ಮಣಭಾರ ಬೇಕೆ? ಪ್ರಾಥಮಿಕ ಶಿಕ್ಷಣದಲ್ಲಿ ಎರಡು ಸಂಗತಿಗಳು ಬದಲಾಗಬೇಕಿವೆ. ಒಂದನೆಯದು, 1-5ನೇ ತರಗತಿಯ ಶಾಲೆಯ ವೇಳೆಯಲ್ಲಿ ಬದಲಾವಣೆ. ಎರಡನೆಯದು ಪಠ್ಯ ಪುಸ್ತಕಗಳ ಹೊರೆ ಇಳಿಸುವಲ್ಲಿ ಕ್ರಮ ಕೈಗೊಳ್ಳುವುದು. ಶಿಕ್ಷಣ ಎನ್ನುವುದು ಆಟ ಹಾಗೂ ಸಂಗೀತದ ಮೂಲಕ ಸುಲಭ ಸಾಧ್ಯವಾಗಬೇಕು; ಮಕ್ಕಳಿಗೆ ಅದೊಂದು ಶಿಕ್ಷೆಯಂತೆ ಭಾಸವಾಗಬಾರದು. ಆಟವಾಡುತ್ತ ಕಲಿಯುವ ವಯಸ್ಸಿನಲ್ಲಿ ಈ ಪರಿಯ ಪುಸ್ತಕಗಳ ಭಾರ, ಹೋಮ್ ವರ್ಕ್ ಕಿರಿಕಿರಿಯ ನಡುವೆ ಆ ಬಾಲಕ, ಬಾಲಕಿಯ ಪ್ರತಿಭೆ ಅರಳುವುದಾದರೂ ಹೇಗೆ? ಹೋಮ್‌ವರ್ಕ್ ಎನ್ನುವುದು ಇನ್ನೊಂದು ಬಗೆಯ ಹೊರೆ. ಮಕ್ಕಳ ವಯೋಮಾನವನ್ನು ಪರಿಗಣಿಸದೇ ಗುತ್ತಿಗೆ ರೂಪದಲ್ಲಿ ಹೋಮ್‌ವರ್ಕ್ ಕೊಡುವ ಪರಿಪಾಟವನ್ನು ಟೊರೆಂಟೊ ವಿವಿ ಪ್ರಾಧ್ಯಾಪಕರಾದ ಕೆಮರಾನ್ ಮತ್ತು ಬಾರ್ಟೆಲ್ ಎನ್ನುವವರು ವಿರೋಧಿಸಿದ್ದಾರೆ. ಪ್ರಾಥಮಿಕ ಹಂತದ ಮಕ್ಕಳಿಗೆ ಹೋಮ್‌ವರ್ಕ್ ಪ್ರಮಾಣವನ್ನೂ ಅವರು ಸೂಚಿಸಿದ್ದಾರೆ: *1 –3 ನೇ ತರಗತಿ 10 ರಿಂದ 30 ನಿಮಿಷ *4 –6 ನೇ ತರಗತಿ 30 ರಿಂದ 60 ನಿಮಿಷ *7 –9 ನೇ ತರಗತಿ 45 ರಿಂದ 90 ನಿಮಿಷ *9 ರ ನಂತರ 120 ನಿಮಿಷಗಳ ಮೇಲೆ ಶಾಲಾ ವೇಳೆಯಲ್ಲಿಯೂ ಬದಲಾವಣೆಗಳಾಗಬೇಕು. 1-5ನೇ ತರಗತಿಯವರೆಗಿನ ಮಕ್ಕಳು ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಶಾಲೆಯಲ್ಲಿ ಕುಳಿತುಕೊಳ್ಳುವುದು ವೈಜ್ಞಾನಿಕವಲ್ಲ. ಪದವಿ ಹಂತದಲ್ಲಿ ಓದುವ ವಿದ್ಯಾರ್ಥಿಗಳು 3 ಗಂಟೆ ತರಗತಿಯಲ್ಲಿ ಕುಳಿತರೆ ಸುಸ್ತು ಹೊಡೆಯುತ್ತಾರೆ.ಹೀಗಿರುವಾಗ ಈ ಚಿಕ್ಕ ಮಕ್ಕಳಿಗೆ ಬೆಳಿಗ್ಗೆಯಿಂದ ಸಾಯಂಕಾಲದವರೆಗಿನ ಶಾಲೆಯ ಪರಿಸರ ಎಷ್ಟರ ಮಟ್ಟಿಗೆ ಉಲ್ಲಾಸಿತವಾಗಬಲ್ಲದು? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.