ಬೆಂಗಳೂರಿನ ಎಚ್‌ಎಎಲ್‌ನಲ್ಲಿ ನರ್ಸ್‌, ಫಾರ್ಮಾಸಿಸ್ಟ್‌ ಹುದ್ದೆಗಳಿಗೆ ಅರ್ಜಿ ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್‌ಎಎಲ್)ನ ಇಲ್ಲಿನ ಮೆಡಿಕಲ್‌ ವಿಭಾಗದಲ್ಲಿ ಸ್ಟಾಫ್‌ ನರ್ಸ್‌ ಹಾಗೂ ಫಾರ್ಮಾಸಿಸ್ಟ್‌ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸದರಿ ಹುದ್ದೆಗಳ ನೇಮಕಾತಿಯು ಬೆಂಗಳೂರಿನಲ್ಲಿ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು ಎಚ್‌ಎಎಲ್‌ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ತುಂಬಬೇಕು. ಹುದ್ದೆಗಳ ವಿವರ 1)ಸ್ಟಾಫ್‌ ನರ್ಸ್‌ –2 ಹುದ್ದೆಗಳು (ಒಬಿಸಿ) 2)ಫಾರ್ಮಾಸಿಸ್ಟ್‌ –2 ಹುದ್ದೆಗಳು ( 1 ಅಂಗವಿಕಲ, ಸಾಮಾನ್ಯ 1) ಇದನ್ನೂ ಓದಿ:ರಾಯಚೂರು, ಕೊಪ್ಪಳ, ಬಳ್ಳಾರಿ ಹಾಲು ಒಕ್ಕೂಟದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ವಿದ್ಯಾರ್ಹತೆ ಸ್ಟಾಫ್‌ ನರ್ಸ್‌: ಪಿಯುಸಿ ಹಾಗೂ ಜನರಲ್‌ ನರ್ಸಿಂಗ್‌ ಮತ್ತು ಮಿಡ್‌ವೈಫರಿ (3 ವರ್ಷಗಳ) ವಿದ್ಯಾರ್ಹತೆಯನ್ನು ಹೊಂದಿರಬೇಕು ಫಾರ್ಮಾಸಿಸ್ಟ್‌: ಪಿಯುಸಿ (ಪಿಸಿಎಂ) ಹಾಗೂ ಎರಡು ವರ್ಷಗಳ ಡಿ ಫಾರ್ಮಾ ವಿದ್ಯಾರ್ಹತೆಯನ್ನು ಪಡೆದಿರಬೇಕು. ವೇತನ ಶ್ರೇಣಿ: ₹ 33039 ಮಾತ್ರ ವಯೋಮಿತಿ ಸಾಮಾನ್ಯ ಅಭ್ಯರ್ಥಿಗಳಿಗೆ 28, ಒಬಿಸಿ 31, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 33 ಹಾಗೂ ಅಂಗವಿಕಲರಿಗೆ 38 ವರ್ಷಗಳ ಗರಿಷ್ಠ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ. ಇದನ್ನೂ ಓದಿ:ಯಲಹಂಕ ರೈಲುಗಾಲಿ ಕಾರ್ಖಾನೆಯಲ್ಲಿ 192 ಟ್ರೇಡ್‌ ಅಪ್ರೆಂಟಿಸ್‌ಗಳಿಗೆ ಅರ್ಜಿ ನೇಮಕಾತಿ ವಿಧಾನ: ಲಿಖಿತ ಪರೀಕ್ಷೆಯ ಮೂಲಕ ನೇಮಕಾತಿ ನಡೆಯಲಿದೆ. ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಕರೆಯಲಾಗುವುದು. ಗುತ್ತಿಗೆ ಅವಧಿ: 4 ವರ್ಷಗಳ ವರೆಗೆ ಗುತ್ತಿಗೆ ಅವಧಿ ಇರುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 20–11–2019 ಹೆಚ್ಚಿನ ಮಾಹಿತಿಗೆ ಎಚ್‌ಎಎಲ್‌ ವೆಬ್‌ಸೈಟ್‌ ಅಥವಾ ಈ ಕೆಳಗೆ ನೀಡಿರುವ ಲಿಂಕ್‌ ಅನ್ನು ಕ್ಲಿಕ್ಕಿಸಿ. ವೆಬ್‌ಸೈಟ್‌:://-.. ಅಧಿಸೂಚನೆ ಲಿಂಕ್‌:://./2WqIuYE ಇದನ್ನೂ ಓದಿ:: ಗ್ರೂಪ್‌ ಬಿ, ಸಿ ಹುದ್ದೆಗಳ ನೇಮಕಾತಿಗೆ ಸಿಜಿಎಲ್‌ ಪರೀಕ್ಷೆಗೆ ಅರ್ಜಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.