ಇಸ್ರೋದಲ್ಲಿ ನೇರ ಸಂದರ್ಶನ: , ಆದವರಿಂದ 179 ಹುದ್ದೆಗಳಿಗೆ ಅರ್ಜಿ ಬೆಂಗಳೂರು:ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ ಟೆಕ್ನಿಷಿಯನ್‌ ಮತ್ತು ಟ್ರೇಡ್‌ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ನೇರ ಸಂದರ್ಶನಕ್ಕೆ ಕರೆಯಲಾಗಿದೆ. ಐಟಿಐ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನ ತಮಿಳುನಾಡಿನ ಮಹೇಂದ್ರಗಿರಿಯಲ್ಲಿ ನಡೆಯಲಿದೆ. ಹುದ್ದೆಗಳ ವಿವರ 1)ಟೆಕ್ನಿಷಿಯನ್‌ಅಪ್ರೆಂಟಿಸ್‌– 59 2)ಟ್ರೇಡ್‌ ಅಪ್ರೆಂಟಿಸ್‌–120 ಇದನ್ನೂ ಓದಿ:ಕರ್ನಾಟಕ ಸರ್ಕಾರ: ಪಾಸ್‌ ಆದವರಿಗೆ 2814 ಡ್ರೈವರ್‌, ಕಂಡಕ್ಟರ್‌ ಹುದ್ದೆಗಳು ತರಬೇತಿ ಭ್ಯತೆ:ಟೆಕ್ನಿಷಿಯನ್‌ ಮತ್ತು ಟ್ರೇಡ್‌ ಅಪ್ರೆಂಟಿಸ್‌ಗಳಿಗೆ ತರಬೇತಿ ಭತ್ಯೆಯಾಗಿ ಮಾಸಿಕ ₹ 9000 ನೀಡಲಾಗುವುದು. ವಯಸ್ಸು: ಗರಿಷ್ಠ ವಯೋಮಿತಿಯನ್ನು 35 ವರ್ಷಕ್ಕೆ ನಿಗದಿಪಡಿಸಲಾಗಿದೆ. (ಸರ್ಕಾರದ ನಿಯಮಗಳ ಅನ್ವಯ ಮಯೋಮಿತಿಯಲ್ಲಿ ಸಡಿಲಿಕೆ ಇರುವುದು) ಅರ್ಜಿ ಶುಲ್ಕ: ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಆಸಕ್ತ ಅಭ್ಯರ್ಥಿಗಳು... ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ. ಸಂದರ್ಶನ ದಿನಾಂಕ ಟೆಕ್ನಿಷಿಯನ್‌ ಅಪ್ರೆಂಟಿಸ್‌:21.12.2019 (ಶನಿವಾರ) ಟ್ರೇಡ್‌ ಅಪ್ರೆಂಟಿಸ್‌ :04.01.2020 (ಶನಿವಾರ) ಸಂದರ್ಶನ ಸ್ಥಳ (), , , ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ವೆಬ್‌ಸೈಟ್‌ ಹಾಗೂ ಅಧಿಸೂಚನೆಯ ಲಿಂಕ್‌ ಅನ್ನು ಕ್ಲಿಕ್ಕಿಸಿ ನೋಡಬಹುದು. ಅಧಿಸೂಚನೆ ಲಿಂಕ್‌: ://./2tfGesL ವೆಬ್‌ಸೈಟ್‌:... ಇದನ್ನೂ ಓದಿ: , ಆದವರಿಗೆ ದಕ್ಷಿಣ ರೈಲ್ವೆಯಲ್ಲಿ ಕೆಲಸ: 1208 ಅಪ್ರೆಂಟಿಸ್‌ಗಳ ನೇಮಕಾತಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.