ವಿಶೇಷಣ ಮಹತ್ವ ಉದ್ಗಾರ ವಾಚಕ ವಿಶೇಷಣಗಳು/ ನಾಮಪದದ ಬಗ್ಗೆ ಆಶ್ಚರ್ಯವನ್ನು ಒಂದು ಉದ್ಗಾರದ ಮೂಲಕ ಸೂಚಿಸುವ ಪದವನ್ನು ಉದ್ಗಾರ ವಾಚಕ ವಿಶೇಷಣವೆಂದು ತಿಳಿಯಲಾಗುತ್ತದೆ. ಉದಾಹರಣೆ/ ಏನು!/ಎಂತಹ!/! ಉಪಯೋಗ/ ಏನು ಅದ್ಭುತ ಪವಾಡ!/ ! ಎಂತಹ ಪ್ರತಿಭಾ ಶಾಲಿ!/ ! ನಿಶ್ಚಯಾರ್ಥಕ ವಿಶೇಷಣಗಳು( ) ನಾಮಪದಗಳನ್ನು ಕುರಿತು ನಿಶ್ಚಯವನ್ನು ವ್ಯಕ್ತಪಡಿಸುವುದಕ್ಕಾಗಿ ಅಥವಾ ಒತ್ತಿ ಹೇಳುವುದಕ್ಕಾಗಿ ಬಳಸುವ ಪದಗಳನ್ನು ನಿಶ್ಚಯಾರ್ಥಕ ವಿಶೇಷಣಗಳೆಂದು ಕರೆಯುತ್ತಾರೆ. ಈ ವಿಶೇಷಣಗಳು ನಾಮಪದಗಳ ಪ್ರಾಧಾನ್ಯತೆಯನ್ನು ಸ್ಪಷ್ಟವಾಗಿ ಪ್ರಕಟಿಸುತ್ತವೆ. ಉದಾಹರಣೆ/: ಸ್ವಂತ/ತನ್ನದೆ ಆದ-, ಅದೇ/ . ಪ್ರಯೋಗ/ 1.ನನ್ನ ಸ್ವಂತ ಅಂಗಡಿಯು ಪ್ರಗತಿ ಹೊಂದುತ್ತದೆ. . 2.ನಾನು ನನ್ನ ಸ್ವಂತ ಕೈಗಳಿಂದ ನಾಯಿಯನ್ನು ಹೂಳುತ್ತೇನೆ. . 3.ನನ್ನ ಮಗ ಅದೇ ರುಚಿಕರವಾದ ಭಕ್ಷ್ಯವನ್ನು ಬಯಸುತ್ತಾನೆ./ . 4. ನನ್ನ ಅತ್ಯಂತ ಶ್ರದ್ಧೆಯೆ ಯಶಸ್ಸನ್ನು ತರುತ್ತದೆ. . ವಿಶೇಷಣಗಳ ರಚನೆ ( ) ಕನ್ನಡ ಭಾಷೆಯಲ್ಲಿಯೂ ಕೂಡ ನಾಮಪದದಿಂದ ವಿಶೇಷಣವನ್ನು ರೂಪಾಂತರಿಸಲು ಸಾಧ್ಯ. ಅದೇ ರೀತಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿಯೂ ಸಹಾ ಮಾಡಬಹುದಾಗಿದೆ. ಹಲವಾರು ನಾಮಪದಗಳಿಗೆ ಹಲವಾರು ವಿಶೇಷಣ ರೂಪಗಳಿರುತ್ತವೆ. ರೂಪಾಂತರಿಸುವಿಕೆಯು ನಿರ್ದಿಷ್ಟ ನಿಯಮಗಳಿಗೆ ಒಳಪಡುವುದಲ್ಲದೆ, ಸ್ವತಂತ್ರ್ಯವಾಗಿಯೂ ಸಹಾ ಆಗುವುದರಿಂದ, ಎಲ್ಲವನ್ನೂ ನೆನಪಿನಲ್ಲಿಡಲು ಸುಲಭಸಾಧ್ಯವಿಲ್ಲ. ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು. ಬರವಣಿಗೆ ಮತ್ತು ಆಡುವ ಮಾತಿನಲ್ಲಿ ಪದೇ ಪದೇ ಇವುಗಳನ್ನು ಉಪಯೋಗಿಸಿದರೆ ಮಾತ್ರ ಜ್ಞಾಪಕದಲ್ಲಿಡಲು ಸಾಧ್ಯ. ಓದಿದ್ದೆಲ್ಲವನ್ನೂ ಮತ್ತು ಕೇಳಿಸಿಕೊಂಡಿದ್ದೆಲ್ಲವನ್ನೂ ಯಾವಾಗಲೂ ಬರವಣಿಗೆಯ ರೂಪದಲ್ಲಿ ಇಡಲು ಸಾಧ್ಯವಾಗದಿರುವುದರಿಂದ ಓದುವಾಗಲೇ ಅವಸರಪಡದೇ ಗಮನವಿಟ್ಟು ಓದಿ ಮನನ ಮಾಡಿಕೊಳ್ಳುವುದರಿಂದ ರೂಪಾಂತರ ಹೊಂದಿದ ವಿಶೇಷಣಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯ. ಬರವಣಿಗೆಯನ್ನು ಸುಂದರಗೊಳಿಸಲು ವಿಶೇಷಣಗಳು ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ವಿಶೇಷಣಗಳ ರಚನೆಯ ಕೆಲವು ವಿಧಾನಗಳನ್ನು ಕೆಳಗೆ ವಿವರಿಸಲಾಗಿದೆ. ಬಹುಸಂಖ್ಯೆಯ ವಿಶೇಷಣಗಳು/ ನಾಮಪದ / ಗಳಿಂದ ರೂಪಿತಗೊಳ್ಳುತ್ತವೆ. ವಿಶೇಷಣಗಳ ರಚಿಸುವಿಕೆ ( ) ವಿಭಿನ್ನ ನಾಮಪದಗಳಿಗೆ ನಿರ್ದಿಷ್ಟವಾದ ಪ್ರತ್ಯಯಗಳನ್ನು / ಸೇರಿಸುವುದರಿಂದ ಆ ನಾಮಪದಗಳು ವಿಶೇಷಣಗಳಾಗಿ/ ರೂಪುಗೊಳ್ಳುತ್ತವೆ. ನಾಮಪದಗಳಿಗೆ ಪ್ರತ್ಯಯಗಳನ್ನು ಸೇರಿಸುವ ವಿಷಯಕ್ಕೆ ಬಂದಾಗ ಯಾವ ಸರಳವಾದ ನಿಯಮಗಳೂ ಇಲ್ಲ. ಒಂದು ಗುಂಪಿನ ನಾಮಪದಗಳಿಗೆ ನಿರ್ದಿಷ್ಟ ಪ್ರತ್ಯಯವನ್ನು ಸೇರಿಸಿ ವಿಶೇಷಣಗಳನ್ನು ರೂಪಿಸಿದ ಪರಿಪಾಠವಿದೆ. ಹೀಗೆ ಪ್ರತ್ಯಯವನ್ನು ಸೇರಿಸುವಾಗ ಕೆಲವೊಮ್ಮೆ, ಕೆಲವೊಂದು ನಾಮಪದಗಳ ಕೊನೆಯ ಅಕ್ಷರಗಳು ಲುಪ್ತವಾಗಿ, ವಿಶೇಷಣಗಳು ರೂಪುಗೊಳ್ಳುತ್ತವೆ. ನಾಮಪದವನ್ನು ವಿಶೇಷಣವನ್ನಾಗಿ ರೂಪಿಸಲು ಕಾರಣವಾದ ಪ್ರತ್ಯಯಗಳು ಬಹಳಷ್ಟಿವೆ. ಇಂತಹ ಪ್ರತ್ಯಯಗಳ ಸಂಖ್ಯೆ ಅಧಿಕವಾಗಿರುವುದರಿಂದ, ಆ ಎಲ್ಲಾ ಪ್ರತ್ಯಯಗಳಲ್ಲಿ ಕೆಲವನ್ನು ಈ ಕೆಳಗೆ ಕಾಣಿಸಲಾಗಿದೆ. ವಿದ್ಯಾಕಾಂಕ್ಷಿಗಳು ಇಂಗ್ಲಿಷ್ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಾಸ ಮಾಡುತ್ತಾ ಹೋದಾಗ ಇಂತಹ ಅನೇಕ ಪ್ರತ್ಯಯಗಳು ಗಮನಕ್ಕೆ ಬರುತ್ತವೆ. ಇಂತಹ ಸಂದರ್ಭದಲ್ಲಿ ಇಂತಹ ಪ್ರತ್ಯಯಗಳನ್ನು ಹೆಚ್ಚು ಆಸಕ್ತಿಯಿಂದ ಗಮನಿಸಿ ಜೋಡಿಪದಗಳಾದ ನಾಮಪದ ಮತ್ತು ವಿಶೇಷಣವನ್ನು ಕೂಲಂಕಷವಾಗಿ ಅವಲೋಕಿಸಿ, ಸಾಧ್ಯವಾದಷ್ಟು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಉದಾಹರಣೆಗಳನ್ನು ಮುಂದಿನ ವಾರ ನೋಡಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.