ಬ್ಯಾಂಕಿಂಗ್‌ ಪರೀಕ್ಷೆಗೆ ಸಿದ್ಧತೆ ಹೀಗಿರಲಿ... ಬ್ಯಾಂಕ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಒಂದು ವರ್ಷಕ್ಕೆ 6 ಸಲ ಬ್ಯಾಂಕ್ ಪರೀಕ್ಷೆಯನ್ನು ಕರೆಯಲಾಗುತ್ತದೆ (ಎಸ್.ಬಿ.ಐ/ಐ.ಬಿ.ಪಿ.ಎಸ್ ಸೇರಿ) ಎಲ್ಲ ವರ್ಗದ ಎಲ್ಲ ಕಡೆಯ ಅಭ್ಯರ್ಥಿಗಳ (ಹಳ್ಳಿಯಾಗಲಿ, ದಿಲ್ಲಿಯಾಗಲಿ) ಆಸಕ್ತಿ ಬ್ಯಾಂಕಿನೆಡೆ ಹೆಚ್ಚುತ್ತಿದೆ. ಇದಕ್ಕೆ ಪೂರಕವೆಂಬಂತೆ ಏಪ್ರಿಲ್ ತಿಂಗಳಿನಲ್ಲಿ ಎಸ್.ಬಿ.ಐ 17000ಕ್ಕೂ ಅಧಿಕ (ಗುಮಾಸ್ತರ ಹುದ್ದೆ /ಜ್ಯೂನಿಯರ್ ಅಸೋಸಿಯೇಟ್ಸ) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಬ್ಯಾಂಕ್ ಸೇರಬಯಸುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ. ಈ ಮೊದಲು ಆನ್‌ಲೈನ್ ಪರೀಕ್ಷೆಯನ್ನು ಒಂದೇ ಹಂತದಲ್ಲಿ ನಡೆಸಲಾಗುತ್ತಿತ್ತು. ಕಳೆದ ವರ್ಷದಿಂದ ಈ ಪರೀಕ್ಷೆಯನ್ನು ಎರಡು ಹಂತದಲ್ಲಿ ನಡೆಸಲಾಗುತ್ತದೆ. (ಪ್ರಿಲಿಮ್ಸ್‌ ಮತ್ತು ಮೇನ್ಸ್‌) ಇಲ್ಲಿಯವರೆಗೆ ಎಸ್.ಬಿ.ಐ ಹೊರತುಪಡಿಸಿ, ಐ.ಬಿ.ಪಿ.ಎಸ್ ನಡೆಸುವ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಗುಮಾಸ್ತ ಹುದ್ದೆಗಳಿಗೆ ಸಂದರ್ಶನ ರದ್ದುಗೊಳಿಸಲಾಗಿದೆ. ಕೇವಲ ಆನ್‌ಲೈನ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅರ್ಹತಾ/ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಮೊದಲ ಹಂತ ಆನಲೈನ್ ಪರೀಕ್ಷೆ (ಪ್ರಿಲಿಮ್ಸ್) ಒಂದು ಗಂಟೆ ಅವಧಿಯದ್ದಾಗಿರುತ್ತದೆ. ಇಂಗ್ಲಿಷ್‌ ಭಾಷೆಗೆ ಅಂಕಗಳನ್ನು ಸಾಂಖ್ಯಿಕ ಅರ್ಹತೆ ಹಾಗೂ ರೀಸ್ನಿಂಗ್‌ ಎಬಿಲಿಟಿಗೆ 35 ಅಂಕಗಳನ್ನು ನಿಗದಿ ಪಡಿಸಿರಲಾಗುತ್ತದೆ. ಮೇನ್ಸ್‌ಗೆ ಫೈನಾನ್ಶಿಯಲ್ ವಿಷಯಕ್ಕೆ 50 ಪ್ರಶ್ನೆ, 50 ಅಂಕ, 35 ನಿಮಿಷಗಳನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ಇಂಗ್ಲಿಷ್‌ಗೆ 40 ಪ್ರಶ್ನೆ, 40 ಅಂಕ ಹಾಗೂ 45 ನಿಮಿಷಗಳನ್ನು ನಿಗದಿಪಡಿಸಲಾಗಿದೆ. ಕ್ವಾಂಟಿಟಿವ್‌ ಆ್ಯಪ್ಟಿಟೂಡ್‌, 50 ಪ್ರಶ್ನೆ, 50 ಅಂಕ ಹಾಗೂ 45 ನಿಮಿಷಗಳು ಕೊನೆಯದಾಗಿ ರೀಸ್ನಿಂಗ್‌ ಎಬಿಲಿಟಿ ಹಾಗೂ ಕಂಪ್ಯೂಟರ್ಸ್‌ ಸಂಬಂಧಿ 50 ಪ್ರಶ್ನೆ, 60 ಅಂಕಗಳು 45 ನಿಮಿಷಗಳನ್ನು ನೀಡಲಾಗುತ್ತದೆ. ಎಸ್.ಬಿ.ಐ ತನ್ನ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಸಂದರ್ಶನದ ಬಗ್ಗೆ ಎಲ್ಲಿಯೂ ಹೇಳಿಲ್ಲ. ಬದಲಾಗಿ ಇದು ಭಾರತ ಸರ್ಕಾರದ ಅನುಮೋದನೆಯ ಮೇರೆಗೆ ಎಂದಷ್ಟೇ ಹೇಳಿದೆ. ಆದ ಕಾರಣ ಆಕಾಂಕ್ಷಿಗಳು ಆದಷ್ಟು ಆನ್‌ಲೈನ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ ತಮ್ಮ ಸ್ಥಾನವನ್ನು ಸುಭದ್ರಗೊಳಿಸಿಕೊಳ್ಳುವುದು ಉತ್ತಮ. ಅಭ್ಯರ್ಥಿಗಳು ಪ್ರತಿ ವಿಭಾಗದಲ್ಲಿ ಬ್ಯಾಂಕ್ ನಿಗದಿಪಡಿಸುವ ನಿರ್ದಿಷ್ಟ ಅಂಕಗಳ ಆಧಾರದ ಮೇಲೆ ಅರ್ಹತೆ ಪಡೆಯುತ್ತಾರೆ. ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆಯಲಾಗುತ್ತದೆ. ಪ್ರಿಲಿಮ್ನರಿ ಹಂತದಲ್ಲಿ ಪಡೆದಿರುವ ಅಂಕಗಳನ್ನು ಅಭ್ಯರ್ಥಿಯ ಅಂತಿಮ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಕೇವಲ ಮೇನ್ಸ್‌ ಹಂತದಲ್ಲಿ ಪಡೆದಿರುವ ಅಂಕಗಳನ್ನು ಆಯ್ಕೆ ಪಟ್ಟಿ ಸಿದ್ಧಪಡಿಸಲು ಪರಿಗಣಿಸಲಾಗುತ್ತದೆ. ಎಸ್.ಬಿ.ಐ. ಪರೀಕ್ಷೆಯ ಕೆಲವು ಅಂಶಗಳು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್: ಮೂಲ ಸಂಖ್ಯಾತ್ಮಕ ಲೆಕ್ಕಗಳನ್ನು ( ) ಪರಿಹರಿಸುವ ಸಾಮರ್ಥ್ಯ ನಿಮ್ಮಲ್ಲಿದೆಯೇ? ಎಂಬುದರ ಬಗ್ಗೆ ಇರುವ ಪರೀಕ್ಷೆ. ಇಲ್ಲಿ ಮುಖ್ಯವಾಗಿ ಹೇಳುವುದಾದರೆ ಗಣಿತ ವಿಷಯದಲ್ಲಿ ಕಷ್ಟವೆನಿಸುವ ವಿದ್ಯಾರ್ಥಿಗಳು ಪ್ರತಿ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳನ್ನು ಬಿಡಿಸುವುದು ಹೀಗೆ ಮಾಡುವುದರಿಂದ ಕನಿಷ್ಠ ಕಟ್-ಆಫ್ ಆದರೂ ತಲುಪಬಹುದು. ನಂಬಿ ಇದೇನು ಅಂತಹ ಕಷ್ಟಕರ ಕೆಲಸವಲ್ಲ. ಸ್ಮಾರ್ಟ್‌ ವರ್ಕ್‌ದಿಂದ ಇದನ್ನು ಸುಲಭವಾಗಿ ಮಾಡಬಹುದು. ಇದಲ್ಲದೆ ನೀವು ಹೆಚ್ಚು-ಹೆಚ್ಚು ಪ್ರಶ್ನೆಗಳನ್ನು ಬಿಡಿಸುವುದನ್ನು ರೂಢಿಸಿಕೊಂಡಲ್ಲಿ ಸರಿಯಾದ ಉತ್ತರಗಳನ್ನು ಕಂಡುಹಿಡಿಯುವಲ್ಲಿ ನಿಮ್ಮ ವೇಗ ಮತ್ತು ನಿಖರತೆ ಹೆಚ್ಚಿಸಲು ಸಾಧ್ಯವಾಗುತ್ತದೆ. ನಿಗದಿಪಡಿಸಿರುವ ಸಮಯದ ಜೊತೆ ಹೊಂದಾಣಿಕೆಯಾಗುತ್ತದೆ. ಪ್ರತಿದಿನ ಅಭ್ಯಾಸ ಮಾಡುವಾಗ ದಿನದಿಂದ ದಿನಕ್ಕೆ ಟೇಬಲ್ಸ್‌, ಸ್ಕ್ವೇರ್‌್ಸ ಮತ್ತು ಕ್ಯೂಬ್ಸ್‌ ಜೊತೆಗೆ ರೇಷಿಯೋ ಮತ್ತು ಪ್ರಾಪೋರಷನ್, ಪರ್ಸೆಂಟೇಜ್, ಎವರೇಜ್‌ಸ್ ಭಾಗದಲ್ಲಿ ನೀವು ಪರಿಣಿತರಾಗುತ್ತಿರುವುದನ್ನು ಖಚಿತ ಪಡಿಸಿಕೊಳ್ಳಿ. ಏಕೆಂದರೆ ಅಪ್ಟಿಟ್ಯೂಡ್ ಲೆಕ್ಕಗಳನ್ನು ವೇಗವಾಗಿ ಬಿಡಿಸಲು ಸಾಮಾನ್ಯವಾಗಿ ಇವು ಮೂಲ ಸಾಧನಗಳು. ಮೇಲೆ ಕೊಟ್ಟಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆಳಗೆ ಕೊಟ್ಟಿರುವ ಕೆಲವು ವಿಷಯಗಳಲ್ಲಿ ನೀವು ಪರಿಣಿತರಾದರೆ ಕನಿಷ್ಠ ಅಂಕಗಳನ್ನು ಗಳಿಸಬಹುದು. ) ಸಿಂಪ್ಲಿಪೀಕೇಶನ್ ) ಸೀರಿಸ್ ) ಕ್ವಾಡ್ಯ್ರಾಟಿಕ್ ಇಕ್ವೇಷನ್ಸ )ಸ್ಪೀಡ್ ಮತ್ತು ಟೈಮ್ ) ಪ್ರಾಫಿಟ್ ಮತ್ತು ಲಾಸ್ ) ಸಿಂಪಲ್ ಇಂಟರೆಸ್ಟ್ ಮತ್ತು ಕಂಪೌಂಡ್ ಇಂಟರೆಸ್ಟ್ ) ರೇಷಿಯೋ ಮತ್ತು ಪ್ರಪೋರಷನ್ )ಪರ್ಸೆಂಟೇಜ್ ) ಟ್ರೇನ್ ) ಡೇಟಾ ಇಂಟರ್‌ಪ್ರಿಟೇಶನ್ (ಅತ್ಯಂತ ಸಾಮಾನ್ಯ ಮತ್ತು ಹೆಚ್ಚು ಅಂಕಗಳನ್ನು ಗಳಿಸಬಹುದು) ರೀಸ್ನಿಂಗ್: ರೀಸ್ನಿಂಗ್ ವಿಭಾಗವು ಸುಲಭ. ಇದಕ್ಕೆ ಅನುಗುಣವಾಗಿ ನಿಮ್ಮ ಪರಿಕಲ್ಪನೆಗಳು ಸರಿಯಾಗಿ ಒದಗಬೇಕಷ್ಟೆ. ರೀಸ್ನಿಂಗ್ವಿ ಭಾಗವು ನಿಮ್ಮ ಮೂಲ ತಾರ್ಕಿಕ ಮಟ್ಟವನ್ನು ಪರೀಕ್ಷಿಸುವ ಗುರಿಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಕೇಳುವ ವಿಷಯಗಳು ಪಝಲ್ಸ್, ಸೀಟಿಂಗ್ ಅರೇಂಜ್ಮೆಂಟ್, ಸಿಲಾಜಿಸಮ್, ಇನ್‌ಇಕ್ವ್ಯಾಲಿಟಿಸ್, ಮಶಿನ್ ಮತ್ತು ಇನ್‌ಪುಟ್, ಕೋಡಿಂಗ್ ಮತ್ತು ಡಿಕೋಡಿಂಗ್, ಡೈರೆಕ್ಷನ್ಸ್, ನಂಬರ್/ಆಲ್ಫಾಬೆಟ್ ಸೀರೀಸ್, ಬ್ಲಡ್ ರಿಲೇಶನ್ಸ್. ಮೇಲ್ಕಂಡ ಭಾಗಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಪ್ರಶ್ನೆಗಳನ್ನು ಬಿಡಿಸುವುದನ್ನು ರೂಢಿಸಿಕೊಂಡಲ್ಲಿ ನೀವು ತ್ವರಿತವಾಗಿ ಉತ್ತರಗಳನ್ನು ಕಂಡು ಹಿಡಿಯುವುದರಲ್ಲಿ ಸಹಾಯಕವಾಗುತ್ತದೆ. ಇಂಗ್ಲಿಷ್‌: ಈ ವಿಷಯದ ಮೂಲ ಉದ್ದೇಶವೆಂದರೆ ನಿಮಗೆ ಇಂಗ್ಲಿಷ್‌ನಲ್ಲಿ ಮಾತನಾಡುವ ಮತ್ತು ಬರೆಯುವ ಮೂಲ ತಿಳುವಳಿಕೆಯ ಸಾಮರ್ಥ್ಯವನ್ನು ( ) ಕಂಡು ಹಿಡಿಯುವ ವಿವಿಧ ಸಾಧನಗಳಾದ ( ) ರೀಡಿಂಗ್ ಕಂಪ್ರೆಹೆನ್ಷೆನ್, ಕ್ಲೋಸ್-ಟೆಸ್ಟ್, ಸೆಂಟೆನ್ಸ್ ಕರೆಕ್ಷನ್, ಪ್ಯಾರಾ ಜಂಬಲ್ಡ್ ಮುಂತಾದವುಗಳ ಮುಖಾಂತರ ಪರೀಕ್ಷಿಸುವುದು. ಮೇಲೆ ಕೊಟ್ಟಿರುವ ವಿಷಯಗಳಲ್ಲಿ ಕರಗತರಾಗಲು ಪ್ರತಿ ದಿನ ದಿನಪತ್ರಿಕೆ ಓದುವುದನ್ನು ರೂಢಿಸಿಕೊಳ್ಳಬೇಕು. ಇಂಗ್ಲಿಷ್‌ ವಿಷಯವನ್ನು ಹೆಚ್ಚು ಹೆಚ್ಚು ಓದಿದಷ್ಟು ಅದರಲ್ಲಿನ ವ್ಯಾಕರಣದ ಸರಿಯಾದ ಬಳಕೆ ಅರ್ಥವಾಗುತ್ತದೆ. ಪ್ರತಿದಿನವು ಶಬ್ದಕೋಶದ ಸಹಾಯದಿಂದ ಹೊಸ ಪದಗಳ ಅರ್ಥ ಕಂಡುಹಿಡಿದು ಅವುಗಳನ್ನು ನೆನಪಿನಲ್ಲಿಟ್ಟುಕೊಂಡು ದಿನ ನಿತ್ಯ ವ್ಯವಹರಿಸಿ (ಸ್ನೇಹಿತರೊಂದಿಗೆ/ಸಹಪಾಠಿಯೊಂದಿಗೆ) ಮತ್ತು ಸಾಧ್ಯವಾದಷ್ಟು ಆಂಗ್ಲ ದಿನಪತ್ರಿಕೆಗಳನ್ನು ಓದಿರಿ. ಕಂಪ್ಯೂಟರ್: ಕಂಪ್ಯೂಟರ್ ವಿಭಾಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸುವ ಉದ್ದೇಶವನ್ನು ಹೊಂದಬೇಕು. ಈ ಭಾಗದಲ್ಲಿ ಸಾಮಾನ್ಯವಾಗಿ ಬೇಸಿಕ್ ಕಂಪ್ಯೂಟಕರ್‌್ಸ ಬಗೆಗಿನ ಪ್ರಶ್ನೆಗಳನ್ನೇ ಕೇಳಲಾಗುತ್ತದೆ. ಜನರಲ್/ಫೈನಾನ್ಸಿಯಲ್ ಅವೇರ್‌್ನೆಸ್ ಬ್ಯಾಂಕಿಂಗ್ ವಲಯದ ಮೂಲಗಳು ಮತ್ತು ಸರಕಾರ ಹೇಗೆ ಆರ್ಥಿಕತೆಯನ್ನು ನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಮತ್ತು ಆರ್ಥಿಕ ವಲಯದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವಿರಬೇಕು. ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ಸಂಗತಿಗಳಾದ ಪ್ರಮುಖ ನದಿಗಳು, ಅಣೆಕಟ್ಟುಗಳು, ಪ್ರಮುಖ ದಿನಗಳು, ಅಣು ಸ್ಥಾವರಗಳು, ಭಾರತ ದೇಶದಲ್ಲಿನ ಪ್ರಮುಖ ವಿಮಾನ ನಿಲ್ದಾಣಗಳು, ವಿವಿಧ ಸಾರ್ವಜನಿಕ ಬ್ಯಾಂಕುಗಳ ಹೆಡ್‌ಕ್ವಾರ್ಟರ್‌್ಸ್‌, ಭಾರತದಲ್ಲಿನ ಪ್ರಮುಖ ರಾಷ್ಟ್ರೀಯ ಉದ್ಯಾನಗಳು ಇತ್ಯಾದಿ. ವಿವಿಧ ದೇಶದ ರಾಜಧಾನಿಗಳು, ಕರೆನ್ಸಿಗಳು, ಅಂತರಾಷ್ಟ್ರೀಯ ಪ್ರಮುಖ ಸಂಸ್ಥೆಗಳು, ಅದರ ಮುಖ್ಯಸ್ಥರು, ಕ್ರೀಡೆಗಳು ಹಾಗೂ ರಾಷ್ಟ್ರೀಯ/ಅಂತರಾಷ್ಟ್ರೀಯ ಮಟ್ಟದ ಪ್ರಚಲಿತ ವಿದ್ಯಮಾನಗಳು. ಎಲ್ಲ ವಿಷಯದಲ್ಲಿ 18-20 ಅಂಕಗಳನ್ನು ಗಳಿಸಿದರೆ ಉತ್ತಮ. 25 ಅಂಕಗಳ ವರೆಗೆ ಗಳಿಸಿದರೆ ನೀವು ಸುರಕ್ಷಿತ ಎಂದರ್ಥ. ಮೇನ್ಸ್‌ನಲ್ಲಿ ಕಂಪ್ಯೂಟರ್ ಜಿ.ಕೆ. ಮತ್ತು ಇಂಗ್ಲಿಷ್‌ ಹೆಚ್ಚು ಅಂಕ ಗಳಿಸಬಹುದಾದ ವಿಷಯಗಳಾಗಿರುವುದರಿಂದ ಇನ್ನಷ್ಟು ಹೆಚ್ಚು ಅಂಕ ಗಳಿಸುವುದರಿಂದ ನಿಮ್ಮ ಸ್ಥಾನವನ್ನು ಸುಭದ್ರಗೊಳಿಸಬಹುದು. ಪರೀಕ್ಷೆಯಲ್ಲಿ ಯಶಸ್ವಿಯಾಗುವ ಹಟ ನಿಮ್ಮಲ್ಲಿರಲಿ. ಪರೀಕ್ಷೆಗೆ ಬೇಕಾದ ಎಲ್ಲ ಕೌಶಲಗಳನ್ನು ಬೆಳೆಸಿಕೊಳ್ಳಿ. ನಿರಂತರ ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ನೀವು ಈ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಮರ್ಥರೆಂದು ಭಾವಿಸಿ. ಇತರರೊಂದಿಗೆ ನಿಮ್ಮನ್ನು ಹೋಲಿಸಿ ನಿಮ್ಮ ಸಾಮರ್ಥ್ಯವನ್ನು ಕುಗ್ಗಿಸಿಕೊಳ್ಳಬೇಡಿ. ಪಾಸಿಟಿವ್ ಆಗಿರಿ, ಗೆಲುವು ನಿಮ್ಮದೇ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.