ಕರ್ನಾಟಕ ಸರ್ಕಾರ | ಪೊಲೀಸ್‌ ಇಲಾಖೆ: 54 ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಬೆಂಗಳೂರು: ರಾಜ್ಯದ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ 54 ವೈಜ್ಞಾನಿಕ ಅಧಿಕಾರಿಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಹುದ್ದೆಗಳ ಸಂಖ್ಯೆ: 54 ಹುದ್ದೆ ಹೆಸರು: ವೈಜ್ಞಾನಿಕ ಅಧಿಕಾರಿಗಳು ( ) ವಿದ್ಯಾರ್ಹತೆ: ವಿಜ್ಞಾನ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಹುದ್ದೆಗಳ ಅನುಸಾರದ ವಿದ್ಯಾರ್ಹತೆ ಮಾಹಿತಿಗೆಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್‌ ಕ್ಲಿಕ್ಕಿಸಿ ನೋಡಬಹುದು. ವಯಸ್ಸು: ಕನಿಷ್ಠ 21 ವರ್ಷ, ಗರಿಷ್ಠ 35 ವರ್ಷಗಳು. ವಯೋಮಿತಿ: ಸರ್ಕಾರಿ ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅರ್ಜಿ ಶುಲ್ಕ *ಸಾಮಾನ್ಯ ಹಾಗೂಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: ₹ 250 *ಪ.ಜಾ / ಪ.ಪಂಗಡ / ಪ್ರವರ್ಗ-1 ರ ಅಭ್ಯರ್ಥಿಗಳಿಗೆ: ₹ 100 ನೇಮಕಾತಿ ವಿಧಾನ, ವೇತನ ಶ್ರೇಣಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ಅಧಿಸೂಚನೆ ಲಿಂಕ್‌ ನೋಡಬಹುದು. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಕಡೆ ದಿನ:18/03/2020 ಅಧಿಸೂಚನೆ ಲಿಂಕ್‌:://rec19.-./ ವೆಬ್‌ಸೈಟ್‌:://... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.