ನಬಾರ್ಡ್‌: 162 ಅಸಿಸ್ಟೆಂಟ್ ಮ್ಯಾನೇಜರ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್‌ನಲ್ಲಿ (ನಬಾರ್ಡ್‌) ಖಾಲಿ ಇರುವ 162 ಅಸಿಸ್ಟೆಂಟ್ ಮ್ಯಾನೇಜರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ: 162 ಹುದ್ದೆಗಳು 1) ಅಸಿಸ್ಟೆಂಟ್‌ ಮ್ಯಾನೇಜರ್– 148 2) ರಾಜಭಾಷಾ– 05 3) ಸೆಕ್ಯೂರಿಟಿ ಸರ್ವೀಸ್– 02 4)ಮ್ಯಾನೇಜರ್ ಇನ್‌ ಗ್ರೇಡ್‌ ಬಿ –07 ವಿದ್ಯಾರ್ಹತೆ: ಪದವಿ, ಸ್ನಾತಕೋತ್ತರ ಪದವಿ ಅಥವಾ ಹುದ್ದೆಗಳಿಗೆ ಸಂಬಂಧಿಸಿದಂತೆ ಡಿಪ್ಲೊಮಾ ಕೋರ್ಸ್‌ ಪಡೆದಿರಬೇಕು. ಹೆಚ್ಚಿನ ಮಾಹಿತಿಗೆ ನೇಮಕಾತಿಯ ಅಧಿಸೂಚನೆ ನೋಡುವುದು. ವಯಸ್ಸು: 1 ಜುಲೈ 2021ಕ್ಕೆ ಅನ್ವಯವಾಗುವಂತೆ 21ರಿಂದ 30 ವರ್ಷದೊಳಗಿನವರಾಗಿರಬೇಕು. ವಯೋಮಿತಿ: ಸಾಮಾನ್ಯ ಹಾಗೂ ಮೀಸಲಾತಿ ರಹಿತ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ (1 ಜುಲೈ 2021ಕ್ಕೆ ಅನ್ವಯವಾಗುವಂತೆ). ಅಂಗವಿಕಲರಿಗೆ 10 ವರ್ಷ, ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ. ಆಯ್ಕೆ ಪ್ರಕ್ರಿಯೆ: ನೇಮಕಾತಿಯು ಮೂರು ಹಂತಗಳಲ್ಲಿ ನಡೆಯಲಿದೆ.ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅಂತಿಮ ನೇಮಕಾತಿ ನಡೆಯಲಿದೆ. ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ₹100. ಸಾಮಾನ್ಯ ಹಾಗೂ ಇತರೆ ವರ್ಗಗಳ ಅಭ್ಯರ್ಥಿಗಳಿಗೆ ₹750. ಅರ್ಜಿ ಸಲ್ಲಿಸಲು ಕೊನೆಯ ದಿನ: 07, ಆಗಸ್ಟ್‌ 2021. ಹೆಚ್ಚಿನ ಮಾಹಿತಿಗೆ: .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.