: ಅರ್ಜಿ ಸಲ್ಲಿಸಲು ಏಪ್ರಿಲ್‌ 30 ಕೊನೆ ದಿನ ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ದಿನವನ್ನು ಕರ್ನಾಟಕ ಲೋಕಸೇವಾ ಆಯೋಗ ಏ. 30ರವರೆಗೆ ವಿಸ್ತರಿಸಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಏ. 9 ಮತ್ತು ಶುಲ್ಕ ಪಾವತಿಸಲು ಏ. 13 ಕೊನೆಯ ದಿನ ಎಂದು ಈ ಹಿಂದೆ ಕೆಪಿಎಸ್‌ಸಿ ಪ್ರಕಟಿಸಿತ್ತು. ಇದೀಗ ಶುಲ್ಕ ಪಾವತಿಸುವ ಕೊನೆ ದಿನವನ್ನು ಮೇ 2ರವರೆಗೆ ವಿಸ್ತರಿಸಲಾಗಿದೆ. ಕೊರೊನಾ ಸೋಂಕು ಹರಡುವಿಕೆ ತಡೆಯುವ ಹಿನ್ನೆಲೆಯಲ್ಲಿ ಸರ್ಕಾರದ ಮುನ್ನೆಚ್ಚರಿಕೆ ಆದೇಶಗಳ ಅನ್ವಯ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ತಿಳಿಸಿದ್ದಾರೆ. *ಅಧಿಸೂಚನೆ ಲಿಂಕ್‌:://..../%202019%20_RPC_%20UPDATD%20-%20FINAL. * ಕೆಪಿಎಸ್‌ಸಿ ವೆಬ್‌ಸೈಟ್‌:://.... ಇದನ್ನೂ ಓದಿ: | ಮೂಲ ವೇತನ₹21,400:1279 ಹುದ್ದೆಗಳಿಗೆ ಅರ್ಜಿ, ವಿದ್ಯಾರ್ಹತೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.