ಪ್ರಜಾವಾಣಿ ಕ್ವಿಜ್‌ 1) ಏಪ್ರಿಲ್ 6 ರಂದು ನಿಧನರಾದ ಹಿರಿಯ ಗಾಂಧಿವಾದಿ ಹೊ. ಶ್ರೀನಿವಾಸಯ್ಯ ಅವರು ಬರೆದ ಖ್ಯಾತ ಪ್ರವಾಸ ಕಥನ ಯಾವುದು? ) ಭಾರತ ದರ್ಶನ ) ಅಮೆರಿಕದಲ್ಲಿ ಗೊರೂರು ) ನಾ ಕಂಡ ಜರ್ಮನಿ ) ರಷ್ಯಾ ದಿನಗಳು *** 2) ಭಾರತದ ವಾಯುಗುಣ ಮಾನ್ಸೂನ್ ಮಾರುತಗಳ ಪ್ರಭಾವಕ್ಕೆ ಒಳಗಾಗಿದೆ. ಈ ಮಾನ್ಸೂನ್ ಪದವು ಮೌಸಿಮ್ ಎಂಬ ಪದದಿಂದ ಉತ್ಪತ್ತಿಯಾಗಿದೆ. ಮೌಸಿಮ್ ಯಾವ ಭಾಷೆಯ ಪದ? ) ಪರ್ಷಿಯನ್ ಭಾಷೆ ) ಗ್ರೀಕ್ ಭಾಷೆ ) ಅರೇಬಿಕ್ ಭಾಷೆ ) ರೋಮನ್ ಭಾಷೆ *** 3) ರಾಜ್ಯದಲ್ಲಿ ಮೊಟ್ಟ ಮೊದಲಿಗೆ ಕೈಗಾರಿಕ ನೀತಿಯನ್ನು ರೂಪಿಸಿ, ‘ಕೈಗಾರಿಕರಣ ಇಲ್ಲವೇ ವಿನಾಶ’ ಎಂದು ಹೇಳಿದವರು ಯಾರು? ) ಜಯಚಾಮರಾಜೇಂದ್ರ ಒಡೆಯರ್ ) ಸರ್.ಎಂ.ವಿಶ್ವೇಶ್ವರಯ್ಯ ) ಲಾರ್ಡ್ ಕರ್ಜನ್ ) ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ *** 4) ತಮಿಳುನಾಡು ಭಾಗವನ್ನು ಆಳಿದ ಚೇರರು, ಪಾಂಡ್ಯರು ಹಾಗೂ ಚೋಳ ರಾಜ ಮನೆತನದವರು ಯಾವ ಸಾಹಿತ್ಯವನ್ನು ಪೋಷಣೆ ಮಾಡಿದರು? ) ಸಂಗಂ ಸಾಹಿತ್ಯ ) ಜೈನ ಸಾಹಿತ್ಯ ) ಬೌದ್ಧ ಸಾಹಿತ್ಯ ) ಆರ್ಯ ಸಾಹಿತ್ಯ *** 5) ಯಶೋಧರ ಚರಿತೆ ಕೃತಿಯನ್ನು ರಚಿಸಿದ ಜನ್ನ ಕವಿಯು ಹೊಯ್ಸಳರ ಯಾವ ರಾಜನ ಆಸ್ಥಾನ ಕವಿಯಾಗಿದ್ದರು? ) ವೀರ ಬಲ್ಲಾಳ ) ವಿಷ್ಣುವರ್ಧನ ) ಒಂದನೇ ನರಸಿಂಹ ) ಒಂದನೇ ಬಲ್ಲಾಳ *** 6) ರಸಾಯನಶಾಸ್ತ್ರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 1896ರಲ್ಲಿ ‘ವಿಕಿರಣ ಪಟುತ್ವ’ವನ್ನು ಕಂಡುಹಿಡಿದ ಫ್ರಾನ್ಸ್ ವಿಜ್ಞಾನಿ ಯಾರು? ) ರುದರ್ ಫೋರ್ಡ್ ) ಹೆನ್ರಿ ಬೆಕೆರಲ್ ) ಮೇಡಂ ಕ್ಯೂರಿ ) ಹೆನ್ಸಿ ಕ್ವಾಂಟಂ *** 7) ಭೌತಶಾಸ್ತ್ರದಲ್ಲಿ ಬರುವ ಸರಳ ಲೋಲಕ ನಿಯಮಗಳನ್ನು ಆವಿಷ್ಕರಿಸಿದ ಇಟಲಿಯ ಭೌತ ವಿಜ್ಞಾನಿ ಯಾರು? ) ಐನ್‌ಸ್ಟೀನ್ ) ಮಾರ್ಕೋನಿ ) ಗೆಲಿಲಿಯೊ ) ಕೋಪರ್ನಿಕಸ್ *** 8) ಕಶೇರುಕಗಳ ದೇಹದ ಬೆನ್ನಿನ ಭಾಗದಲ್ಲಿ ಈ ಕೆಳಕಂಡ ಯಾವ ಘನವಾದ ರಚನೆ ಇರುತ್ತದೆ? ) ಕಾರ್ಡೇಟಾ ) ಆರ್ಟಿಕ್ ಕಾರ್ಡ್ ) ಮ್ಯಾನೋಟಿಕ್ ಕಾರ್ಡ್ ) ನೋಟೋಕಾರ್ಡ್ *** 9) ಈ ಕೆಳಕಂಡ ಭಾಷೆಗಳಲ್ಲಿ ಕಂಪ್ಯೂಟರ್ ಭಾಷೆಯನ್ನು ನಿಖರವಾಗಿ ಗುರುತಿಸಿ? ) ಮೆಷಿನ್ ಭಾಷೆ ) ಅಸೆಂಬ್ಲಿ ಲೆವೆಲ್ ಭಾಷೆ ) ಹೈ ಲೆವೆಲ್ ಭಾಷೆ ) ಮೇಲಿನ ಎಲ್ಲವೂ *** 10) ರಕ್ತದಲ್ಲಿ ಕೆಂಪುರಕ್ತ ಕಣಗಳ ಕೊರತೆ ಉಂಟಾದರೆ ‘ಅನೀಮಿಯ’ ಕಾಯಿಲೆ ಕಾಣಿಸಿ ಕೊಳ್ಳುತ್ತದೆ. ಇದು ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ? ) ವಿಟಮಿನ್ ಬಿ12 ) ವಿಟಮಿನ್ ಕೆ1 ) ವಿಟಮಿನ್ ಸಿ3 ) ವಿಟಮಿನ್ ಇ *** ಉತ್ತರಗಳು: 1-, 2-, 3-, 4-, 5-, 6-, 7- , 8-, 9-, 10-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.