ಬಳ್ಳಾರಿ ಜಿಲ್ಲಾ ನ್ಯಾಯಾಲಯ: ಟೈಪಿಸ್ಟ್‌, ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಜಿ ಬೆಂಗಳೂರು: ಬಳ್ಳಾರಿ ಜಿಲ್ಲಾ ಸತ್ರ ನ್ಯಾಯಾಲಯಗಳಲ್ಲಿ ಖಾಲಿ ಇರುವ ಟೈಪಿಸ್ಟ್‌, ಆದೇಶ ಜಾರಿಕಾರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆ ಲಿಂಕ್ ನೋಡುವುದು. ಹುದ್ದೆಗಳ ಸಂಖ್ಯೆ: 17 ಹುದ್ದೆಗಳ ವಿವರ 1)ಬೆರಳಚ್ಚುಗಾರರು: 06 2) ಬೆರಳಚ್ಚು ನಕಲುಗಾರರ: 09 3) ಆದೇಶ ಜಾರಿಕಾರರು: 02 *ಬೆರಳಚ್ಚುಗಾರರು ವಿದ್ಯಾರ್ಹತೆ:ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಬೆರಳಚ್ಚು ಹಿರಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಈ ವಿಷಯಗಳಲ್ಲಿ ಡಿಪ್ಲೋಮಾ ಪಡೆದಿರಬೇಕು. ವೇತನ ಶ್ರೇಣಿ: ₹ 21,000 (ಮೂಲ ವೇತನ)–42,000 ಶ್ರೇಣಿಯಲ್ಲಿ ವೇತನ ನಿಡಲಾಗುವುದು. ಅಧಿಸೂಚನೆ ಲಿಂಕ್:://...////TYP_2. *ಬೆರಳಚ್ಚು ನಕಲುಗಾರರು ವಿದ್ಯಾರ್ಹತೆ:ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಬೆರಳಚ್ಚು ಹಿರಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಈ ವಿಷಯಗಳಲ್ಲಿ ಡಿಪ್ಲೋಮಾ ಪಡೆದಿರಬೇಕು. ವೇತನ ಶ್ರೇಣಿ: ₹ 21,000 (ಮೂಲ ವೇತನ)–42,000 ಶ್ರೇಣಿಯಲ್ಲಿ ವೇತನ ನಿಡಲಾಗುವುದು ಅಧಿಸೂಚನೆ ಲಿಂಕ್:://...////. *ಆದೇಶ ಜಾರಿಕಾರರು ವಿದ್ಯಾರ್ಹತೆ:ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವೇತನ ಶ್ರೇಣಿ: ₹ 19,950 (ಮೂಲ ವೇತನ)–37,000 ಶ್ರೇಣಿಯಲ್ಲಿ ವೇತನ ನಿಡಲಾಗುವುದು ಅಧಿಸೂಚನೆ ಲಿಂಕ್‌:://...////pp1. ನಿಗದಿತ ಶುಲ್ಕ: ಸಾಮಾನ್ಯ, ಪ್ರವರ್ಗ- 1,2ಎ, 2ಬಿ, 3ಎ ಮತ್ತು 3ಬಿ ಸೇರಿದ ಅಭ್ಯರ್ಥಿಗಳು ₹250 ಪಾವತಿಸಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳಿಗೆ ₹100 ಮಾತ್ರ. ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿ ಸಲ್ಲಿಸುವ ಕೊನೆಯ ದಿನ: 24-02-2020 ವೆಬ್‌ಸೈಟ್‌:://.../- ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.