ಉತ್ತರ ಕೇಂದ್ರ ರೈಲ್ವೆ: ಕ್ಲರ್ಕ್‌, ಲೋಕೊ ಪೈಲಟ್, ಗೂಡ್ಸ್‌ ಗಾರ್ಡ್‌ಗಳಿಗೆ ಅರ್ಜಿ ಬೆಂಗಳೂರು:ಉತ್ತರ ಕೇಂದ್ರ ರೈಲ್ವೆಯಲ್ಲಿ ಖಾಲಿ ಇರುವ ಸ್ಟೆಷನ್‌ ಮಾಸ್ಟರ್‌, ಟಿಕೆಟ್‌ ಕ್ಲರ್ಕ್‌, ಸಹಾಯಕ ಲೋಕೊ ಪೈಲಟ್‌, ಗೂಡ್ಸ್‌ ಗಾರ್ಡ್‌, ಜೂನಿಯರ್‌ ಕ್ಲರ್ಕ್‌, ಟ್ರ್ಯಾಕ್‌ ಸಹಾಯಕ ಹುದ್ದೆಗಳ ನೇಮಕಾತಿಗೆ ಜನರಲ್‌ ಡಿಪಾರ್ಟ್‌ಮೆಂಟಲ್‌ ( ಉತ್ತರ ಕೇಂದ್ರ ರೈಲ್ವೆಯಲ್ಲಿಸೇವೆಯಲ್ಲಿ ಇರುವವರು)ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಉತ್ತರ ಕೇಂದ್ರ ರೈಲ್ವೆಯ ವಿವಿಧ ವಿಭಾಗಗಳು, ಘಟಕಗಳು, ಮುಖ್ಯ ಕಚೇರಿಗಳು, ಕಾರ್ಯಾಗಾರಗಳು ಮತ್ತು ಫ್ಯಾಕ್ಟರಿಯಲ್ಲಿ ಸೇವೆ ಸಲ್ಲಿಸುತ್ತಿರುವವರು (ಆರ್‌ಪಿಎಫ್‌/ಆರ್‌ಪಿಎಸ್‌ಎಫ್‌, ಕಾನೂನು ಸಹಾಯಕ, ಕೆಟರಿಂಗ್, ಪರ್ಸನಲ್‌, ಇನ್ಸ್‌ಪೆಕ್ಟರ್‌ ಮತ್ತು ಅಕೌಂಟ್‌ ಕೇಡರ್‌ನಲ್ಲಿ ಕೆಲಸ ಮಾಡುವವರನ್ನು ಹೊರುತುಪಡಿಸಿ) ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಖಾಲಿ ಇರುವ ಹುದ್ದೆಗಳ ವಿವರ... 1) ಹಿರಿಯಕಮರ್ಷಿಯಲ್‌ ಕಂ ಟಿಕೆಟ್‌ ಕ್ಲರ್ಕ್‌: 59 ಹುದ್ದೆಗಳು 2)ಕಮರ್ಷಿಯಲ್‌ ಕಂ ಟಿಕೆಟ್‌ ಕ್ಲರ್ಕ್‌: 104 ಹುದ್ದೆಗಳು 3) ಸ್ಟೇಷನ್‌ ಮಾಸ್ಟರ್‌: 5 ಹುದ್ದೆಗಳು 4) ಸಹಾಯಕ ಲೋಕೊ ಪೈಲೆಟ್‌: 50 ಹುದ್ದೆಗಳು 5) ಹಿರಿಯ ಕ್ಲರ್ಕ್‌ ಕಂ ಟೈಪಿಸ್ಟ್‌: 51 ಹುದ್ದೆಗಳು 6) ಕ್ಲರ್ಕ್‌ ಕಂ ಟೈಪಿಸ್ಟ್‌: 66 ಹುದ್ದೆಗಳು 7) ಗೂಡ್ಸ್‌ ಹಾರ್ಡ್‌: 53 ಹುದ್ದೆಗಳು 8) ಟ್ರ್ಯಾಕ್‌ ಸಹಾಯಕ; 105 ಹುದ್ದೆಗಳು ವಿದ್ಯಾರ್ಹತೆ... ಸಂಬಂಧಿತ ಹುದ್ದೆಗಳ ವಿದ್ಯಾರ್ಹತೆಯ ಮಾಹಿತಿಯನ್ನು ಉತ್ತರ ಕೇಂದ್ರ ರೈಲ್ವೆ ಪ್ರಕಟಿಸಿರುವ ಅಧಿಸೂಚನೆಯನ್ನು ನೋಡುವುದು. ಗರಿಷ್ಠ ವಯೋಮಿತಿ ಸಾಮಾನ್ಯ ಅಭ್ಯರ್ಥಿಗಳು:42 ವರ್ಷಗಳು ಇತರೆ ಹಿಂದುಳಿದ ವರ್ಗ (ಒಬಿಸಿ):45 ವರ್ಷಗಳು ಎಸ್‌ಸಿ/ಎಸ್‌ಟಿ:47 ವರ್ಷಗಳು ಅರ್ಜಿ ಶುಲ್ಕ:ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ನೇಮಕಾತಿ ವಿಧಾನ:ಕಂಪ್ಯೂಟರ್‌ ಬೇಸ್ಡ್‌ ಟೆಸ್ಟ್‌ ಮೂಲಕ ನೇಮಕಾತಿ ಪರೀಕ್ಷೆ ನಡೆಯಲಿದೆ. ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ವೇತನ:ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಅನ್ವಯದಂತೆ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಅರ್ಜಿಸಲ್ಲಿಸುವ ವಿಧಾನ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ ://.. ಗೆ ಲಾಗಿನ್‌ ಆಗಿ ಅರ್ಜಿಗಳನ್ನು ಸಲ್ಲಿಸಬಹುದು. ಕೊನೆಯ ದಿನಾಂಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು2019ರ ನವೆಂಬರ್‌ 26 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈಲ್ವೆ ಇಲಾಖೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ನೋಡಬಹುದಾಗಿದೆ. ಈ ಕೆಳಗೆ ಅಧಿಸೂಚನೆ ಲಿಂಕ್‌ ನೀಡಲಾಗಿದೆ. ಅಧಿಸೂಚನೆ ಲಿಂಕ್‌:://./2qyhaeU ವೆಬ್‌ಸೈಟ್‌:://.../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.