ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು ಭಾಗ– 8 96. ಬೌದ್ಧಧರ್ಮ ಪ್ರಚಾರಕ್ಕಾಗಿ ಅಫ್ಘಾನಿಸ್ತಾನ, ಬರ್ಮಾ, ಶ್ರೀಲಂಕಾ ಮತ್ತು ಯುರೋಪಿಗೆ ನಿಯೋಗಗಳನ್ನು ಕಳುಹಿಸಿದ ದೊರೆ ಯಾರು? ಎ) ಚಂದ್ರಗುಪ್ತ ಮೌರ್ಯ ಬಿ) ಬಿಂದುಸಾರ ಸಿ) ಹರ್ಷವರ್ಧನ ಡಿ) ಅಶೋಕ 97. ಪ್ರಾಚೀನ ಭಾರತದ ಶ್ರೇಷ್ಠ ಗಣಿತಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ ಯಾರು? ಎ) ಅಮರಸಿಂಹ ಬಿ) ಆರ್ಯಭಟ ಸಿ) ವಿಷ್ಣುಶರ್ಮ ಡಿ) ಮೇಲ್ಕಂಡ ಯಾರೂ ಅಲ್ಲ 98. ಈ ಕೆಳಗಿನವರಲ್ಲಿ ಯಾರು ವೃತ್ತಿ ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತನಾಮರಾಗಿದ್ದಾರೆ? ಎ) ಮಾಸ್ಟರ್ ಹಿರಣ್ಣಯ್ಯ ಬಿ) ಜಟ್ಟಿ ತಾಯಮ್ಮ ಸಿ) ಕೋಲಾರ ಕಿಟ್ಟಪ್ಪ ಡಿ) ಶಾಂತರಾವ್ 99. ಈ ಕೆಳಕಂಡವರಲ್ಲಿ ಯಾರು ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕರಾಗಿದ್ದಾರೆ? ಎ) ಸುಬ್ಬರಾವ್ ಬಿ) ನಾಗಾಭರಣ ಸಿ) ರಾಜಣ್ಣ ಡಿ) ವೆಂಕಟಪ್ಪ 100. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ವ್ಯಕ್ತಿ ಕ್ರಾಂತಿಕಾರಿ ಆಗಿರಲಿಲ್ಲ? ಎ) ಭಗತ್‌ಸಿಂಗ್ ಬಿ) ರಾಜಗುರು ಸಿ) ಸುಖದೇವ್ ಡಿ) ದಾದಾಭಾಯ್ ನವರೋಜಿ 101. ಗಾಂಧೀಜಿಯವರ ಪ್ರಸಿದ್ಧ ‘ಉಪ್ಪಿನ ಸತ್ಯಾಗ್ರಹ’ ಯಾವ ವರ್ಷ ಆರಂಭವಾಯಿತು? ಎ) 12 ಮಾರ್ಚ್, 1930 ಎ) 6 ಮಾರ್ಚ್, 1930 ಎ) 16 ಮಾರ್ಚ್, 1930 ಎ) 26 ಮಾರ್ಚ್, 1930 102. ಸುಭಾಷ್‌ ಚಂದ್ರ ಬೋಸ್ ಏನೆಂದು ಪ್ರಖ್ಯಾತರಾಗಿದ್ದರು? ಎ) ಭಾರತದ ಉಕ್ಕಿನ ಮನುಷ್ಯ ಬಿ) ನೇತಾಜಿ ಸಿ) ಬಾಬಾಜಿ ಡಿ) ಗುರೂಜಿ 103. ಬಾಂಬೆ ಶಾಸನಸಭೆಗೆ ರಾಜೀನಾಮೆ ನೀಡಿ, ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣಕ್ಕೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದವರು ಯಾರು? ಎ) ಎಸ್.ನಿಜಲಿಂಗಪ್ಪ ಬಿ) ಆಲೂರು ವೆಂಕಟರಾಯರು ಸಿ) ಅಂದಾನಪ್ಪ ದೊಡ್ಡಮೇಟಿ ಡಿ) ಡಿ.ದೇವರಾಜ ಅರಸು 104. ಈ ಕೆಳಗಿನವುಗಳಲ್ಲಿ ಯಾವುದು ವಾಣಿಜ್ಯ ಬೆಳೆ? ಎ) ರಾಗಿ →→ಬಿ) ಗೋಧಿ ಸಿ) ರಬ್ಬರ್ →→ಡಿ) ಅಕ್ಕಿ 105. ಈ ಕೆಳಗಿನವುಗಳಲ್ಲಿ ಯಾವುದು ಅಣು ಖನಿಜ? ಎ) ಅಭ್ರಕ→→ಬಿ) ಹೆಮಟೈಟ್ ಸಿ) ಮ್ಯಾಗ್ನಟೈಟ್→ಡಿ) ಯುರೇನಿಯಂ‌ 106. ಮರ್ಮಗೋವಾ ಬಂದರು ಯಾವ ರಾಜ್ಯದಲ್ಲಿದೆ? ಎ) ಗೋವಾ ಬಿ) ಗುಜರಾತ್ ಸಿ) ಮಹಾರಾಷ್ಟ್ರ ಡಿ) ಕರ್ನಾಟಕ 107. ಪ್ರಪಂಚದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು? ಎ) ಚೀನಾ ಬಿ) ಬ್ರೆಜಿಲ್ ಸಿ) ಭಾರತ ಡಿ) ಶ್ರೀಲಂಕಾ 108. ನೈರುತ್ಯ ಮಾನ್ಸೂನ್ ಮಳೆಗಾಲ ಯಾವ ಅವಧಿಯಲ್ಲಿ ಬರುತ್ತದೆ? ಎ) ಮಾರ್ಚ್– ಮೇ ಬಿ) ಡಿಸೆಂಬರ್– ಫೆಬ್ರುವರಿ ಸಿ) ಅಕ್ಟೋಬರ್– ನವೆಂಬರ್ ಡಿ) ಜೂನ್– ಸೆಪ್ಟೆಂಬರ್ 109. ಯಾವ ಮಣ್ಣು ಹತ್ತಿ ಬೆಳೆಗೆ ಬಹು ಸೂಕ್ತವಾಗಿರುತ್ತದೆ? ಎ) ಮೆಕ್ಕಲು ಮಣ್ಣು →ಬಿ) ಕಪ್ಪುಮಣ್ಣು ಸಿ) ಕೆಂಪುಮಣ್ಣು →ಡಿ) ಜಂಬಿಟ್ಟಿಗೆ ಮಣ್ಣು 110. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ ಎ) ಕಾಜಿರಂಗ ನ್ಯಾಷನಲ್ ಪಾರ್ಕ್‌ 1) ಪಶ್ಚಿಮ →→→→ಬಂಗಾಳ ಬಿ) ಸುಂದರಬನ್→ 2) ಗುಜರಾತ್ ಸಿ) ಹಜಾರಿಬಾಗ್ ನ್ಯಾಷನಲ್ ಪಾರ್ಕ್ 3) ಅಸ್ಸಾಂ ಡಿ) ಗಿರ್ ನ್ಯಾಷನಲ್ ಪಾರ್ಕ್‌ 4) ಬಿಹಾರ ಎ) ಎ-1, ಬಿ-2, ಸಿ-3, ಡಿ-4 ಬಿ) ಎ-2, ಬಿ-4, ಸಿ-1, ಡಿ-3 ಸಿ) ಎ-4, ಬಿ-3, ಸಿ-2, ಡಿ-1 ಡಿ) ಎ-3, ಬಿ-1, ಸಿ-4, ಡಿ-2 ಭಾಗ – 7ರ ಉತ್ತರ 81. ಬಿ, 82. ಸಿ, 83. ಸಿ, 84. ಸಿ, 85. ಎ, 86. ಬಿ, 87. ಡಿ, 88. ಬಿ, 89. ಸಿ, 90. ಬಿ, 91. ಎ, 92. ಸಿ, 93. ಡಿ, 94. ಬಿ, 95. ಬಿ (ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.