ಬಿ.ಇ ನಂತರ ಎಂಬಿಎ? ಎಂಜಿನಿಯರ್‌ಗೆ ಎಂಬಿಎ ಪದವಿ ಪಡೆಯುವುದರಿಂದ ಆಗುವ ಅನುಕೂಲಗಳೇನು? ಈಚೆಗೆ ಕಾರ್ಯಕ್ರಮವೊಂದರಲ್ಲಿ ಸುಮಾರು 300 ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದೆ. ಕೆಲವರು ಕಲೆ, ವಿಜ್ಞಾನ, ವಾಣಿಜ್ಯ ಪದವಿ ಕಲಿಯುತ್ತಿದ್ದರೆ; ಕೆಲವರು ಎಂಜಿನಿಯರಿಂಗ್ ಕಲಿಯುತ್ತಿದ್ದರು. ನಾನು ಅವರ ಎದುರು ಒಂದು ಪ್ರಶ್ನೆಯನ್ನು ಕೇಳಿದೆ. ‘ಎಂಬಿಎ ನಿಮ್ಮ ಮುಂದಿನ ತಾರ್ಕಿಕ ಹೆಜ್ಜೆಯೆ?’ ಪ್ರಶ್ನೋತ್ತರ ಅವಧಿಯಲ್ಲಿ ವಿದ್ಯಾರ್ಥಿನಿಯೊಬ್ಬರು ಎದ್ದು ನಿಂತು ಕೇಳಿದಳು. ನಾನು ಬಿ.ಇ ಮುಗಿಸಿದರೆ ಯಾವ ‘ಎಂಬಿಎ’ ಅನ್ನು ತೆಗೆದುಕೊಳ್ಳಬೇಕು. ನಾನು ತಕ್ಷಣ ಪ್ರಶ್ನಿಸಿದೆ: ಎಂಬಿಎ ಏಕೆ? ನೀವು ಗಳಿಸಿರುವ ಬಿ.ಇ ಜ್ಞಾನದ ಬಳಕೆ ಹೇಗೆ? ಅವರ ಪ್ರತಿಕ್ರಿಯೆ ಸಹಜವಾಗಿತ್ತು. ಬಿ.ಇ ಉದ್ಯೋಗ ವಾರ್ಷಿಕ 2.3 ಲಕ್ಷ ಒದಗಿಸಿಕೊಟ್ಟರೆ, ಎಂಬಿಎ ಉದ್ಯೋಗ 7-8 ಲಕ್ಷ ಒದಗಿಸಿಕೊಡಲಿದೆ. ನಿಜವಾಗಿ? ಈ ಆದಾಯ ಎಲ್ಲಿಂದ ಬರುತ್ತದೆ? ಅವರ ನಿರೀಕ್ಷೆ ನಿಜವಾದುದಾಗಿತ್ತು. ಆದರೆ, ಎಲ್ಲ ಪ್ರಕರಣಗಳಲ್ಲಿಯೂ ಸರಿಯಾದುದಾಗಿರಲಿಲ್ಲ. ಹಾಗಿದ್ರೆ ಬಿ.ಇ ವಿದ್ಯಾರ್ಥಿ ಏನು ಮಾಡಬೇಕು? ಬಿ. ಇ. ವಿದ್ಯಾರ್ಥಿಗಳು ನಾಲ್ಕು ವರ್ಷದ ಶಿಕ್ಷಣದಲ್ಲಿ ಗಳಿಸಿದ ಜ್ಞಾನವನ್ನು ಕೆಳಕಂಡಂತೆ ವಿನಿಯೋಗಿಸಬೇಕು. ಅಪ್ರೆಂಟಿಸ್‌ಷಿಪ್: ಅಪ್ರೆಂಟಿಸ್‌ಷಿಪ್/ ಕಲಿಕೆಯನ್ನು ಯೋಗ ವ್ಯಕ್ತಿ/ ಸಂಘಟನೆಯಲ್ಲಿ ಮಾಡಿದರೆ ಅಧ್ಯಯನವನ್ನು ಇನ್ನೂ ಉತ್ತಮವಾಗಿ ಅರಿತುಕೊಳ್ಳಲು ಸಹಕಾರಿ. ಇದು, ಜ್ಞಾನವನ್ನು ಕೆಲಸದಲ್ಲಿ ಅಳವಡಿಸಿಕೊಳ್ಳಲು ಸಹಕಾರಿ. ಬಹುತೇಕ ಪಠ್ಯದಲ್ಲಿ ಕಡ್ಡಾಯವಾಗಿ ಇರುವ ಇಂಟರ್ನ್‌ಷಿಪ್‌ಗೆ ಹೊರತಾಗಿ ಅಂಪ್ರೆಂಟಿಸ್‌ಷಿಪ್ ಕೆಳಹಂತದ ಅನುಭವ ವನ್ನು ನೀಡಲಿದೆ. ಇದು, ಸಕ್ರಿಯವಾಗಿ ಕೆಲಸದಲ್ಲಿ ತೊಡಗಲು ನೆರವಾಗಲಿದೆ. ಇದು, ಅತ್ಯುತ್ತಮ ಕೊಡುಗೆ ನೀಡಲಿದ್ದು, ಶಿಕ್ಷಣವನ್ನು ಕಲಿಯಲು ಸಹಕಾರಿ ಆಗಲಿದೆ. ಪೂರ್ಣ ವೇತನದ ಉದ್ಯೋಗ: ತಾವು ಕಲಿತ ಕ್ಷೇತ್ರದಲ್ಲಿಯೇ ಉದ್ಯೋಗ ಪಡೆದು ನಿರ್ದಿಷ್ಟ ಗುರಿ ಸಾಧಿಸಲು ಒತ್ತು ನೀಡಬೇಕು. ಪೂರ್ಣ ಪ್ರಮಾಣದ ವೇತನದ ಕೆಲಸದ ಜಗತ್ತಿಗೆ ನಿಮ್ಮ ಪ್ರವೇಶವಾಗುತ್ತದೆ ಎಂದೇ ಅರ್ಥ. ಪೂರ್ಣಪ್ರಮಾಣದ ವೇತನದ ಉದ್ಯೋಗ ನಿಮಗೆ ನಿಮ್ಮ ಕೌಶಲ ಅರಿಯಲು ನೆರವಾಗಲಿದೆ. ಇದು, ನಿಮ್ಮ ವೃತ್ತಿ ಜೀವನ ಬೆಳೆಯಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಮೊದಲ ನಾಲ್ಕು ವರ್ಷ ವಿಷಯವನ್ನು ಕಲಿಯಲು ಸಮಯ ವಿನಿಯೋಗಿಸುತ್ತಾರೆ. ಬಹುತೇಕ ಇದು, ಲಿಖಿತ, ಬೋಧನೆ ಸ್ವರೂಪದಲ್ಲಿ ಇರುತ್ತದೆ. ಜ್ಞಾನದ ಬಳಕೆ ಆಗದಿದ್ದರೆ ನಿಮ್ಮ ಕೌಶಲ ಅರಿವಾಗುವುದಿಲ್ಲ. ಎರಡನೆಯದಾಗಿ, ನಿಮ್ಮ ಜ್ಞಾನವನ್ನು ಕೆಲಸದ ಮೂಲಕ ಅನುಭವ ಪಡೆಯಲು ವಿನಿಯೋಗಿಸಿದರೆ ವೃತ್ತಿ ದೃಷ್ಟಿಯಿಂದ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಲಿದೆ. ಅಂತಿಮವಾಗಿ, ಸಂಘಟನೆಯಲ್ಲಿ ನೀವು ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ. ಇದರಿಂದ ಎಲ್ಲ ಸಂದರ್ಭದಲ್ಲಿಯೂ ಕಲಿಕೆಯನ್ನು ಆಧರಿಸುವುದಕ್ಕಿಂತಲೂ ಅನುಭವದ ಬಳಕೆಗೂ ನೆರವಾಗಲಿದೆ. ಈಗ ಮತ್ತೆ ವಿಷಯಕ್ಕೆ ಬರೋಣ. ಎಂಬಿಎ ಎಲ್ಲ ಎಂಜಿನಿಯರಿಂಗ್ ವಿದ್ಯಾರ್ಥಿಗಳೂ ಕಲಿಯಬೇಕೆ? ಹೌದು. ತಮ್ಮ ವೃತ್ತಿ ಜೀವನದಲ್ಲಿ ಉನ್ನತಿ ಸಾಧಿಸಲು ಬಯಸುವ ಎಲ್ಲರೂ ಕಲಿಯಬೇಕು. ಉದ್ಯಮ ವ್ಯವಹಾರ ಮತ್ತು ಮೇಲ್ವಿಚಾರಣೆ ಕಲಿಕಯುವಿಕೆ ಉತ್ತಮ. ಆದರೆ, ಇದಕ್ಕೆ ಬದ್ಧತೆ ಬೇಕೇ ಬೇಕು. ಜತಗೆ, ಹೆಚ್ಚುವರಿ ಪದವಿಯು ಮೂಲ ವಿಷಯಗಳನ್ನು ಅರಿತುಕೊಳ್ಳುವುದಕ್ಕಿಂತಲೂ ವೃತ್ತಿ ಬದುಕಿನ ಹಾದಿ ಸುಗಮಪಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.