ಉದ್ಯೋಗ ಅವಕಾಶ ಅಲ್ಲಲ್ಲಿ ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪೆನಿ, ಕರ್ನಾಟಕ ಅರಣ್ಯ ಇಲಾಖೆ, ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಷನ್‌, ಸೇನಾಪಡೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಸೆಂಟ್ರಲ್‌ ಕೋಲ್‌ಫೀಲ್ಡ್ಸ್‌ ಲಿಮಿಟೆಡ್‌ ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪೆನಿ ಜೆಸ್ಕಾಂನಲ್ಲಿ 1,840 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/04/2016. ಹುದ್ದೆ ವಿವರ: 1) ಜೂನಿಯರ್‌ ಲೈನ್‌ಮನ್‌ (ಜೆಎಲ್‌ಎಂ): 540 ಹುದ್ದೆಗಳು, ವೇತನ ಶ್ರೇಣಿ: ರೂ 7350ರಿಂದ 15710, (2) ಜೂನಿಯರ್ ಸ್ಟೇಷನ್‌ ಆಪರೇಟರ್‌ (ಜೆಎಸ್‌ಒ): 1300, ವೇತನ ಶ್ರೇಣಿ: ರೂ. 7950ರಿಂದ 16790 ವಿದ್ಯಾರ್ಹತೆ: 1) ಎಸ್ಸೆಸ್ಸೆಲ್ಸಿ ಉತ್ತೀರ್ಣ. 2) ಔದ್ಯೋಗಿಕ ತರಬೇತಿ ಸಂಸ್ಥೆಯಲ್ಲಿ/ಕೇಂದ್ರದಿಂದ ಎಲೆಕ್ಟ್ರಿಷಿಯನ್‌ ವೃತ್ತಿಯಲ್ಲಿ 18/24 ತಿಂಗಳಿನ ಪಠ್ಯ ಕ್ರಮದಲ್ಲಿ ಉತ್ತೀರ್ಣರಾಗಿರುವ ಐಟಿಐ ಪ್ರಮಾಣ ಪತ್ರ ಹೊಂದಿದವರು. ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ಜೆಎಲ್‌ಎಂ: ರೂ 200, ಜೆಎಸ್‌ಒ: ರೂ 400 ಹೆಚ್ಚಿನ ಮಾಹಿತಿಗೆ .. ಕರ್ನಾಟಕ ಅರಣ್ಯ ಇಲಾಖೆ ಅರಣ್ಯ ಇಲಾಖೆಯಲ್ಲಿ 460 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17/05/2016. ಹುದ್ದೆ ಹೆಸರು: ಉಪ ವಲಯ ಅರಣ್ಯಾಧಿಕಾರಿ ವೇತನ ಶ್ರೇಣಿ: ರೂ 12,500ರಿಂದ 24,000 ವಿದ್ಯಾರ್ಹತೆ: ಬಿಎಸ್ಸಿ (ಅರಣ್ಯ ವಿಜ್ಞಾನ) ಪದವಿ ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 100+12 ಆಯ್ಕೆ ವಿಧಾನ: ಲಿಖಿತ ಆಪ್ಟಿಟ್ಯೂಡ್‌ ಪರೀಕ್ಷೆ ಹಾಗೂ ದೈಹಿಕ ಅರ್ಹತಾ ಪರೀಕ್ಷೆ ಹೆಚ್ಚಿನ ಮಾಹಿತಿಗೆ ... ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಷನ್‌ ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿ 183 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/05/2016. ಹುದ್ದೆ ಹೆಸರು: ಎಕ್ಸಿಕ್ಯೂಟೀವ್‌ ಎಂಜಿನಿಯರ್‌ ಟ್ರೈನಿ (ಮೆಕಾನಿಕಲ್‌: 75, ಎಲೆಕ್ಟ್ರಿಕಲ್: 32, ಎಲೆಕ್ಟ್ರಾನಿಕ್ಸ್‌: 26, ಕೆಮಿಕಲ್‌: 28, ಇನ್‌ಸ್ಟ್ರುಮೆಂಟೇಷನ್‌: 12, ಇಂಡಸ್ಟ್ರಿಯಲ್‌ ಅಂಡ್‌ ಫೈರ್‌ ಸೇಫ್ಟಿ: 10 ಹುದ್ದೆ) ಸ್ಟೈಪೆಂಡ್‌: ರೂ 20,000, ವೇತನ ಶ್ರೇಣಿ: ರೂ 15,600ರಿಂದ 39,100 (ಸೈಂಟಿಫಿಕ್‌ ಆಫೀಸರ್‌ ಆಗಿ) ವಿದ್ಯಾರ್ಹತೆ: ಶೇ 60 ಅಂಕಗಳೊಂದಿಗೆ ಬಿ.ಇ/ಬಿ.ಟೆಕ್‌/ಬಿ.ಎಸ್ಸಿ ಎಂಜಿನಿಯರಿಂಗ್‌ (4 ವರ್ಷ) ವಯೋಮಿತಿ: 26 ವರ್ಷ ದಾಟಿರಬಾರದು. ಹೆಚ್ಚಿನ ಮಾಹಿತಿಗೆ ... ಸೇನಾಪಡೆ 635 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/05/2016. ಹುದ್ದೆ ಹೆಸರು: ಹವಿಲ್ದಾರ್‌ ಎಜುಕೇಷನ್‌ (ವಿಜ್ಞಾನ ಮತ್ತು ಕಲಾ) ವೇತನ ಶ್ರೇಣಿ: ರೂ 5,200ರಿಂದ 20,200 ವಿದ್ಯಾರ್ಹತೆ: ಸೈನ್ಸ್‌: ಮೆಥಮೆಟಿಕ್ಸ್‌, ಫಿಜಿಕ್ಸ್‌, ಕೆಮಿಸ್ಟ್ರಿ, ಬಾಟನಿ, ಜೂವಾಲಜಿ, ಬಯೋಲಜಿ,ಎಲೆಕ್ಟ್ರಾನಿಕ್ಸ್‌,ಕಂಪ್ಯೂಟರ್‌ನಲ್ಲಿ ಎಂಎಸ್ಸಿ/ಬಿಎಸ್ಸಿ/ಎಂಸಿಎ/ಬಿಸಿಎ/ಬಿ.ಟೆಕ್/ಬಿಎಸ್ಸಿ (ಐಟಿ). ಕಲಾ: ಇಂಗ್ಲಿಷ್‌ ಸಾಹಿತ್ಯದಲ್ಲಿ ಎಂಎ/ಬಿಎ ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷ. ವಿಳಾಸ: ಮುಖ್ಯಕಚೇರಿ ರಿಕ್ರೂಟಿಂಗ್‌ ಜೋನ್‌, ಬೆಂಗಳೂರು, 148, ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ರಸ್ತೆ, ಬೆಂಗಳೂರು: 560025 ಹೆಚ್ಚಿನ ಮಾಹಿತಿಗೆ ://../ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊದ ಲಿಕ್ವಿಡ್‌ ಪ್ರಾಪಲ್ಷನ್‌ ಸಿಸ್ಟಮ್‌ ಸೆಂಟರ್‌ನಲ್ಲಿ 42 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06/05/2016. ಹುದ್ದೆ ಹೆಸರು: 1) ಟೆಕ್ನಿಕಲ್‌ ಅಸಿಸ್ಟೆಂಟ್‌: 18 ಹುದ್ದೆ, ವೇತನ ಶ್ರೇಣಿ: ರೂ 9300ರಿಂದ 34800, ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲಿ ಡಿಪ್ಲೊಮಾ ಎಂಜಿನಿಯರ್ (ಸಂಬಂಧಪಟ್ಟ ವಿಷಯಗಳಲ್ಲಿ) , (2) ಟೆಕ್ನಿಷಿಯನ್‌ ‘ಬಿ’: 23 ಹುದ್ದೆ, (3) ಡ್ರಾಟ್ಸ್‌ಮನ್‌ ‘ಬಿ’: 1 ಹುದ್ದೆ, ವೇತನ ಶ್ರೇಣಿ: ರೂ 5200ರಿಂದ 20200, ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ/ಎಸ್‌ಎಸ್‌ಸಿ ಉತ್ತೀರ್ಣ ಹಾಗೂ ಐಟಿಐ/ಎನ್‌ಟಿಸಿ/ಎನ್‌ಎಸಿ. ವಯೋಮಿತಿ: ಕನಿಷ್ಠ: 18, ಗರಿಷ್ಠ: 35 ವರ್ಷ ಹೆಚ್ಚಿನ ಮಾಹಿತಿಗೆ ... ಸೆಂಟ್ರಲ್‌ ಕೋಲ್‌ಫೀಲ್ಡ್ಸ್‌ ಲಿಮಿಟೆಡ್‌ ಸಿಸಿಎಲ್‌ನಲ್ಲಿ 878 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/04/2016. ಹುದ್ದೆ ಹೆಸರು: 1) ಜೂನಿಯರ್‌ ಓವರ್‌ಮನ್‌: 148 ಹುದ್ದೆ, 2) ಮೈನಿಂಗ್‌ ಸಿರ್ದಾರ್‌: 349 ಹುದ್ದೆ, 3) ಡೆಪ್ಯುಟಿ ಸರ್ವೇಯರ್‌: 40 ಹುದ್ದೆ, 4) ಅಸಿಸ್ಟೆಂಟ್‌ ಫೋರ್‌ಮನ್ (ಎಲೆಕ್ಟ್ರಿಕಲ್‌): 143 ಹುದ್ದೆ, ಮೂಲವೇತನ: ರೂ 19035.02, (5) ಎಲೆಕ್ಟ್ರಿಸಿಯನ್‌/ಟೆಕ್ನಿಷಿಯನ್‌: 198 ಹುದ್ದೆ, ಮೂಲವೇತನ: 649.69 (ದಿನಕ್ಕೆ) ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 100 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳಿಸಲು ಕೊನೆಯ ದಿನಾಂಕ: 16/05/2016 ಹೆಚ್ಚಿನ ಮಾಹಿತಿಗೆ ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.