ಪ್ರಜಾವಾಣಿ ಕ್ವಿಜ್‌ 1. ವಿಶ್ವಸಂಸ್ಥೆಯ ನೂತನ ಮಹಾಪ್ರಧಾನ ಕಾರ್ಯದರ್ಶಿಯಾಗಿ ಅಂಟೊನಿಯೊ ಗುಟೆರಸ್‌ ಅವರನ್ನು ಆಯ್ಕೆ ಮಾಡಲಾಗಿದೆ. 2017ರ ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿರುವ ಅಂಟೊನಿಯೊ ಯಾವ ದೇಶದವರು? ) ಪೋಲೆಂಡ್ ) ಪೋರ್ಚುಗಲ್ )ಪೂರ್ವ ಆಫ್ರಿಕಾ ) ಪೆರುಗ್ವೆ 2) ಭಾರತದಲ್ಲಿ 1932ರಿಂದ ಅಧಿಕೃತವಾಗಿ ವಾಯುಪಡೆ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ಕೆಳಕಂಡ ಯಾವ ದಿನದಂದು ವಾಯುಪಡೆ ದಿನ ಆಚರಿಸಲಾಗುತ್ತದೆ? ) 8, ಅಕ್ಟೋಬರ್‌ ) 16, ಅಕ್ಟೋಬರ್‌ ) 24,ಅಕ್ಟೋಬರ್‌ ) 31, ಅಕ್ಟೋಬರ್‌ 3) ಭಾರತದ ಇತಿಹಾಸ ಲೇಖಕಿ ನಯನ್‍ ಜೋತ್ ಲಹಿರಿ ಅವರಿಗೆ 2016ನೇ ಸಾಲಿನ ಅಮೆರಿಕದ ಪ್ರತಿಷ್ಠಿತ ಜಾನ್ ಎಫ್. ರಿಚರ್ಡ್ಸ್‌ ಪ್ರಶಸ್ತಿ ಲಭಿಸಿದೆ. ಅವರ ಯಾವ ಕೃತಿಗೆ ಈ ಪ್ರಶಸ್ತಿ ಸಂದಿದೆ ? ) ಭಾರತದ ಇತಿಹಾಸ ) ಭಾರತದಲ್ಲಿ ಮುಸ್ಲಿಂ ದೊರೆಗಳ ಆಳ್ವಿಕೆ ) ಗುಪ್ತರ ಸುವರ್ಣ ಯುಗ ) ಪುರಾತನ ಭಾರತದ ಅಶೋಕ 4) ಅಮೆರಿಕದ ಅರ್ಥಶಾಸ್ತ್ರಜ್ಞ ಆಲಿವರ್‌ ಹಾರ್ಟ್‌ ಮತ್ತು ಫಿನ್ಲೆಂಡ್‌ನ ಬೆಂಗ್ಟ್‌ ಹೋಲ್ಮಸ್ಟ್ರಾಮ್‌ ಅವರುಗಳಿಗೆ 2016ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇವರು ಅಭಿವೃದ್ಧಿಪಡಿಸಿರುವ ಸಿದ್ಧಾಂತ ಯಾವುದು? ) ಗುತ್ತಿಗೆ ಸಿದ್ಧಾಂತ ) ಬಂಡವಾಳ ಸಿದ್ಧಾಂತ ) ಶ್ರಮ ಸಿದ್ಧಾಂತ ) ಚಿಲ್ಲರೆ ಹಣಕಾಸು ಸಿದ್ಧಾಂತ 5) ನ್ಯಾಷನಲ್ ಸೆಂಟರ್ ಫಾರ್ ಅಂಟಾರ್ಟಿಕ್ ಅಂಡ್ ಓಷನ್ ರೀಸರ್ಚ್ (ಎನ್‍ಸಿಎಓಆರ್) ಸಂಸ್ಥೆಯು ಹಿಮಾಲಯ ಪರ್ವತದಲ್ಲಿ ಹಿಮನದಿ ಸಂಶೋಧನಾ ಪ್ರಯೋಗಾಲಯ ಸ್ಥಾಪಿಸಿದೆ. ಈ ಪ್ರಯೋಗಾಲಯಕ್ಕೆ ಭಾರತದ ಯಾವ ನದಿಯ ಹೆಸರನ್ನು ಇಡಲಾಗಿದೆ. ) ಸರಸ್ವತಿ ) ಹಿಮಾಂಶು ) ಸಿಂಧೂ ) ಗಂಗಾ 6) ಭಾರತದ ಖ್ಯಾತ ಲೇಖಕಿ ಆರುಂಧತಿ ರಾಯ್ ಅವರು ತಮ್ಮ ಎರಡನೇ ಕಾದಂಬರಿಯ ಹೆಸರನ್ನು ಇತ್ತೀಚೆಗೆ ಪ್ರಕಟಿಸಿದ್ದಾರೆ. ಅದರ ಹೆಸರೇನು? ) ‘ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ) ಇಂಡಿಯಾನ್‌ ವುಮನ್‌ ) ದ ಮಿನಿಸ್ಟ್ರಿ ಆಫ್ ಅಟ್ಮೋಸ್ ಹ್ಯಾಪಿನೆಸ್ ) ಸ್ಟೋರಿ ಆಫ್‌ ಅರುಂಧತಿ 7) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಈ ಕೆಳಕಂಡ ಯಾವ ಉಪಗ್ರಹದ ಮೇಲೆ ದೂರದರ್ಶಕ ಸ್ಥಾಪಿಸಲು ಯೋಜನೆ ರೂಪಿಸಿದೆ ? ) ಚಂದ್ರ ) ಟೈಟನ್ ) ಗ್ಯಾನಿಮಿಡ್ ) ಮಂಗಳ 8) ಪ್ರಸ್ತುತ ಚರ್ಚೆಯಲ್ಲಿರುವ ಲೋಧ ಸಮಿತಿಯು ಈ ಕೆಳಕಂಡ ಯಾವ ಕ್ರೀಡೆಗೆ ಸಂಬಂಧಿಸಿದೆ? ) ಹಾಕಿ ) ಕ್ರಿಕೆಟ್‌ ) ಕುಸ್ತಿ ) ಬ್ಯಾಡ್ಮಿಂಟನ್‌ 9) ಈ ಕೆಳಕಂಡ ಯಾವ ಕಂಪೆನಿಯು ಸ್ವದೇಶಿ ತಂತ್ರಜ್ಞಾನದಲ್ಲಿ ದೇಶದ ಮೊದಲ ವಿದ್ಯುತ್‌ಚಾಲಿತ ಬಸ್ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದೆ ? ) ಟಾಟಾ ಮೋಟಾರ್ಸ್ ) ಅಶೋಕ್ ಲೇಲ್ಯಾಂಡ್ ) ಟಿವಿಎಸ್ ಮೋಟಾರ್ಸ್ ) ಹಿರೋ ಕಂಪೆನಿ 10) 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಜಿಲ್ಲೆಯಲ್ಲಿ ನಡೆಯಲಿದೆ ? ) ಕೊಪ್ಪಳ ) ವಿಜಯಪುರ ) ಬಳ್ಳಾರಿ ) ರಾಯಚೂರು ಉತ್ತರಗಳು: 1-, 2-, 3-, 4-, 5-,6-, 7-, 8-, 9-, 10-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.