ಆದವರಿಗೆ ₹21,400 ಮೂಲ ವೇತನ: ಚಿಕ್ಕಮಗಳೂರಲ್ಲಿ 50 ಗ್ರಾಮಲೆಕ್ಕಿಗ ಹುದ್ದೆಗಳು ಚಿಕ್ಕಮಗಳೂರು:‌ರಾಜ್ಯಕಂದಾಯ ಇಲಾಖೆಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆ: 50 ( 4 ಹಿಂಬಾಕಿ ಸೇರಿ) ವಿದ್ಯಾರ್ಹತೆ:ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ದ್ವೀತಿಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕಡ್ಡಾಯವಾಗಿಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ವೇತನ ಶ್ರೇಣಿ: ₹21,400 (ಮೂಲ ವೇತನ)– ₹ 42,000 ಶ್ರೇಣಿಯಲ್ಲಿ ವೇತನ ನೀಡಲಾಗುವುದು. ಅರ್ಜಿ ಶುಲ್ಕ:ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲಅಭ್ಯರ್ಥಿಗಳಿಗೆ ₹ 150, ಇತರೆ ಅಭ್ಯರ್ಥಿಗಳಿಗೆ ₹ 300. ವಯೋಮಿತಿ 1) ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 24 ವರ್ಷ, ಗರಿಷ್ಠ 35 ವರ್ಷ 2) ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ಕನಿಷ್ಠ 24 ವರ್ಷ, ಗರಿಷ್ಠ 38 ವರ್ಷ 3) ಪ.ಜಾ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ ಕನಿಷ್ಠ 24 ವರ್ಷ, ಗರಿಷ್ಠ 40 ವರ್ಷ ನೇಮಕಾತಿ ವಿಧಾನ:ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಮೀಸಲಾತಿ ಅನ್ವಯ ಅತಿಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನುದಾಖಲೆಪರಿಶೀಲನೆಗೆ ಕರೆಯಲಾಗುವುದು. ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿ ಸಲ್ಲಿಸುವ ಕಡೆ ದಿನಾಂಕ: 20-03-2020 ಲಿಂಕ್‌:://.s3waas../s367d96d458abdef21792e6d8e590244e7//2020021795. ವೆಬ್‌ಸೈಟ್‌:://.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.