ಪದವಿ ಪೂರೈಸಿದವರಿಗೆ ಇಂಡಿಯನ್‌ ಬ್ಯಾಂಕ್‌ನಲ್ಲಿ 138 ಹುದ್ದೆಗಳು ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಬ್ಯಾಂಕ್‌ 138 ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳು: ಅಸಿಸ್ಟೆಂಟ್ ಮ್ಯಾನೇಜರ್‌, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್‌. ವಿದ್ಯಾರ್ಹತೆ: ಪದವಿ, ಕಾನೂನು ಪದವಿ, ಸಿಎ (ಹುದ್ದೆಗೆ ಅನುಗುಣವಾಗಿ ವ್ಯತ್ಯಾಸಗಳಿವೆ). ವಯೋಮಿತಿ: ಅಸಿಸ್ಟೆಂಟ್ ಮ್ಯಾನೇಜರ್‌– ಕನಿಷ್ಠ 20, ಗರಿಷ್ಠ 30 ವರ್ಷ. ಮ್ಯಾನೇಜರ್‌– ಕನಿಷ್ಠ 25, ಗರಿಷ್ಠ 35. ಸೀನಿಯರ್ ಮ್ಯಾನೇಜರ್‌– ಕನಿಷ್ಠ 27, ಗರಿಷ್ಠ 37. ಮೀಸಲಾತಿ ಅನ್ವಯ ಸಡಿಲಿಕೆ ಇದೆ. ನೇಮಕಾತಿ ಪ್ರಕ್ರಿಯೆ: ಆನ್‌ಲೈನ್ ಪರೀಕ್ಷೆ ಹಾಗೂ ಸಂದರ್ಶನ. ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ₹100. ಇತರೆ ಅಭ್ಯರ್ಥಿಗಳಿಗೆ ₹600. ಉದ್ಯೋಗ ಸ್ಥಳ: ಭಾರತದ ಯಾವುದೇ ಪ್ರದೇಶದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ: 10 ಫೆಬ್ರುವರಿ 2020. ಹೆಚ್ಚಿನ ಮಾಹಿತಿಗೆ: ://./2O19riA ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.