ಮೂಲ ವೇತನ ₹25,500 | : 115 ಹೆಡ್‌ ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ಅರ್ಜಿ ಕೇಂದ್ರ ಗೃಹ ಸಚಿವಾಲಯದಸಶಸ್ತ್ರ ಸೀಮಾ ಬಲದಲ್ಲಿ ಖಾಲಿ ಇರುವ ಹೆಡ್‌ ಕಾನ್‌ಸ್ಟೇಬಲ್‌ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಿ. ಈ ಹುದ್ದೆಗಳು ನಾನ್‌ ಗೆಜೆಟೆಡ್‌ ಹುದ್ದೆಗಳಾಗಿರುತ್ತವೆ. ಹುದ್ದೆಗಳ ಸಂಖ್ಯೆ: 115 ವಿದ್ಯಾರ್ಹತೆ: ಅಂಗೀಕೃತ ಶಿಕ್ಷಣ ಸಂಸ್ಥೆಯಿಂದ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ಎಸ್‌ಎಸ್‌ಬಿಯ ವೆಬ್‌ಸೈಟ್ ನೋಡುವುದು. ವೇತನ: ₹ 25,500 – ₹ 81,110 ಮಾಸಿಕ ವೇತನ ವಯಸ್ಸು: ಆಗಸ್ಟ್‌ 2021ಕ್ಕೆ ಅನ್ವಯವಾಗುವಂತೆ 18ರಿಂದ 25 ವರ್ಷದೊಳಗಿನವರಾಗಿರಬೇಕು. ವಯೋಮಿತಿ:ಸಾಮಾನ್ಯ ಹಾಗೂ ಮೀಸಲಾತಿ ರಹಿತ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ( ಆಗಸ್ಟ್‌ 2021ಕ್ಕೆ ಅನ್ವಯವಾಗುವಂತೆ). ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ. ಆಯ್ಕೆ ಪ್ರಕ್ರಿಯೆ: ದೈಹಿಕ ಕ್ಷಮತೆ ಹಾಗೂ ಲಿಖಿತ ಪರೀಕ್ಷೆ ಮೂಲಕ ಅಂತಿಮ ನೇಮಕಾತಿ ನಡೆಯಲಿದೆ. ಅರ್ಜಿ ಶುಲ್ಕ:ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಸಾಮಾನ್ಯ ಹಾಗೂ ಇತರೆ ವರ್ಗಗಳ ಅಭ್ಯರ್ಥಿಗಳಿಗೆ ₹100 ಅರ್ಜಿ ಸಲ್ಲಿಸಲು ಕೊನೆಯ ದಿನ: 22-08-2021 ಹೆಚ್ಚಿನ ಮಾಹಿತಿಗೆ: ://... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.