| ಮೂಲ ವೇತನ ₹ 52,650: ಸಹಾಯಕ ನಿಯಂತ್ರಕರು ಹುದ್ದೆಗಳ ನೇಮಕಾತಿ ಅರ್ಜಿ ಬೆಂಗಳೂರು:ಸರ್ಕಾರದ ಲೆಕ್ಕ ಪತ್ರ ಹಾಗೂ ಲೆಕ್ಕ ಪರಿಶೋಧನೆ ಇಲಾಖೆಯಲ್ಲಿಖಾಲಿ ಇರುವ ಗ್ರೂಪ್‌ ಎ ಶ್ರೇಣಿಯ48 ಸಹಾಯಕ ನಿಯಂತ್ರಕರು ಹುದ್ದೆಗಳ ನೇಮಕಾತಿಗೆಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಿದ್ದುನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯಲಿದೆ. ಒಟ್ಟು ಹುದ್ದೆಗಳ ಸಂಖ್ಯೆ: 48 ಮೀಸಲಾತಿ: ಸಾಮಾನ್ಯ–24, ಪ.ಜಾತಿ–7, ಪ.ಪಂಗಡ–02, ಹಿಂದುಳಿದ ವರ್ಗ–15 ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂ.ಬಿ.ಎ ಅಥವಾ ಐ.ಸಿ.ಡಬ್ಯೂ.ಎ ವಿದ್ಯಾರ್ಹತೆ ಹೊಂದಿರಬೇಕು. ವೇತನ ಶ್ರೇಣಿ: ₹52,650(ಮೂಲ ವೇತನ) ರಿಂದ 97100 ಶ್ರೇಣಿಯಲ್ಲಿ ಸರ್ಕಾರಿ ನಿಯಮಗಳ ಅನುಸಾರ ವೇತನ ನೀಡಲಾಗುವುದು. ವಯಸ್ಸು *ಕನಿಷ್ಠ 21 ವರ್ಷಗಳಾಗಿರಬೇಕು. ವಯೋಮಿತಿ ಸಡಿಲಿಕೆ * ಸಾಮಾನ್ಯವರ್ಗದ ಅಭ್ಯರ್ಥಿಗಳು– ಗರಿಷ್ಠ 35 ವರ್ಷ * ಹಿಂದುಳಿದ ವರ್ಗದ ಅಭ್ಯರ್ಥಿಗಳು– ಗರಿಷ್ಠ 38 ವರ್ಷ * ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು– 40 ವರ್ಷ ಅರ್ಜಿ ಶುಲ್ಕ - ಸಾಮಾನ್ಯ ವರ್ಗದ ಅಭ್ಯರ್ಥಿಗಳು–₹ 600 - ಹಿಂದುಳಿದ ವರ್ಗದ ಅಭ್ಯರ್ಥಿಗಳು–₹ 300 - ಮಾಜಿ ಸೈನಿಕರು–₹ 50 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆದಾಗ್ಯೂ ಈ ಅಭ್ಯರ್ಥಿಗಳುಪ್ರೋಸೆಸಿಂಗ್ ಚಾರ್ಜ್‌ ₹ 35 ಪಾವತಿಸಬೇಕು.ಅರ್ಜಿ ಶುಲ್ಕ ಪಾತಿಸುವ ಅಭ್ಯರ್ಥಿಗಳು ಸಹ ಹೆಚ್ಚುವರಿಯಾಗಿಪ್ರೋಸೆಸಿಂಗ್ ಚಾರ್ಜ್‌ ₹ 35 ಪಾವತಿಸಬೇಕು. ನೇಮಕಾತಿ ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಯಲಿದೆ. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯು ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್‌ ಅನ್ನು ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು. ಅರ್ಜಿ ಸಲ್ಲಿಸುವ ವಿಧಾನ * ಲೋಕಸೇವಾ ಆಯೋಗದ ವೆಬ್‌ಸೈಟ್‌....inಲಾಗಿನ್‌ ಆಗಿ ಅನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕು. * ಅಭ್ಯರ್ಥಿಗಳು ತಮ್ಮ ವಿವರ, ಶೈಕ್ಷಣಿಕ ಅರ್ಹತೆ ವಿವರ ಮತ್ತು ಇತರೆ ವಿವರಗಳನ್ನು ತುಂಬಬೇಕು * ಅಂತಿಮ ಹಂತದಲ್ಲಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು. ಮುಖ್ಯ ಮಾಹಿತಿ *ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :06-03-2020 *ಪೂರ್ವಭಾವಿ ಪರೀಕ್ಷಾ ದಿನಾಂಕ : 24-05-2020 *ಮುಖ್ಯ ಪರೀಕ್ಷಾ ದಿನಾಂಕ : 2020 ರ ಆಗಸ್ಟ್‌/ ಸೆಪ್ಟೆಂಬರ್ * ಅಧಿಸೂಚನೆ ಲಿಂಕ್‌:://./377vKd7 * ಕೆಪಿಎಸ್‌ಸಿ ವೆಬ್‌ಸೈಟ್‌:://.... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.