ಪ್ರತಿಭಾನ್ವಿತರಿಗೆ ಸ್ಕಾಲರ್‌ಶಿಪ್ ಎಂಬ ಕಾಮಧೇನು ವಿವಿಧ ಬಗೆಯ ಸರ್ಕಾರದ ಹಾಗೂ ಸರ್ಕಾರೇತರ ಸಂಸ್ಥೆಗಳು ನೀಡುವ ವಿದ್ಯಾರ್ಥಿವೇತನಗಳನ್ನು ನೋಡಿ. ಇವುಗಳಲ್ಲಿ ಯಾವುದಾದರೂ ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಖಂಡಿತ ನೆರವಾಗುತ್ತದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ ಪಡೆಯಲು ಆರ್ಥಿಕ ತೊಂದರೆಯೇ ಅಡಚಣೆ. ಹೀಗೆ ಎಷ್ಟೋ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಓದಲು ಹಣಕಾಸಿನ ಸಹಾಯ ಬೇಡುವ ಪರಿಸ್ಥಿತಿ ಬಹಳಷ್ಟು ಜನರಿಗಿದೆ. ಏಕೆಂದರೆ ಇವರ ಪಾಲಕರ ಆದಾಯವು ತಮ್ಮ ಮಕ್ಕಳ ಉನ್ನತಾಭ್ಯಾಸಕ್ಕೆ ಹಣಕಾಸಿನ ವ್ಯವಸ್ಥೆ ಮಾಡಲು ಅಸಹಾಯಕರಾದ ಕಾರಣ ಎಷ್ಟೋ ಬಡ ವಿದ್ಯಾರ್ಥಿಗಳು ಅವರ ಓದನ್ನು ಮೊಟಕುಗೊಳಿಸಿ, ಕನಸುಗಳನ್ನು ಅದುಮಿಟ್ಟುಕೊಳ್ಳಬೇಕಾಗಬಹುದು. ಇಂತಹ ಎಷ್ಟೋ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ(ಸ್ಕಾಲರ್‌ಶಿಪ್) ನೀಡುವ ಹಾಗೂ ಸೌಲಭ್ಯಗಳನ್ನು ನೀಡುವ ಸರ್ಕಾರಿ, ಅರೆಸರ್ಕಾರಿ ಹಾಗೂ ಖಾಸಗಿ ಸೇವಾ ಸಂಸ್ಥೆಗಳಿವೆ. ಹಾಗಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಣಕಾಸಿನ ವಿಚಾರಕ್ಕಾಗಿ ಎದೆಗುಂದದೇ ವಿವಿಧ ರೀತಿಯ ವಿದ್ಯಾರ್ಥಿವೇತನ ಹಾಗೂ ಉನ್ನತ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಸರ್ಕಾರದ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಾಯವನ್ನು ಪಡೆಯಬಹುದು. ಇದರಿಂದ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಂಡು ಉನ್ನತ ಹುದ್ದೆಗಳನ್ನು ಪಡೆದು ಕುಟುಂಬಕ್ಕೆ ಹಾಗೂ ಸಮಾಜಕ್ಕೆ ನೆರವಾಗಬಹುದು. ವಿವಿಧ ಬಗೆಯ ಸರ್ಕಾರದ ಹಾಗೂ ಸರ್ಕಾರೇತರ ಸಂಸ್ಥೆಗಳು ನೀಡುವ ವಿದ್ಯಾರ್ಥಿವೇತನಗಳನ್ನು ನೋಡಿ. ಇವುಗಳಲ್ಲಿ ಯಾವುದಾದರೂ ನಿಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಖಂಡಿತ ನೆರವು ಸಿಗುತ್ತದೆ. * ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ: .... * ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ: .... * ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ: .... * ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ ( ) ಪ್ರತಿ ವರ್ಷವೂ ಪದವಿ ಪ್ರವೇಶ ಪಡೆಯುವ ಎಲ್ಲ ಜಾತಿಯ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ: .../ * ನಮ್ಮ ರಾಜ್ಯದ ಹೆಮ್ಮೆಯ ಐ.ಟಿ. ಕಂಪನಿ ಇನ್ಫೋಸಿಸ್ ನೀಡುವ ವಿದ್ಯಾರ್ಥಿ ವೇತನ: .. * ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ: .../ * ಧೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ: .../ * ಅಂಬೇಡ್ಕರ್ ನ್ಯಾಷನಲ್ ಮೆರಿಟ್ ಅವಾರ್ಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ: .../ * ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ( ): . ../ * ‘ಪ್ರಜಾವಾಣಿ’-‘ಡೆಕ್ಕನ್ ಹೆರಾಲ್ಡ್‌’ನ ಮಾತೃಸಂಸ್ಥೆಯಾದ ‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ ಸ್ಥಾಪಿಸಿರುವ ಟ್ರಸ್ಟ್ ವತಿಯಿಂದ ಉನ್ನತ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುತ್ತಿದೆ. ಪ್ರತಿ ವರ್ಷ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ನೆರವು ಕೋರಿ ಬೆಂಗಳೂರು ಕಚೇರಿಗೆ ಅರ್ಜಿ ಸಲ್ಲಿಸಬಹುದು. * ಮೆರಿಟ್ ಸ್ಕಾಲರಶಿಪ್ - ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿಶಿಕ್ಷಣ (ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ: . ../ * ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ. ಕಂಪೆನಿ ವಿಪ್ರೊ ಅವರ ಅಜೀಮ್ ಪ್ರೇಮ್‌ಜೀ ಫೌಂಡೇಷನ್ : .. * ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿಗಳ ಸ್ಕಾಲರ್‌ಶಿಪ್ ಯೋಜನೆ’ ಅಡಿಯಲ್ಲಿ ಡಾ. ಅಬ್ದುಲ್ ಕಲಾಮ್ ಹಾಗೂ ಅಟಲ್ ಬಿಹಾರಿ ಅವರ ಹೆಸರಿನಲ್ಲಿರುವ ಸ್ಕಾಲರಶಿಪ್‌ಗಳಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಶೇ.75ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹತ್ತು ಸಾವಿರ ರೂಪಾಯಿ ಧನಸಹಾಯ. ಹಾಗೂ ಪಿ.ಯು.ಸಿ.ಯಲ್ಲಿ ಶೇ. 85ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 25 ಸಾವಿರ ರೂಪಾಯಿ ಧನಸಹಾಯ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ... ಗೆ ಭೇಟಿ ನೀಡಿ. ಇಷ್ಟೊಂದು ವಿಧದ ವಿದ್ಯಾರ್ಥಿವೇತನಗಳ ಸೌಲಭ್ಯಗಳಿರುವಾಗ ಪ್ರತಿಭಾನ್ವಿತ ವಿದ್ಯಾರ್ಥಿಗಳು ಯಾವುದಾದರೂ ನೆರವನ್ನು ಪಡೆದು ಅವರ ಸುಂದರ ಬದುಕನ್ನು ರೂಪಿಸಿಕೊಳ್ಳಬಹುದು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.