ಮೈಸೂರು: ಆಹಾರ ವಿಜ್ಞಾನಿ ಹುದ್ದೆಗಳಿಗೆ ಅರ್ಜಿ, ವೇತನ ₹ 67,000–₹ 2,00,000 ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ)ಮೈಸೂರು ಇಲ್ಲಿ ಖಾಲಿ ಇರುವ ವಿವಿಧ ವಿಜ್ಞಾನಿಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 31 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಹುದ್ದೆಗಳ ವಿವರ 1) ವಿಜ್ಞಾನಿ: 25 ಹುದ್ದೆಗಳು 2) ಹಿರಿಯ ವಿಜ್ಞಾನಿ: 3ಹುದ್ದೆಗಳು 3) ಮುಖ್ಯ ವಿಜ್ಞಾನಿ: 3 ಹುದ್ದೆಗಳು ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಫುಡ್‌ ಟೆಕ್ನಾಲಜಿ ವಿಭಾಗದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಆಹಾರ ವಿಷಯಕ್ಕೆ ಸಂಬಂಧಿಸಿದಂತೆ ಪಿಎಚ್‌ಡಿ ಪಡೆದಿರಬೇಕು. ಹೆಚ್ಚಿನ ವಿದ್ಯಾರ್ಹತೆ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆ ಲಿಂಕ್‌ ನೋಡುವುದು. ವೇತನ ಶ್ರೇಣಿ 1)ವಿಜ್ಞಾನಿ: ₹ 67,700 ರಿಂದ 2,08,700 ಮಾಸಿಕ ವೇತನ 2) ಹಿರಿಯ ವಿಜ್ಞಾನಿ: ₹ 78,800 ರಿಂದ 2,09,200ಮಾಸಿಕ ವೇತನ 3) ಮುಖ್ಯ ವಿಜ್ಞಾನಿ: ₹ 1,23,100 ರಿಂದ 2,15,900ಮಾಸಿಕ ವೇತನ ವಯಸ್ಸು 1) ವಿಜ್ಞಾನಿ: ಗರಿಷ್ಠ 32 ವರ್ಷ ವಯೋಮಿತಿ 2) ಹಿರಿಯ ವಿಜ್ಞಾನಿ: ಗರಿಷ್ಠ 37 ವರ್ಷ ವಯೋಮಿತಿ 3) ಮುಖ್ಯ ವಿಜ್ಞಾನಿ: ಗರಿಷ್ಠ 45 ವರ್ಷ ವಯೋಮಿತಿ ವಯೋಮಿತಿ ಸಡಿಲಿಕೆ:ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು. ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ. ನೇಮಕಾತಿ ವಿಧಾನ: ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸುವುದು ಹೇಗೆ: ಆನ್‌ಲೈನ್‌ನಲ್ಲಿ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಅಧಿಕೃತ ವೆಬ್‌ಸೈಟ್‌ ://.. ಲಾಗಿನ್‌ ಆಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳು ಅರ್ಜಿಯ ಪ್ರಿಂಟೌಟ್ ತೆಗೆದುಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಫೆ. 21,2020ರೊಳಗೆ ಅರ್ಜಿಯನ್ನು ಕಳುಹಿಸಬೇಕು. ಅರ್ಜಿ ಕಳುಹಿಸುವ ವಿಳಾಸ (-1 ) - -570020 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-02-2020 ಅಧಿಸೂಚನೆ ಲಿಂಕ್‌:://./2NEguOb ವೆಬ್‌ಸೈಟ್‌:://... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.