ಇಸ್ರೋ ಬೆಂಗಳೂರು: , , , ಆದವರಿಂದ 185 ಹುದ್ದೆಗಳಿಗೆ ಅರ್ಜಿ ಬೆಂಗಳೂರು:ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಬೆಂಗಳೂರಿನ ಯು.ಆರ್.ರಾವ್‌ ಬಾಹ್ಯಾಕಾಶ ಕೇಂದ್ರದಲ್ಲಿ ಟೆಕ್ನಿಷಿಯನ್‌ ಮತ್ತು ಟ್ರೇಡ್‌ಟೆಕ್ನಿಷಿಯನ್‌, ಅಸಿಸ್ಟೆಂಟ್‌ಟೆಕ್ನಿಷಿಯನ್‌, ಸೈಂಟಿಪಿಕ್‌ ಅಸಿಸ್ಟೆಂಟ್‌, ಸಹಾಯಕ, ಚಾಲಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ತಾತ್ಕಲಿಕವಾಗಿರುತ್ತದೆ. ಗುತ್ತಿಗೆ ಅವಧಿ ಮುಗಿದ ಮೇಲೂ ಈ ಹುದ್ದೆಗಳನ್ನುಮುಂದುವರೆಸುವ ಸಾಧ್ಯತೆಗಳಿವೆ ಎಂದು ಇಸ್ರೋ ನೇಮಕಾತಿ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.ಐಟಿಐ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಸಂಖ್ಯೆ 1) ಟೆಕ್ನಿಷಿಯನ್‌–107 2) ಡ್ರಾಟ್ಸ್‌ಮನ್‌–03 3) ಟೆಕ್ನಿಕಲ್‌ ಅಸಿಸ್ಟೆಂಟ್‌–41 4) ಲೈಬ್ರರಿ ಅಸಿಸ್ಟೆಂಟ್‌–04 5) ಸೈಂಟಿಪಿಕ್‌ ಅಸಿಸ್ಟೆಂಟ್‌–07 6) ಟೈಪಿಸ್ಟ್–02 7) ಕೇಟರಿಂಗ್ ಅಸಿಸ್ಟೆಂಟ್‌–10 8) ಫೈರ್‌ ಮ್ಯಾನ್‌ –04 9) ಚಾಲಕ–09 ವಿದ್ಯಾರ್ಹತೆ: ವಿವಿಧ ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಗಿದೆ. ಎಸ್‌ಎಸ್‌ಎಲ್‌ಸಿ,ಐಟಿಐ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಹತೆ ಪಡೆದಿರಬೇಕು. ವಿದ್ಯಾರ್ಹತೆ ಮಾಹಿತಿಗೆ ಈ ಕೆಳಗೆ ನೀಡಿರುವ ಅಧಿಸೂಚನೆ ಲಿಂಕ್‌ ನೋಡಬಹುದು. ವೇತನ ಶ್ರೇಣಿ: ಹುದ್ದೆಗಳಿಗೆ ಅನುಸಾರವಾಗಿ ವೇತನ ನೀಡಲಾಗುವುದು.ಕೇಟರಿಂಗ್ ಅಸಿಸ್ಟೆಂಟ್‌ ಹುದ್ದೆಗಳಿಗೆ ಮಾಸಿಕ ₹ 18,000ಟೆಕ್ನಿಷಿಯನ್‌ ಹಾಗೂಸೈಂಟಿಪಿಕ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಮಾಸಿಕ ₹ 49,900 ವೇತನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಲಿಂಕ್‌ ನೋಡುವುದು. ವಯಸ್ಸು: ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆಗರಿಷ್ಠ ವಯೋಮಿತಿಯನ್ನು 25, 26, 35 ವರ್ಷಕ್ಕೆ ನಿಗದಿಪಡಿಸಲಾಗಿದೆ. (ಸರ್ಕಾರದ ನಿಯಮಗಳ ಅನ್ವಯ ಮಯೋಮಿತಿಯಲ್ಲಿ ಸಡಿಲಿಕೆ ಇರುವುದು) ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ. ನೇಮಕಾತಿ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸ್ಕಿಲ್‌ ಟೆಸ್ಟ್‌ ಮೂಲಕ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದಲ್ಲಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿ ಸಲ್ಲಿಸುವ ಕೊನೆ ದಿನ:06.03.2020 ಅಧಿಸೂಚನೆ ಲಿಂಕ್‌:://.../-2020/. ವೆಬ್‌ಸೈಟ್‌:://.../- ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.