ಪ್ರಜಾವಾಣಿ ಕ್ವಿಜ್‌ 1) ಇತ್ತೀಚೆಗೆ ಕೇಂದ್ರ ಸರ್ಕಾರ ರಾಜ್ಯದ ನಾಲ್ಕು ನಗರಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಯ ವ್ಯಾಪ್ತಿಗೆ ಸೇರಿಸಿತು. ಈ ಕೆಳಕಂಡ ಯಾವ ನಗರ ಈ ಯೋಜನೆಯಲ್ಲಿ ಸ್ಥಾನ ಪಡೆದಿಲ್ಲ. ) ಶಿವಮೊಗ ) ತುಮಕೂರು )ಮಂಗಳೂರು ) ಬೆಂಗಳೂರು ಗ್ರಾಮಾಂತರ 2) ಸೆಪ್ಟೆಂಬರ್‌ ತಿಂಗಳ ಮಧ್ಯಭಾಗದಲ್ಲಿ ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ‘10 ವಾರಗಳ ಭಾರತೀಯ ಸಂಗೀತ ಉತ್ಸವಕ್ಕೆ’ ಯಾವ ದೇಶದಲ್ಲಿ ಚಾಲನೆ ನೀಡಲಾಯಿತು? ) ಅಮೆರಿಕ ) ಜರ್ಮನಿ ) ಕೆನಡಾ ) ಆಸ್ಟ್ರೇಲಿಯಾ 3) ಕೆನ್ ಮತ್ತು ಬೆಟ್ವಾ ನದೀಜೋಡಣೆ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ನೀಡಿದ್ದು , ಈ ಯೋಜನೆ ಯಾವ ರಾಜ್ಯದಲ್ಲಿ ಅನುಷ್ಠಾನಕ್ಕೆ ಬರಲಿದೆ ? ) ರಾಜಸ್ತಾನ ) ಉತ್ತರ ಪ್ರದೇಶ ) ಹರಿಯಾಣ ) ಮಧ್ಯಪ್ರದೇಶ 4) ಭಾರತ ಸರ್ಕಾರ ‘ಬರಾಕ್‌–8’ ಕ್ಷಿಪಣಿಯನ್ನು ಈ ಕೆಳಕಂಡ ಯಾವ ದೇಶದ ಸಹಯೋಗದಲ್ಲಿ ನಿರ್ಮಾಣ ಮಾಡಿದೆ? ) ಇಸ್ರೇಲ್‌ ) ಜರ್ಮನಿ ) ಅಮೆರಿಕ ) ರಷ್ಯಾ 5) ಮುಂಬರುವ ಹಣಕಾಸು ವರ್ಷದಿಂದ (2017–18) ರೈಲ್ವೆ ಬಜೆಟ್‌ ಅನ್ನು ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಳಿಸಿ ಮಂಡಿಸುವುದಾಗಿ ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಿದೆ. ದೇಶದಲ್ಲಿ ಮೊಟ್ಟ ಮೊದಲ ರೈಲ್ವೆ ಬಜೆಟ್‌ ಯಾವ ವರ್ಷ ಮಂಡಿಸಲಾಯಿತು? ) 1938 ) 1924 ) 1965 ) 1948 6) ರಾಜ್ಯ ಸರ್ಕಾರ ಇತ್ತಿಚೆಗೆ ಕರ್ನಾಟಕ ಅಬಕಾರಿ ಕಾಯ್ದೆ –1965ಕ್ಕೆ ತಿದ್ದುಪಡಿ ತರುವ ಮೂಲಕ ಯಾವ ಮರದಿಂದ ನಿರಾ ಇಳಿಸಲು ಅನುಮತಿ ನೀಡಿದೆ? ) ತೆಂಗಿನ ಮರ ) ತಾಳೆ ಮರ ) ಈಚಲು ಮರ ) ಅಡಕೆ ಮರ 7) ಜಗತ್ತಿನ ಅತಿ ದೊಡ್ಡ ಟೆಲಿಸ್ಕೋಪ್‌ ಅನ್ನು ಯಾವ ದೇಶ ನಿರ್ಮಾಣ ಮಾಡಿದೆ? ) ಅಮೆರಿಕ ) ಚೀನಾ ) ರಷ್ಯಾ ) ಜಪಾನ್‌ 8) ಕರ್ನಾಟಕ ಸರ್ಕಾರದ ‘ಗಾಂಧಿ ಪಥ ಗ್ರಾಮ ಪಥ’ ಎಂಬ ನೂತನ ಯೋಜನೆ ಯಾವುದಕ್ಕೆ ಸಂಬಂಧಿಸಿದೆ? ) ಗ್ರಾಮೀಣ ಅಭಿವೃದ್ಧಿ ) ಶೌಚಾಲಯ ಅಭಿವೃದ್ಧಿ ) ರಸ್ತೆ ಅಭಿವೃದ್ಧಿ ) ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ 9) ಮೊಲದ ಜಾತಿಗೆ ಸೇರುವ ಪುಟ್ಟ ಸಸ್ತನಿ ‘ಪಿಕ’ ಎಂಬ ಹೊಸ ಪ್ರಭೇದವನ್ನು ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರದ (ಎನ್‌ಸಿಬಿಎಸ್‌) ವಿಜ್ಞಾನಿಗಳು ಯಾವ ರಾಜ್ಯದಲ್ಲಿ ಪತ್ತೆ ಹಚ್ಚಿದ್ದಾರೆ ? ) ಪಶ್ಚಿಮ ಬಂಗಾಳ ) ಕರ್ನಾಟಕ ) ಮಧ್ಯಪ್ರದೇಶ ) ಸಿಕ್ಕಿಂ 10) ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ನೀಡುವ 2016ನೇ ಸಾಲಿನ ‘ಕುವೆಂಪು ರಾಷ್ಟ್ರೀಯ ಪ್ರಶಸ್ತಿ’ಗೆ ಕನ್ನಡದ ಯಾವ ಸಾಹಿತಿ ಆಯ್ಕೆಯಾಗಿದ್ದಾರೆ? ) ಸಿದ್ಧಲಿಂಗಯ್ಯ ) ದೇವನೂರು ಮಹಾದೇವ ) ಚಂದ್ರಶೇಖರ ಕಂಬಾರ ) ಗಿರೀಶ್‌ ಕಾರ್ನಾಡ ಉತ್ತರಗಳು: 1-, 2-, 3-, 4-, 5-, 6-, 7-, 8-, 9-, 10-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.