ಪ್ರಜಾವಾಣಿ ಕ್ವಿಜ್‌ 1) 2016ನೇ ಸಾಲಿನ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾಗಿರುವ ಬೆಜವಾಡ ವಿಲ್ಸನ್‌ ಮತ್ತು ಟಿ.ಎಂ ಕೃಷ್ಣ ಅವರು ಯಾವ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ? ) ಸಫಾಯಿ ಕರ್ಮಚಾರಿ ಆಂದೋಲನ–ಸಂಗೀತ ) ಚಿತ್ರಕಲೆ–ಪರಿಸರ ) ಶೌಚಾಲಯ–ಕೃಷಿ ) ಸಾಹಿತ್ಯ–ವಿಜ್ಞಾನ 2) ಜುಲೈ 28ರಂದು ನಿಧನರಾದ ಖ್ಯಾತ ಲೇಖಕಿ ಮಹಾಶ್ವೇತಾ ದೇವಿ ಅವರ ಪ್ರಸಿದ್ಧ ಬಂಗಾಳಿ ಕೃತಿ ಯಾವುದು? ) ಶ್ರೀಕಂಠ ) ಚಾಣಕ್ಯ ನೀತಿ ) ದಿ ಪೋಸ್ಟ್‌ ಆಫೀಸ್‌ )ಮದರ್‌ ಆಫ್ 1084 3) ಆಗಸ್ಟ್ 5 ರಿಂದ ಆರಂಭಗೊಳ್ಳಲಿರುವ ರಿಯೊ ಒಲಿಂಪಿಕ್ ಕ್ರೀಡಾಕೂಟ ಯಾವ ದೇಶದಲ್ಲಿ ನಡೆಯಲಿದೆ? ) ಡೆನ್ಮಾರ್ಕ್ ) ಬ್ರೆಜಿಲ್ ) ಫ್ರಾನ್ಸ್ ) ಕೆನಡಾ 4) ಮಹಾದಾಯಿ ನೀರು ಹಂಚಿಕೆ ವಿವಾದವು ಈ ಕೆಳಕಂಡ ಯಾವ ರಾಜ್ಯಗಳ ಮಧ್ಯೆ ನಡೆಯುತ್ತಿದೆ? ) ಗೋವಾ-ತಮಿಳುನಾಡು ) ತೆಲಂಗಾಣ-ಮಹಾರಾಷ್ಟ್ರ ) ಕನಾರ್ಟಕ-ಗೋವಾ ) ತಮಿಳುನಾಡು-ಪುದುಚೇರಿ 5) ಜನಮತದ ಮೂಲಕ ಐರೋಪ್ಯ ಒಕ್ಕೂಟ (ಬ್ರೆಕ್ಸಿಟ್)ದಿಂದ ಹೊರ ನಡೆಯುವ ನಿರ್ಧಾರವನ್ನು ಇತ್ತೀಚೆಗೆ ಯಾವ ದೇಶ ಕೈಗೊಂಡಿತು? ) ಇಟಲಿ ) ಗ್ರೀಕ್ ) ಬ್ರಿಟನ್‌ ) ಆಸ್ಟ್ರೀಯ 6) 2016, ಜುಲೈ 24ರಂದು ಚೆಂಗ್ಡು ನಗರದಲ್ಲಿ ಜಿ-20 ದೇಶಗಳ ಹಣಕಾಸು ಸಚಿವರು ಮತ್ತು ಮುಖ್ಯಸ್ಥರ ಸಭೆ ನಡೆಯಿತು. ಚೆಂಗ್ಡು ನಗರ ಯಾವ ದೇಶದಲ್ಲಿದೆ? ) ಚೀನಾ ) ನೇಪಾಳ ) ಥೈಲ್ಯಾಂಡ್ ) ಹಂಗೇರಿ 7) ಸ್ಮಾರ್ಟ್‌ಫೋನ್‌ನಲ್ಲಿ ಜಿಪಿಎಸ್ ಸೌಲಭ್ಯ ಮತ್ತು ಕ್ಯಾಮೆರ ಬಳಸಿಕೊಂಡು ಆಡುವ ಯಾವ ಗೇಮ್ ಇತ್ತೀಚೆಗೆ ವಿಶ್ವದಾದ್ಯಂತ ಜನಪ್ರಿಯಗೊಂಡಿದೆ ? ) ಕ್ಯಾಂಡಿಕ್ರಶ್ ಸಾಗಾ ) ಪೋಕಿಮಾನ್ ಗೋ ಗೇಮ್ ) ಕಾರ್ ರೇಸ್ ಗೇಮ್ ) ಬೈಕ್ ರೇಸ್ ಗೇಮ್ 8) ಪ್ರಪಂಚ ಪರ್ಯಟನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಜಗತ್ತಿನ ಮೊಟ್ಟಮೊದಲ ಸೌರ ಚಾಲಿತ ವಿಮಾನ ಯಾವುದು? ) ಬೋಯಿಂಗ್ ವಿಮಾನ ) ಸೋಲಾರ್ ಇಂಪಲ್ಸ್-1 ) ಸೋಲಾರ್ ಇಂಪಲ್ಸ್-2 ) ಯಾವುದು ಅಲ್ಲ 9) ದೇಶದ ಬಹು ಬ್ರ್ಯಾಂಡ್ ಫ್ಯಾಷನ್ ಅಂತರ್ಜಾಲ ಮಳಿಗೆ (ಇ-ಕಾಮರ್ಸ್) ಜಬಾಂಗ್ ಅನ್ನು ಯಾವ ಕಂಪೆನಿ ಖರೀದಿಸಿದೆ? ) ಅಮೆಜಾನ್ ) ಸ್ನ್ಯಾಪ್‌ಡೀಲ್‌ ) ಮಿಂತ್ರಾ ) ಇ-ಕಾರ್ಟ್ 10) ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನ ಹೈಕೋರ್ಟ್ ದೋಷ ಮುಕ್ತಗೊಳಿಸಿತು? ) ಹಿಟ್ ಅಂಡ್ ರನ್ ) ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ) ಕೃಷ್ಣಮೃಗ ಬೇಟೆ ) ಹಣ ದುರುಪಯೋಗ ಉತ್ತರಗಳು: 1-, 2-, 3-, 4-, 5-, 6-, 7-, 8-, 9-, 10- ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.