ಪ್ರಜಾವಾಣಿ ಕ್ವಿಜ್‌ 1) ವಿಶ್ವಸಂಸ್ಥೆ ನೀಡುವ ಪ್ರತಿಷ್ಠಿತ ‘ಶಾಂತಿದೂತ’ ಪ್ರಶಸ್ತಿಯನ್ನುಈ ವರ್ಷ ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟ ಕಾರ್ಯಕರ್ತೆ ಮಲಾಲ ಯೂಸುಫ್‌ಝೈ ಅವರಿಗೆ ನೀಡಲಾಗಿದೆ. ಇವರು ಪಾಕಿಸ್ತಾನದ ಯಾವ ಕಣಿವೆಯವರು? ) ಸ್ವಾತ್ ಕಣಿವೆ ) ಸಿಂಧ್ ಕಣಿವೆ ) ಬಲೂಚಿಸ್ತಾನ್ ಕಣಿವೆ ) ಪಂಜಾಬ್ ಕಣಿವೆ 2) 2016ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು ‘ಅಮರಾವತಿ’ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಈ ಚಿತ್ರದ ನಿರ್ದೇಶಕರು ಯಾರು? ) ಅಭಯಸಿಂಹ ) ಬಿ.ಎಂ. ಗಿರಿರಾಜ್ ) ಪಿ.ಶೇಷಾದ್ರಿ ) ಎಂ. ಆರ್. ಗರಣಿ 3) ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಮಾಲ್ಕಂ ಟರ್ನಬುಲ್ ಅವರ ಭಾರತ ಪ್ರವಾಸ ಕೈಗೊಂಡು ಪ್ರಮುಖ ಆರು ಒಪ್ಪಂದಗಳಿಗೆ ಸಹಿ ಹಾಕಿದರು. ಇವರು ಯಾವ ದೇಶದ ಪ್ರಧಾನ ಮಂತ್ರಿಗಳು? ) ಅಮೆರಿಕ ) ಇಂಗ್ಲೆಂಡ್ ) ಆಸ್ಟ್ರೇಲಿಯಾ ) ಜರ್ಮನಿ 4) ಬೆಂಗಳೂರಿನಲ್ಲಿ ನಾಗರಿಕರ ಸುರಕ್ಷತೆಗಾಗಿ ಹೊಯ್ಸಳ ವಾಹನಗಳನ್ನು ನಿಯೋಜಿಸಲಾಗಿದೆ. ಇವುಗಳಲ್ಲಿ ‘ಪಿಂಕ್ ಹೊಯ್ಸಳ’ ವಾಹನಗಳನ್ನು ಈ ಕೆಳಕಂಡ ಯಾರ ತುರ್ತು ಸೇವೆಗೆ ನಿಯೋಜಿಸಲಾಗಿದೆ? ) ಹಿರಿಯ ನಾಗರಿಕರು ) ಅಂಗವಿಕಲರು ) ಭಿಕ್ಷುಕರು ) ಮಹಿಳೆಯರು ಮತ್ತು ಮಕ್ಕಳು 5) ತೀಸ್ತಾ ನದಿ ನೀರು ಹಂಚಿಕೆ ವಿವಾದ ಈ ಕೆಳಕಂಡ ಯಾವ ದೇಶಗಳ ಮಧ್ಯೆ ನಡೆಯುತ್ತಿದೆ? ) ಭಾರತ–ಬಾಂಗ್ಲಾದೇಶ ) ಬಾಂಗ್ಲಾದೇಶ–ಶ್ರೀಲಂಕಾ ) ಭಾರತ–ಪಾಕಿಸ್ತಾನ ) ಪಾಕಿಸ್ತಾನ–ಬಾಂಗ್ಲಾದೇಶ 6) ಮಾನವ ತ್ಯಾಜ್ಯಮುಕ್ತ ರೈಲ್ವೆ ಮಾರ್ಗವನ್ನು ಹಸಿರು ಕಾರಿಡಾರ್ ರೈಲ್ವೆ ಮಾರ್ಗ ಎಂದು ಕರೆಯಲಾಗುತ್ತದೆ. ದೇಶದಲ್ಲಿ ಒಟ್ಟು ಎಷ್ಟು ಹಸಿರು ಕಾರಿಡಾರ್ ರೈಲ್ವೆ ಮಾರ್ಗಗಳಿವೆ ? ) ಹತ್ತು ) ಐದು ) ಇಪ್ಪತ್ತು ) ಮೂವತ್ತು 7) ಸಲಿಂಗಕಾಮಿಗಳ ಸಮುದಾಯದ ಸಂಕೇತವಾಗಿ ಕಾಮನಬಿಲ್ಲಿನ ಬಣ್ಣಗಳ ಬಾವುಟ ವಿನ್ಯಾಸ ಮಾಡಿದ್ದ ಅಮೆರಿಕ ಕಲಾವಿದ ಕಳೆದ ಮಾರ್ಚ್ 31(2017)ರಂದು ನಿಧನರಾದರು. ಅವರ ಹೆಸರು ಏನು? ) ಹಾರ್ವೇ ಮಿಲ್ಕ್ ) ಚಾರ್ಲಿ ಡೇವಿಡ್‌ ) ಗಿಲ್ಬರ್ಟ್‌ ಬೇಕರ್‌ ) ಗಿಸ್ ವ್ಯಾನ್‌ ಸ್ಯಾಂಟ್‌ 8) ದೇಶದಲ್ಲಿಯೇ ಅತಿದೊಡ್ಡ ಬ್ಯಾಂಕ್‌ ಆಗಿರುವ ‘ಭಾರತೀಯ ಸ್ಟೇಟ್‌ ಬ್ಯಾಂಕ್‌’ನಲ್ಲಿ (ಎಸ್‌ಬಿಐ)ಈ ಕೆಳಕಂಡ ಯಾವ ಬ್ಯಾಂಕ್‌ಗಳು ವಿಲೀನವಾಗಿವೆ? ) ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌ ) ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ) ಸ್ಟೇಟ್‌ ಬ್ಯಾಂಕ್‌ ಆಫ್ ಪಟಿಯಾಲ ) ಮೇಲಿನ ಎಲ್ಲವು 9)2018ರ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಮೊದಲ ತಂಡವಾಗಿ ಬ್ರೆಜಿಲ್ ಅರ್ಹತೆ ಪಡೆದಿದೆ. ಮುಂಬರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಆತಿಥ್ಯವನ್ನು ಯಾವ ದೇಶ ವಹಿಸಿದೆ? ) ರಷ್ಯಾ ) ಜರ್ಮನಿ ) ಬ್ರೆಜಿಲ್ ) ಇಂಗ್ಲೆಂಡ್ 10) 149 ಸ್ಪಾಟ್‌ಲೈಟ್‌ಗಳನ್ನು ಜೋಡಿಸಿ ವಿಶ್ವದ ಅತಿ ದೊಡ್ಡ ಕೃತಕ ಸೂರ್ಯನನ್ನು ಸೃಷ್ಟಿ ಮಾಡಲಾಗಿದೆ. ಇದನ್ನು ಯಾವ ದೇಶದ ವಿಜ್ಞಾನಿಗಳು ನಿರ್ಮಾಣ ಮಾಡಿದ್ದಾರೆ? ) ಚೀನಾ ವಿಜ್ಞಾನಿಗಳು ) ನಾಸಾ ವಿಜ್ಞಾನಿಗಳು (ಅಮೆರಿಕ) ) ಇಸ್ರೋ ವಿಜ್ಞಾನಿಗಳು (ಭಾರತ) )ಜರ್ಮನಿ ಬಾಹ್ಯಾಕಾಶ ವಿಜ್ಞಾನಿಗಳು ಉತ್ತರಗಳು: 1–, 2–, 3–, 4–, 5–, 6–, 7–, 8–, 9–, 10– ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.