ಪ್ರಜಾವಾಣಿ ಕ್ವಿಜ್‌ 1) ಈ ಕೆಳಕಂಡ ಯಾವ ಕಾಲದ ಮಳೆಯನ್ನು ಕರ್ನಾಟಕದಲ್ಲಿ ‘ಕಾಫಿಯ ಹೂ ಮಳೆ’ ಎಂದು ಕರೆಯಲಾಗುತ್ತದೆ? ) ಬೇಸಿಗೆ ಕಾಲದ ಮಳೆ ) ಹಿಂಗಾರು ಮಳೆ ) ಸೈಕ್ಲೋನ್ ಮಳೆ ) ಚಳಿಗಾಲದ ಮಳೆ 2)1936ರಲ್ಲಿ ಸ್ಥಾಪನೆಯಾದ ‘ಮೈಸೂರು ಪೇಪರ್ ಮಿಲ್’ ಕಾರ್ಖಾನೆಯು ಈ ಕೆಳಕಂಡ ಯಾವ ನಗರದಲ್ಲಿದೆ? ) ಭದ್ರಾವತಿ ) ದಾವಣಗೆರೆ ) ಮೈಸೂರು ) ಮಂಗಳೂರು 3)ದಕ್ಷಿಣ ಭಾರತವನ್ನು ಆಳ್ವಿಕೆ ಮಾಡಿದವರಲ್ಲಿ ಚೋಳರು (ಕ್ರಿ.ಶ. 150-300) ಪ್ರಮುಖರು. ಚೋಳರಲ್ಲಿ ಪ್ರಖ್ಯಾತನಾದ ಅರಸ ಯಾರು ? ) ಇಳ್ವೆಯಾಳ್ ಚೋಳ ) ಕರಿಕಾಳ ಚೋಳ ) ಸೆಂಗಣ್ಣನ್ ) ಉದಯನ್ ಚೇರಾಲ್ 4)ಕ್ರಿ.ಶ. 1240ರಲ್ಲಿ ಹೊಯ್ಸಳ ದೊರೆ ಎರಡನೇ ಸೋಮೇಶ್ವರ ಯಾವ ದೇವಾಲಯವನ್ನು ನಿರ್ಮಾಣ ಮಾಡಿದನು? ) ವಿಷ್ಣು ದೇವಾಲಯ ) ಹರಿಹರೇಶ್ವರ ದೇವಾಲಯ ) ಚಾಮುಂಡಿ ದೇವಾಲಯ ) ಪಾತಾಳ ಆಂಜನೇಯಸ್ವಾಮಿ ದೇವಾಲಯ 5) ‘ಅಭಿನವ ಕಾಳಿದಾಸ’ ಎಂದು ಕನ್ನಡದ ಯಾವ ಕವಿಯನ್ನು ಕರೆಯಲಾಗುವುದು? ) ಕುವೆಂಪು ) ಕೆ. ಎಸ್. ನರಸಿಂಹಸ್ವಾಮಿ ) ಬಸಪ್ಪ ಶಾಸ್ತ್ರಿ ) ತೀನಂಶ್ರೀ 6)ಕ್ಲೋರಿನ್ ರಾಸಾಯನಿಕ ಸಂಕೇತ cl2 ಆದರೆ ಬ್ಲೋರಿನ್‌ನ ರಾಸಾಯನಿಕ ಸಂಕೇತ ಯಾವುದು? ) bhr2 ) blr2 ) br2 ) bor2 7)ಹಸಿರು ಸಸ್ಯಗಳು ಯಾವ ಪ್ರಕ್ರಿಯೆ ಮೂಲಕ ಕಾರ್ಬೊಹೈಡ್ರೇಟ್‌ಗಳನ್ನು ತಯಾರಿಸುತ್ತವೆ? ) ವಿದಳನ ಪ್ರಕ್ರಿಯೆ ) ಪರಾಗಸ್ಪರ್ಶದ ಮೂಲಕ ) ದುಂಬಿಗಳ ಮುಖಾಂತರ ) ದ್ಯುತಿ ಸಂಶ್ಲೇಷಣೆ ಕ್ರಿಯೆ 8)ಅತ್ಯಧಿಕ ಅಂತರ್ಗಮನ ಶಕ್ತಿ ಹೊಂದಿರುವ ವಿಕಿರಣ ಯಾವುದು ? ) ಗಾಮಾ ಕಿರಣಗಳು ) ವೈ ವಿಕಿರಣಗಳು ) ಸೂರ್ಯನ ಕಿರಣ ) ಕ್ಷ ಕಿರಣಗಳು 9)ಈ ಕೆಳಕಂಡ ಯಾವ ರಾಜ್ಯದಲ್ಲಿ ಆಸ್ತಿಯ ಹಕ್ಕು ಮೂಲಭೂತ ಹಕ್ಕಾಗಿದೆ? ) ಜಮ್ಮು ಮತ್ತು ಕಾಶ್ಮೀರ ) ಅರುಣಾಚಲ ಪ್ರದೇಶ ) ಪಶ್ಚಿಮ ಬಂಗಾಳ ) ನವದೆಹಲಿ 10)ಈಜಿಪ್ಟ್ ನಾಗರಿಕತೆಯಲ್ಲಿ ಜೀವ ನದಿ ಎಂದೇ ಪೂಜಿಸಲ್ಪಡುತ್ತಿದ್ದ ನೈಲ್ ನದಿಯ ಉಪ ನದಿ ಯಾವುದು ? ) ಆಟಬಾರ ) ಅಬಿಸಿನಿ ) ಟೈಗ್ರಿಸ್ ) ಯೂಪ್ರಿಸ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.