್ಕು ವರ್ಷಗಳ ಬಿ.ಟೆಕ್‌ ಕೋರ್ಸ್‌ನಲ್ಲಿ ವಿದ್ಯಾರ್ಥಿ 175 ಕ್ರೆಡಿಟ್‌ಗಳನ್ನು ಪಡೆಯಬೇಕು. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) 160 ಕ್ರೆಡಿಟ್‌ಗಳನ್ನು ನಿಗದಿ ಮಾಡಿದೆ. ಆದರೆ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಯುವಿಸಿಇ 15 ಹೆಚ್ಚುವರಿ ಕ್ರೆಡಿಟ್‌ಗಳು ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದೆ. ಅಲ್ಲದೆ ಕೇಂದ್ರ ಸರ್ಕಾರ ಕಳೆದ ವರ್ಷ ಆರಂಭಿಸಿರುವ ‘ಮುಕ್ತ ಆನ್‌ಲೈನ್‌ ಕೋರ್ಸ್‌’ಗಳಲ್ಲಿ () 20 ಕ್ರೆಡಿಟ್‌ಗಳನ್ನು ಪಡೆಯುವ ಬಿ.ಟೆಕ್‌ ವಿದ್ಯಾರ್ಥಿಗಳಿಗೆ ‘ಬಿ.ಟೆಕ್‌ ಹಾನರ್ಸ್‌’ ಪದವಿ ದೊರೆಯಲಿದೆ. ನಿರಂತರ ಮೌಲ್ಯಮಾಪನ ವಿಧಾನ ಅಳವಡಿಕೆ ಇಲ್ಲಿಯವರೆಗೆ ವಿದ್ಯಾರ್ಥಿಗಳು ಸೆಮಿಸ್ಟರ್‌ ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳೇ ಮುಖ್ಯವಾಗಿದ್ದವು. ಆದರೆ ಹೊಸ ವಿಧಾನದಲ್ಲಿ ವಿದ್ಯಾರ್ಥಿ ಪ್ರವೇಶ ಪಡೆದ ದಿನದಿಂದಲೇ ಅವರ ಮೌಲ್ಯಮಾಪನ ಆರಂಭವಾಗುತ್ತದೆ. ಕಾಲೇಜು ಆರಂಭದಲ್ಲಿ ಒಂದು ವಾರ ಎಲ್ಲ ವಿದ್ಯಾರ್ಥಿಗಳಿಗೆ ‘ಇಂಡಕ್ಷನ್‌ ಪ್ರೋಗ್ರಾಮ್‌’ ಇರುತ್ತದೆ. ಇದಕ್ಕೆ 50 ಅಂಕಗಳನ್ನು ಯುವಿಸಿಇ ನಿಗದಿ ಮಾಡಿದೆ. ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ವಿದ್ಯಾರ್ಥಿಗಳಿಗೆ 1 ಕ್ರೆಡಿಟ್‌ ದೊರೆಯುತ್ತದೆ. ಅದರ ಜತೆಗೆ ನಿರಂತರ ಆಂತರಿಕ ಮೌಲ್ಯಮಾಪನ (ಸಿಐಇ), ಸೆಮಿಸ್ಟರ್‌ ಅಂತ್ಯದ ಪರೀಕ್ಷೆಯ (ಎಸ್‌ಇಇ) ಅಂಕಗಳನ್ನು ಆಧರಿಸಿ ವಿದ್ಯಾರ್ಥಿಗಳಿಗೆ ಗುಣಾಂಕಗಳನ್ನು (ಕ್ರೆಡಿಟ್‌) ನೀಡಲಾಗುತ್ತದೆ. ಪ್ರತಿ ಸೆಮಿಸ್ಟರ್‌ನ ಸಿಐಇನಲ್ಲಿ 50 ಅಂಕಗಳು ನಿಗದಿಯಾಗಿರುತ್ತವೆ. ಇದರಲ್ಲಿ 20 ಅಂಕಗಳ ಎರಡು ಪರೀಕ್ಷೆಗಳು (ಒಟ್ಟು 40 ಅಂಕ) ನಡೆಯುತ್ತವೆ. ಅಲ್ಲದೆ ಉಪನ್ಯಾಸ, ರಸಪ್ರಶ್ನೆ, ಪ್ರಬಂಧ ಮಂಡನೆ, ಸಂಶೋಧನಾ ಚಟುವಟಿಕೆಗೆ 10 ಅಂಕಗಳನ್ನು ನೀಡಲಾಗುತ್ತದೆ. ಈ 50 ಅಂಕಗಳಿಗೆ ಪಾಸಾಗಲು ವಿದ್ಯಾರ್ಥಿ 20 ಅಂಕಗಳನ್ನು (ಶೇ 40) ಪಡೆಯಲೇಬೇಕು. ಎಸ್‌ಇಇ ಪರೀಕ್ಷೆಯು ಪ್ರತಿ ಪತ್ರಿಕೆಗೆ 100 ಅಂಕಗಳಂತೆ ನಡೆಯುತ್ತದೆ. ಸಿಐಇ ಮತ್ತು ಎಸ್‌ಇಇ ವಿಧಾನವನ್ನು ಕ್ರೋಡೀಕರಿಸಿ ಫಲಿತಾಂಶ ಪ್ರಕಟವಾಗುತ್ತದೆ. ಗ್ರೇಡಿಂಗ್‌ ಪದ್ಧತಿ ಯುವಿಸಿಇ ಏಳು ಬಗೆಯ ಗ್ರೇಡಿಂಗ್‌ ಅನ್ನು ವಿದ್ಯಾರ್ಥಿಗಳಿಗೆ ನೀಡಲಿದೆ. 90ಕ್ಕಿಂತ ಅಂಕಗಳಿಗೂ ಹೆಚ್ಚು ಪಡೆದವರಿಗೆ ‘’ (); 75– 90 ಅಂಕ ಪಡೆದವರಿಗೆ ‘’ (); 60– 75 ಅಂಕ ಪಡೆದವರಿಗೆ ‘ ’ (); 50–60 ಅಂಕ ಪಡೆದವರಿಗೆ ‘’ (); 45–50 ಅಂಕ ಪಡೆದವರಿಗೆ ‘’ (); 40– 45 ಅಂಕ ಪಡೆದವರಿಗೆ ‘’ (); 40ಕ್ಕಿಂತ ಕಡಿಮೆ ಅಂಕ ಪಡೆದವರಿಗೆ ‘’ () ಎಂಬ ಗ್ರೇಡಿಂಗ್‌ ದೊರೆಯಲಿದೆ. ಕೌಶಲವೃದ್ಧಿಗೆ ಕಾರ್ಯಕ್ರಮ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಆರು ದಿನಗಳ ಕೌಶಲ ಅಭಿವೃದ್ಧಿ ಕಾರ್ಯಕ್ರಮವನ್ನು ಯುವಿಸಿಇ ಹಮ್ಮಿಕೊಂಡಿದೆ. ಅಭಿವ್ಯಕ್ತ ಮತ್ತು ಸಂವಹನ ಕುರಿತು ವಿಶೇಷವಾಗಿ ತರಗತಿಗಳನ್ನು ನಡೆಸಲಿದೆ. ಈ ಮೂಲಕ ಎಲ್ಲ ವಿದ್ಯಾರ್ಥಿಗಳು ಕ್ಯಾಂಪಸ್‌ ಸೆಲೆಕ್ಷನ್‌ ಮೂಲಕ ಉದ್ಯೋಗ ಪಡೆದುಕೊಳ್ಳಲಿ ಎಂಬುದು ಕಾಲೇಜಿನ ಉದ್ದೇಶ. ಮೂಲಸೌಕರ್ಯಕ್ಕೆ ಒತ್ತು ಯುವಿಸಿಇಯಲ್ಲಿ ಮೂಲಸೌಕರ್ಯ ಕೊರತೆಯನ್ನು ನೀಗಿಸಲು ಸರ್ಕಾರ ಮತ್ತು ಬೆಂ.ವಿ.ವಿ ಕ್ರಮ ತೆಗೆದುಕೊಂಡಿದೆ. ಇಲ್ಲಿನ ಪಾರಂಪರಿಕ ಕಟ್ಟಡದ ನವೀಕರಣ ಮತ್ತು ಮೂಲಸೌಕರ್ಯಕ್ಕೆ ರಾಜ್ಯ ಸರ್ಕಾರ 2017–18ನೇ ಸಾಲಿನಲ್ಲಿ ₹ 25 ಕೋಟಿ ಒದಗಿಸಿದೆ. ಅಲ್ಲದೆ ಬೆಂಗಳೂರು ವಿಶ್ವವಿದ್ಯಾಲಯವೂ ₹ 5 ಕೋಟಿ ನೀಡಿದೆ. ಪಾರಂಪರಿಕ ಕಟ್ಟಡದ ವಿನ್ಯಾಸಕ್ಕೆ ಧಕ್ಕೆ ಬಾರದಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಂಗವಿಕಲ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಲಿಫ್ಟ್‌ ಮತ್ತು ರ‍್ಯಾಂಪ್‌ ಅಳವಡಿಸಿಕೊಡಲಿದೆ ಎಂದು ಯುವಿಸಿಇ ಪ್ರಾಂಶುಪಾಲ ಡಾ.ಎಚ್‌.ಎನ್‌. ರಮೇಶ್‌ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.