ಉದ್ಯೋಗ ವಾರ್ತೆ: ಸರಕು ಸಾಗಣೆ ನಿಗಮದಲ್ಲಿ ಹುದ್ದೆಗಳು ಸರಕು ಸಾಗಣೆ ನಿಗಮದಲ್ಲಿ ಹುದ್ದೆಗಳು ಸರಕು ಸಾಗಣೆ ನಿಗಮದಲ್ಲಿ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆ: ಎಕ್ಸಿಕ್ಯೂಟಿವ್, ಮ್ಯಾನೇಜರ್‌ ಹುದ್ದೆಗಳ ಸಂಖ್ಯೆ: 1072 ಸ್ಥಳ: ದೇಶದೆಲ್ಲೆಡೆ ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ, ಪದವಿ, ಎಂಬಿಎ, ಪಿಜಿಡಿಬಿಎ, ಪಿಜಿಡಿಬಿಎಂ, ಪಿಜಿಡಿಎಂ. ವಯೋಮಿತಿ: ಕನಿಷ್ಠ 18 ಹಾಗೂ ಗರಿಷ್ಠ 30 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ. ಅರ್ಜಿ ಶುಲ್ಕ: ಜೂನಿಯರ್ ಮ್ಯಾನೇಜರ್‌ ₹ 1000, ಎಕ್ಸಿಕ್ಯೂಟಿವ್‌ ₹ 700, ಎಸ್‌ಸಿ/ ಎಸ್‌ಟಿ, ಅಂಗವಿಕಲರು ಹಾಗೂ ಮಾಜಿ ಯೋಧರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ನೇಮಕಾತಿ ಪ್ರಕ್ರಿಯೆ: ಕಂ‌ಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆ ಪರಿಶೀಲನೆ, ಸಂದರ್ಶನದ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 23, 2021 ಹೆಚ್ಚಿನ ಮಾಹಿತಿಗೆ: ://..///1258/70799/. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.