ಬಿಐಎಸ್‌ನಲ್ಲಿ 150 ವಿಜ್ಞಾನಗಳ ಹುದ್ದೆಗೆ ಅರ್ಜಿ ಆಹ್ವಾನ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‌(ಬಿಐಎಸ್‌) ಖಾಲಿ ಇರುವ 150 ವಿಜ್ಞಾನಿಗಳ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. *ಹುದ್ದೆಗಳ ಸಂಖ್ಯೆ: 150 *ಕೆಲಸದ ಸ್ಥಳ: ಭಾರತದೆಲ್ಲೆಡೆ *ವಿದ್ಯಾರ್ಹತೆ: ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ ವಿಭಾಗದಲ್ಲಿ ಪದವಿ ಪಡೆದಿರಬೇಕು. ಶೇ 60ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. *ವಯೋಮಿತಿ: ಮಾರ್ಚ್‌ 31, 2020ಕ್ಕೆ ಅನುಗುಣವಾಗಿ 30 ವರ್ಷ ಮೀರಿರಬಾರದು. *ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕರು, ಅಂಗವಿಕಲರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ವಿನಾಯಿತಿ ಇದೆ. ಉಳಿದ ವರ್ಗದವರಿಗೆ ₹ 100 ಅರ್ಜಿ ಶುಲ್ಕ. *ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 31, 2020 *ಅಧಿಸೂಚನೆ ಲಿಂಕ್: ://.././------/#⇒ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.