ತರಬೇತಿ ಭತ್ಯೆ ₹27,000: ಪವರ್ ಗ್ರಿಡ್‌ನಲ್ಲಿ ಟ್ರೈನಿ ಹುದ್ದೆಗಳ ನೇಮಕಕ್ಕೆ ಅರ್ಜಿ ಪವರ್ ಗ್ರಿಡ್‌ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ಡಿಪ್ಲೋಮಾ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆ: ಡಿಪ್ಲೋಮಾ ಟ್ರೈನಿ ಹುದ್ದೆಗಳ ಸಂಖ್ಯೆ: 35 ಸ್ಥಳ: ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ ವಿದ್ಯಾರ್ಹತೆ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಎಲೆಕ್ಟ್ರಿಕಲ್ ವಿಭಾಗದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು. ವಯೋಮಿತಿ: ಜೂನ್‌ 29, 2021ಕ್ಕೆ ಅನ್ವಯವಾಗುವಂತೆ 27 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ: ಒಬಿಸಿ, 2ಎ, 2ಬಿ, 3ಎ ಹಾಗೂ 3ಬಿ ಅವರಿಗೆ 3 ವರ್ಷ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ. ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಒಬಿಸಿ ವರ್ಗದ ಪುರುಷ ಅಭ್ಯರ್ಥಿಗಳಿಗೆ ₹300 ಹಾಗೂ ಎಸ್‌ಸಿ, ಎಸ್‌ಟಿ, ಅಂಗವಿಕಲ ಹಾಗೂ ಮಾಜಿ ಸೈನಿಕರಿಗೆ ಅರ್ಜಿ ಶುಲ್ಕವಿಲ್ಲ. ತರಬೇತಿ ಭತ್ಯೆ: ₹27.000 ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ (ಕಂಪ್ಯೂಟರ್‌ ಟೆಸ್ಟ್‌) ಮೂಲಕ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್‌ 29, 2021 ಅಧಿಸೂಚನೆ ಲಿಂಕ್‌:://..////--2---2021. ವೆಬ್‌ಸೈಟ್‌:://../-- ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.